ಕ್ರಿಕೆಟ್ ಬೆಟ್ಟಿಂಗ್ ದಂಧೆ: ವಿಜಯಪುರ, ರಾಯಚೂರಿನಲ್ಲಿ ಪೊಲೀಸ್ ಭರ್ಜರಿ ಬೇಟೆ

|

Updated on: Oct 04, 2020 | 4:16 PM

ವಿಜಯಪುರ: ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ಖಾದರ್​ ಇನಾಮದಾರ್​, ಶಾಬಾಜ್ ಇನಾಮದಾರ್, ಅಲ್ತಾಫ್ ಇನಾಮದಾರ್​ ಬಂಧಿತರು. ಇನ್ನು ಬಂಧಿತರಿಂದ 5000 ನಗದು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಓರ್ವ ಪರಾರಿಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನು ರಾಯಚೂರಿನ ಸದರ್​​ ಬಜಾರ್​​ ಪೊಲೀಸರು ಅಶೋಕ್​​ ಡಿಪೋ ಬಳಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಜಿಲಾನಿ, ಖದೀರ್​ ಪಾಷಾ, ಮೊಹಮ್ಮದ್​​​ ಖಾಲೀದ್, ಅನ್ಸರ್​ […]

ಕ್ರಿಕೆಟ್ ಬೆಟ್ಟಿಂಗ್ ದಂಧೆ: ವಿಜಯಪುರ, ರಾಯಚೂರಿನಲ್ಲಿ ಪೊಲೀಸ್ ಭರ್ಜರಿ ಬೇಟೆ
Follow us on

ವಿಜಯಪುರ: ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ಖಾದರ್​ ಇನಾಮದಾರ್​, ಶಾಬಾಜ್ ಇನಾಮದಾರ್, ಅಲ್ತಾಫ್ ಇನಾಮದಾರ್​ ಬಂಧಿತರು. ಇನ್ನು ಬಂಧಿತರಿಂದ 5000 ನಗದು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಓರ್ವ ಪರಾರಿಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನು ರಾಯಚೂರಿನ ಸದರ್​​ ಬಜಾರ್​​ ಪೊಲೀಸರು ಅಶೋಕ್​​ ಡಿಪೋ ಬಳಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಜಿಲಾನಿ, ಖದೀರ್​ ಪಾಷಾ, ಮೊಹಮ್ಮದ್​​​ ಖಾಲೀದ್, ಅನ್ಸರ್​ ಮೊಹಮ್ಮದ್ ಬಂಧಿತರು. ಬಂಧಿತರಿಂದ 10,300 ರೂಪಾಯಿ‌, ಮೊಬೈಲ್ ಜಪ್ತಿ ಮಾಡಲಾಗಿದೆ. ಸದರ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.