ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಬಿಜೆಪಿ ಕೇಂದ್ರ ನಾಯಕರು ರಾಜ್ಯ ಪ್ರವಾಸದಲ್ಲಿದ್ದು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ (ಏ.8) ರಾತ್ರಿ ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ಆಗಮಿಸಿದ್ದರು. ಇಂದು (ಏ.9) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಲಿದ್ದಾರೆ. ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ಪಶ್ಚಿಮ ಘಟ್ಟಗಳಲ್ಲಿ ಅನೇಕ ಬುಡಕಟ್ಟು ಸಮುದಾಯ ವಾಸಿಸುತ್ತಿವೆ. ಪ್ರಕೃತಿಯಿಂದ ನಾವು ಎಷ್ಟು ಪಡೆದಿದ್ದೇವೋ ಅಷ್ಟು ನಾವು ವಾಪಸ್ ನೀಡಬೇಕು. ಇದನ್ನು ನಾವು ಆದಿವಾಸಿಗಳಲ್ಲಿ ಕಾಣಬಹುದಾಗಿದೆ. ಪ್ರಕೃತಿಯೊಂದಿಗೆ ಜೀವನ ಮಾಡುವುದನ್ನು ಆದಿವಾಸಿಗಳಿಂದ ನೋಡಿ ಕಲಿಯಬೇಕು. ನಮ್ಮ ಸಮಾಜ ಆದಿವಾಸಿಗಳಿಂದ ಈ ಗುಣವನ್ನು ಕಲಿಯಬೇಕು. ಮುಂದಿನ ದಿನಗಳಲ್ಲಿ ವನ್ಯಜೀವಿ ರಕ್ಷಣೆಗೆ ಮತ್ತಷ್ಟು ಕಾರ್ಯಗಳನ್ನು ಮಾಡೋಣ, ಅಭೂತಪೂರ್ವವಾದ ಸಾಧನೆ ಮಾಡೋಣ ಎಂದರು.
#WATCH | Karnataka: The Elephant Whispers documentary that won an Oscar also reflects our legacy of the wonderful relationship between nature and creatures. I urge you (foreign dignitaries) to take something from the life and tradition of our tribal society: PM Narendra Modi pic.twitter.com/PZFgN2kpQj
— ANI (@ANI) April 9, 2023
ಹುಲಿಗಳು ನಮ್ಮ ಸಂಕೃತಿಯ ಒಂದು ಭಾಗವಾಗಿವೆ. ದುರ್ಗಾ ದೇವಿ ಮತ್ತು ಸ್ವಾಮಿ ಅಯ್ಯಪ್ಪ ಸ್ವಾಮಿ ವಾಹನ ಹುಲಿ. ಭಾರತ ಜಗತ್ತಿನ ಅತಿ ದೊಡ್ಡ ಹುಲಿ ಸಂರಕ್ಷಣಾ ದೇಶ, ಹಾಗೇ ಆನೆ ಸಂರಕ್ಷಣಾ ದೇಶ. ಭಾರತದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಿದೆ. ಚಿರತೆಗಳ ಸಂತತಿ 4 ವರ್ಷಗಳಲ್ಲಿ ಶೇ 60 ರಷ್ಟು ಹೆಚ್ಚಿದೆ. ಈ ಎಲ್ಲ ಸಾಧನೆಗಳಿಗೆ ಜನರ ಸಹಕಾರ ಕಾರಣ. ಸಿಂಹಗಳಿದ್ದರೇ ನಾವು ಇದ್ದ ಹಾಗೆ, ನಾವು ಇದ್ದರೇ ಸಿಂಹಗಳ ಇದ್ದಂಗೆ ಎಂದು ಹೇಳಿದರು.
ಹುಲಿ ಸಂರಕ್ಷಣಾ ಸಫಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ವದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಭಾರತದಲ್ಲಿ ಇದ್ದು, ಅವುಗಳ ಸಂತತಿ ಶೇ 75ರಷ್ಟಿದೆ. ಭಾರತ ಮತ್ತು ಹುಲಿ ನಡುವಿನ ಸಂಬಂಧ ಬಹಳ ಪುರಾತನಾವದದ್ದು. ದೇಶದ ಅನೇಕ ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ಭಾರತದ ಅನೇಕ ಜನರು ಹುಲಿಯನ್ನು ಬಂಧು ಎಂದು ತಿಳಿದಿದ್ದಾರೆ.
ಮೈಸೂರು: 2022ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 3,167ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಿರುವುದು ಗೌರವದ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೈಸೂರು: ಮೈಸೂರಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾದ ಹುಲಿ ಯೋಜನೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹುಲಿ ಗಣತಿ ವರದಿಯನ್ನು ಪ್ರಧಾನಮಂತ್ರಿ ನರೇದ್ರ ಮೋದಿಯವರು ಬಿಡುಗಡೆ ಮಾಡಿದರು. 2022ರ ವರದಿ ಪ್ರಕಾರ ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 3,167.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ 2 ಗಂಟೆ ತಡವಾಗಿ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಪೋಲೀಸ್ ಕಮಿಷನರ್ ರಮೇಶ್ ಬಾನೋತ್, ಎಸ್ ಪಿ ಸೀಮಾ ಲಾಟ್ಕರ್ ಸ್ವಾಗತಿಸಿದ್ದಾರೆ. ಮೈಸೂರಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾದ ಹುಲಿ ಯೋಜನೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧಾರೆ.
