Karnataka Dam Water Level: ಜು.19ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

|

Updated on: Jul 19, 2023 | 9:50 AM

ಕರ್ನಾಟಕದ ಜಲಾಶಯಗಳ ಜುಲೈ19ರ ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

Karnataka Dam Water Level: ಜು.19ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಮಲಪ್ರಭ ಡ್ಯಾಂ
Follow us on

ಈ ಬಾರಿ ಕರ್ನಾಟಕದಲ್ಲಿ ಮುಂಗಾರು ಮಳೆ (Karnataka Rain) ಪ್ರಮಾಣ ಕಡಿಮೆಯಾಗಿದ್ದು ವಾಡಿಕೆಯಷ್ಟು ಮಳೆಯಾಗುತ್ತಿಲ್ಲ. ಆದರೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು ನೆರೆಯ ರಾಜ್ಯ ಮಹರಾಷ್ಟ್ರದಲ್ಲಿ ಅಧಿಕ ಮಳೆಯಾಗುತ್ತಿದ್ದು, ಇದರಿಂದ ಕೃಷ್ಣ ನದಿಗೆ ಒಳ ಹರಿವು ಹೆಚ್ಚಾಗಿದೆ. ಕೃಷ್ಣೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದರೇ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಹೇರಳವಾಗಿ ದೊರೆಯುತ್ತದೆ. ರಾಜ್ಯದ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರೊಂದಿಗೆ ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Karnataka Dam Water Level) ಎಷ್ಟಿದೆ ಎಂಬುವುದನ್ನು ನೋಡೋಣ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.6 123.08 26.93 85.20 18270 561
ತುಂಗಭದ್ರಾ ಜಲಾಶಯ (Tungabhadra Dam) 497.71 105.79 10.95 96.84 11425 323
ಮಲಪ್ರಭಾ ಜಲಾಶಯ (Malaprabha Dam) 633.8 37.73 6.85 22.32 657 194
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 24.94 85.43 12229.00 1549
ಕಬಿನಿ ಜಲಾಶಯ (Kabini Dam) 696.13 19.52 11.95 18.59 1864 800
ಭದ್ರಾ ಜಲಾಶಯ (Bhadra Dam) 657.73 71.54 27.87 66.94 835 164
ಘಟಪ್ರಭಾ ಜಲಾಶಯ (Ghataprabha Dam) 662.91 51 8.10 29.95 8997 94
ಹೇಮಾವತಿ ಜಲಾಶಯ (Hemavathi Dam) 890.58 37.1 16.30 35.27 1732 200
ವರಾಹಿ ಜಲಾಶಯ (Varahi Dam) 594.36 31.1 5.02 13.12 2947 218.24
ಹಾರಂಗಿ ಜಲಾಶಯ (Harangi Dam)​​ 871.38 8.5 4.97 6.94 2811 50
ಸೂಫಾ (Supa Dam) 564.33 145.33 35.62 61.92 12529 4614.92

ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.  ಮಲಪ್ರಭಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಮಾರುತಿ ಮತ್ತು ರಾಮ ಮಂದಿರ ಮುಳುಗಡೆಯಾಗಿದೆ. ದೇವಸ್ಥಾನ ನದಿ ನೀರಿನಲ್ಲಿ ಬಹುತೇಕ ಜಲಾವೃತವಾಗಿದ್ದು, ಕಳಸ ಮಾತ್ರ ಕಾಣಿಸುತ್ತಿದೆ. ಇಂದು ಒಂದು ದಿನ ಮಳೆ ಆದರೇ ಇಡೀ ದೇವಸ್ಥಾನವೇ ಸಂಪೂರ್ಣ ಜಲಾವೃತ‌ವಾಗುತ್ತದೆ. ಕಳೆದ ಎರಡು ದಿನದಿಂದ ಕಣಕುಂಬಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಮಲಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 am, Wed, 19 July 23