ಶಿವಮೊಗ್ಗ, ಸೆ.23: ಜಿಲ್ಲೆಯಲ್ಲಿ ಮುಂಗಾರು(Monsson) ಮಳೆ ಕೈಕೊಟ್ಟಿದೆ. ರೈತರು ಹಗಲು ರಾತ್ರಿ ಸಾಲ ಸೂಲ ಮಾಡಿ ಬೆಳೆದ ಮೆಕ್ಕೆಜೋಳ(Corn Crops) ಕೈಕೊಟ್ಟಿದೆ. ವಾಡಿಕೆ ಮಳೆಗಿಂತ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ(Karnataka Rain). ಇದರಿಂದ ಒಂದೆಡೆ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿವೆ. ಇನ್ನೂ ಕೆಲ ರೈತರು ಬೆಳೆ ಉಳಿಸಿಕೊಳ್ಳಲು ಭಗತೀಥ ಯತ್ನಕ್ಕೆ ಮುಂದಾಗಿದ್ದಾರೆ. ಶಿವಮೊಗ್ಗಾ ತಾಲೂಕಿನ ಶ್ರೀರಾಮ ಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 300 ರಿಂದ 400 ಎಕೆರೆ ಮೆಕ್ಕೆ ಜೋಳ ಬೆಳೆದಿದ್ದಾಳೆ. ಮಳೆ ಇಲ್ಲದೆ ಮೆಕ್ಕೆಜೋಳ ಆರಂಭದ ಹಂತದಲ್ಲಿ ಒಣಗಿ ಹೋಗಿದೆ.
ಎಕರೆಗೆ 25 ರಿಂದ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರ ಮಳೆ ಇಲ್ಲದೇ ಕಂಗಾಲಾಗಿದ್ಧಾನೆ. ಬೆಳೆ ಹಾನಿ ಆಗಿದ್ದರಿಂದ ರೈತನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಇನ್ನೂ ಕೆಲ ರೈತರು ಟ್ಯಾಂಟರ್ ಮೂಲಕ ಮೆಕ್ಕೆ ಜೋಳಕ್ಕೆ ನೀರು ಹಾಯಿಸುವ ಮೂಲಕ ಅದನ್ನು ಬಚಾವ್ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಟಿವಿ9 ಮುಂದೆ ಬೆಳೆ ಹಾನಿಗೊಳಗಾದ ರೈತರು ತಮ್ಮ ನೋವು ಬೇಸರ ಹೊರಹಾಕಿದ್ದಾರೆ.
ಧಾರವಾಡದಲ್ಲಿ ಜಿಲ್ಲೆಯಲ್ಲಿ ನೀರಾವರಿ ಅವಲಂಬಿಸಿ ಶೇಂಗಾ ಬೆಳೆದಿರುವ ರೈತರ ಪರಿಸ್ಥಿತಿ ಹೇಳತೀರದ್ದು ಧಾರವಾಡ ಜಿಲ್ಲೆಯಲ್ಲಿ ಈ ಸಲ ಮಳೆ ಕೈಕೊಟ್ಟಿದೆ. ಆದರೆ ಅನೇಕ ರೈತರು ಬೋರ್ವೆಲ್ ಮೇಲೆ ಅವಲಂಬಿತರಾಗಿ ಶೇಂಗಾ ಬೆಳೆದಿದ್ದಾರೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿ ಪೋಷಣೆ ಕೂಡ ಮಾಡಿದ್ದರು. ಆದರೆ ಈಗ ಆ ಶೇಂಗಾ ಬೆಳೆಯೇ ನಿರೀಕ್ಷಿತ ಇಳುವರಿ ಕೊಡುವ ಲಕ್ಷಣ ಕಾಣುತ್ತಿಲ್ಲ. ಶೇಂಗಾ ಕಾಯಿ ಕಟ್ಟುವ ಹಂತದಲ್ಲಿಯೇ ಒಣಗೋಕೆ ಶುರುವಾಗಿದೆ. ಹೀಗಾಗಿ ಈಗ ಶೇಂಗಾ ಬೆಳೆಯಂತೂ ಕೈಗೆ ಬರೋದಿಲ್ಲ. ಬದಲಿಗೆ ಇದನ್ನೆಲ್ಲ ಕಿತ್ತು