#WATCH | Prime Minister Narendra Modi greets the crowd gathered to welcome him in Mudumalai pic.twitter.com/vsSn3mOeQv
— ANI (@ANI) April 9, 2023
ತಮಿಳುನಾಡು: ಪ್ರಧಾನಿ ನರೇಂದ್ರ ಮೋದಿಯವರು ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಬೆಳ್ಳಿ-ಬೊಮ್ಮ ದಂಪತಿಗೆ ಸನ್ಮಾನಿಸಿದರು. ಬೆಳ್ಳಿ-ಬೊಮ್ಮ ದಂಪತಿ, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷಚಿತ್ರದಲ್ಲಿ ನಟಿಸಿದ್ದರು. ಈ ಸಾಕ್ಷಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
#WATCH | Prime Minister Narendra Modi visits Theppakadu elephant camp pic.twitter.com/vjlrYqbwtG
— ANI (@ANI) April 9, 2023
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿಪ್ರಧಾನಿ ಮೋದಿ ಸಫಾರಿ ಅಂತ್ಯವಾಗಿದೆ. ಈಗ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದ ಬೆಳ್ಳಿ-ಬೊಮ್ಮನ್ ದಂಪತಿಗೆ ಭೇಟಿಯಾಗಿ, ಸನ್ಮಾನಿಸಲಿದ್ದಾರೆ. ಬಳಿಕ ದೇಶದ ವಿವಿಧ ಹುಲಿ ಯೋಜನೆಯ ನಿರ್ದೇಶಕರ ಜತೆ ಸಂವಾದ ನಡೆಸಲಿದ್ದಾರೆ.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸದ್ಯ ಬಂಡಿಪುರದ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ನಡೆಸುತ್ತಿದ್ದಾರೆ. ಬೆಳಿಗ್ಗೆ 10.20 ಕ್ಕೆ ಸಫಾರಿ ಮುಗಿಸಿಕೊಂಡು ಬಂಡಿಪುರದಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್ಗೆ ಆಗಮಿಸುತ್ತಾರೆ. ಬಳಿಕ ಹುಣಸೂರು ರಸ್ತೆ ಮೂಲಕ ಬೆಳಿಗ್ಗೆ 10.30 ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಅರ್ಧಗಂಟೆಗಳ ಕಾಲ ಯಾವುದೇ ಕಾರ್ಯಕ್ರಮ ಇರಲ್ಲ.
ನಂತರ ಬೆಳಿಗ್ಗೆ 11-12 ಗಂಟೆವರೆಗೆ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ. 12.05 ಕ್ಕೆ ಕೆಎಸ್ಓಯು ನಿಂದ ಹೆಲಿಪ್ಯಾಡ್ನತ್ತ 12.10 ಆಗಮಿಸುತ್ತಾರೆ. ಅಲ್ಲಿಂದ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳಸುತ್ತುತಾರೆ. ಮಂಡಹಳ್ಳಿಯಿಂ
ದೆಹಲಿಗೆ ಪ್ರಧಾನಿ ಮೋದಿ ಪ್ರಯಾಣ ಬೆಳಸುತ್ತಾರೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಫಾರಿ ಆರಂಭಿಸಿದ್ದಾರೆ. ಉದ್ಯಾನವನದಲ್ಲಿ 2 ಗಂಟೆಗಳ ಕಾಲ ಸುಮಾರು 20 ಕಿ.ಮೀ. ಸಂಚಾರ ನಡೆಸಲಿದ್ದಾರೆ.
PM Modi arrives at Bandipur Tiger Reserve in Karnataka
Read @ANI Story | https://t.co/rXMThnvbTx#PMModi #Karnataka #bandipurtigerreserve pic.twitter.com/0UHqV8URS5
— ANI Digital (@ani_digital) April 9, 2023
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಮುದುಮಲೈ ಅರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಹಾಗೇ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ-ಬೊಮ್ಮನ್ ದಂಪತಿಯನ್ನು ಭೇಟಿಯಾಗಿ ಸನ್ಮಾನಿಸಲಿದ್ದಾರೆ. ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರವಾಗಿದೆ. ಬೆಳ್ಳಿ-ಬೊಮ್ಮನ್ ದಂಪತಿ ಸಾಕ್ಷ್ಯಚಿತ್ರದ ಪಾತ್ರಧಾರಿಗಳಾಗಿದ್ದಾರೆ.
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಲ್ಲಿಂದ ರಸ್ತೆ ಮುಖಾಂತರ ಬಂಡೀಪುರ ಕ್ಯಾಂಪ್ಗೆ ಆಗಮಿಸಲಿದ್ದಾರೆ. ಈ ವೇಳೆ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಹಾಗೇ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ನಂತರ ಬಂಡೀಪುರ ಕ್ಯಾಂಪಸ್ನಿಂದ ಸುಮಾರು 2 ತಾಸು ಅರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 6.20ಕ್ಕೆ ರಾಡಿಸನ್ ಬ್ಲೂ ಹೋಟೆಲ್‌ನಿಂದ ರಸ್ತೆ ಮಾರ್ಗವಾಗಿ ಮಂಡಕಳ್ಳಿ ಏರ್ಪೋರ್ಟ್ಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ತೆರಳುತ್ತಿದ್ದಾರೆ.
ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು (Bandipur National Park) ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಇಂದು (ಏ.9) ಪ್ರಧಾನಿ ನರೇಂದ್ರ ಮೋದಿ(Narendra Modi) ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿ ಸಫಾರಿ ನಡೆಸಲಿದ್ದಾರೆ. ನಿನ್ನೆ (ಏ.8) ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿ, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ಆಗಮಿಸಿದ್ದರು.
Published On - 6:48 am, Sun, 9 April 23