ದನ ಕರುಗಳಿಗೆ ಮೇವಿನ ರೂಪದಲ್ಲಾದರೂ ಬಳಸಿಕೊಳ್ಳೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಬರದ ಛಾಯೆ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ: ಬೆಳೆದ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ
ಇನ್ನು ಪ್ರತಿವರ್ಷ ಗಣೇಶ ಚತುರ್ಥಿ ಹೊತ್ತಿಗೆ ಶೇಂಗಾ ಬೆಳೆ ಕೈಗೆ ಬರುತ್ತಿತ್ತು. ಶೇಂಗಾ ಕಿತ್ತು ಎಷ್ಟೋ ಹಸಿ ಶೇಂಗಾವನ್ನೇ ಮಾರ್ಕೆಟ್ ನಲ್ಲಿ ಮಾರಿ, ಅದರಿಂದ ಬಂದ ಹಣದಲ್ಲಿಯೇ ಬಹುತೇಕ ರೈತರು ಭರ್ಜರಿ ಹಬ್ಬ ಮಾಡುತ್ತಿದ್ದರು. ಆದರೆ ಈ ವರ್ಷ ಮುಂಗಾರು ಮಳೆ ವಿಳಂಬವಾಗಿ ಪ್ರವೇಶ ಮಾಡಿದ್ದರಿಂದ ಬಿತ್ತನೆಯೂ ತಡವಾಗಿ ಆಗಿತ್ತು. ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೋರ್ವೆಲ್ ಮೂಲಕ ನೀರು ಹಾಯಿಸಿ ಕೃಷಿ ಮಾಡಿದ್ದರು. ಆದರೆ ಇಳುವರಿ ಕೈಗೆ ಬರೋದು ತಡವಾಗೋ ಹೊತ್ತಿಗೆ ಶೇಂಗಾ ಕಾಳಿನ ಬೆಳವಣಿಗೆಯೂ ಕುಂಠಿತವಾಗಿ ಇದೀಗ ಅದೂ ಕೂಡ ಒಣಗೋಕೆ ಶುರುವಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣ ಜೊಳ್ಳು ಕಾಳುಗಳೇ ಹೆಚ್ಚಾಗಿದ್ದರಿಂದ ರೈತರಿಗೆ ಯಾವುದೇ ಪ್ರಯೋಜನವಾಗೋದಿಲ್ಲ. ಹೀಗಾಗಿ ಈ ಸಲ ಗಣೇಶ ಹಬ್ಬಕ್ಕೆ ನಮಗೆ ಸಂಭ್ರಮ ಇಲ್ಲ ಅನ್ನೋದು ರೈತರ ಅಳಲು.
ಧಾರವಾಡ ಜಿಲ್ಲೆಯಲ್ಲಿಯೂ ನಾಲ್ಕು ತಾಲೂಕುಗಳನ್ನು ಬರ ಪೀಡಿತ ಅಂತಾ ಘೋಷಣೆ ಮಾಡಿದ್ದಾರೆ. ಆದರೆ ಬರ ಪರಿಹಾರ ಬರೋದು ಮಾತ್ರ ಸದ್ಯಕ್ಕೆ ಇಲ್ಲ. ಹೀಗಾಗಿ ಹಬ್ಬವನ್ನೂ ಈಗ ರೈತರು ಸಾಲ ಮಾಡಿಯೇ ಮಾಡುವಂತಹ ಸ್ಥಿತಿ ಬಂದಿದೆ. ಆದರೆ ಸಾಲ ಮಾಡಿ ಹಬ್ಬವನ್ನು ಮಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದು ರೈತರ ಪ್ರಶ್ನೆಯಾಗಿದೆ. ಕಳೆದ ವರ್ಷ ಅತಿವೃಷ್ಠಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಅತಿವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು ವಿಪರ್ಯಾಸವೇ ಸರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