Tv9 Facebook Live | ಬಿಬಿಎಂಪಿ ಹೊಸ ಪಾರ್ಕಿಂಗ್ ನೀತಿ; ವರವೋ? ಬರೆಯೋ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 12, 2021 | 7:55 PM

ರಸ್ತೆಗಳಲ್ಲಿ ಕಾರುಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿರುತ್ತಾರೆ. ಬೆಂಗಳೂರಿನಲ್ಲಿ ಟ್ರಾಫಿಕ್​ ಕಡಿಮೆಯಾಗಬೇಕೆಂದರೆ, ಖಾಸಗಿ ವಾಹನಗಳನ್ನು ನಿಯಂತ್ರಿಸಬೇಕು. ಫ್ರೀ ಪಾರ್ಕಿಂಗ್ ಸೌಲಭ್ಯ ನೀಡಿದರೆ ವಾಹನ ಖರೀದಿಗೆ ಉತ್ತೇಜನ ನೀಡಿದಂತಾಗುತ್ತದೆ.

Tv9 Facebook Live |  ಬಿಬಿಎಂಪಿ ಹೊಸ ಪಾರ್ಕಿಂಗ್ ನೀತಿ; ವರವೋ? ಬರೆಯೋ?
ಆ್ಯಂಕರ್ ಸೌಮ್ಯಾ ಹೆಗಡೆ
Follow us on

ಬೆಂಗಳೂರು: ಪಾರ್ಕಿಂಗ್ ಶುಲ್ಕ ಹಾಕಲು ಬಿಬಿಎಂಪಿಗೆ ಅಧಿಕಾರ ನೀಡುವ ಸರಕಾರಿ ಆದೇಶ ಹೊರಬಿದ್ದಿದೆ. ಬಿಬಿಎಂಪಿ ನಮ್ಮೆಲ್ಲರಿಂದ ಪಾರ್ಕಿಂಗ್ ಶುಲ್ಕವನ್ನು ಪಡೆಯುವುದು ಗ್ಯಾರೆಂಟಿ. ಈ ನೀತಿಯನ್ನು ಜಾರಿಗೆ ತರುವುದು ಹೇಗೆ? ಇದರಿಂದ ಬಿಬಿಎಂಪಿಗೆ ಹೆಚ್ಚಿನ ಆದಾಯ ಸಿಗುತ್ತಾ? ಎಂಬುದರ ಕುರಿತಾಗಿ ಟಿವಿ9 ಡಿಜಿಟಲ್​ ಫೇಸ್​ಬುಕ್ ಲೈವ್​ ಸಂವಾದ ಆಯೋಜಿಸಿತ್ತು. ಚರ್ಚೆಯಲ್ಲಿ ನಗರ ಯೋಜನೆ ಮತ್ತು ಟ್ರಾಫಿಕ್​ ತಜ್ಞ ಶ್ರೀಹರಿ, ಜನಾಗ್ರಹದ ಪ್ರತಿನಿಧಿ ಸ್ವಪ್ನಾ ಕರೀಮ್ ಹಾಗೂ ಹಸಿರು ಉಸಿರು ಸಂಘಟನೆಯ ಸಂಘಟಕರಾದ ವಿನಯ್ ಶ್ರೀನಿವಾಸ್ ಪಾಲ್ಗೊಂಡಿದ್ದರು. ಆ್ಯಂಕರ್​ ಸೌಮ್ಯಾ ಹೆಗಡೆ ಸಂವಾದ ನಡೆಸಿಕೊಟ್ಟರು.

ಟ್ರಾಫಿಕ್​ ತಜ್ಞ ಶ್ರೀಹರಿ ಮಾತನಾಡಿ, ವಾಹನಗಳನ್ನು ಬೆಳೆಯಲು ಬಿಟ್ಟಿದ್ದೇ ಮೊದಲ ತಪ್ಪು. ಹೆಚ್ಚುಹೆಚ್ಚು ಮೌಲ್ಯ ಕೊಟ್ಟು ವಾಹನ ಪಡೆದುಕೊಳ್ಳುತ್ತಿದ್ದಾರೆ. ಮೆಟ್ರೋ ಸ್ಟೇಷನ್​ಗಳಲ್ಲಿ ಪಾರ್ಕಿಂಗ್​ ಚಾರ್ಜ್​ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ಪಾರ್ಕಿಂಗ್​ ಜಾಗವನ್ನು ಯಾರೂ ಬಳಸುತ್ತಿಲ್ಲ. ಇದಕ್ಕೆ ಉತ್ತಮ ಪರ್ಯಾಯವಾಗಿ ಅಂಡರ್​​ಗ್ರೌಂಡ್​ ಪಾರ್ಕಿಂಗ್​ ವ್ಯವಸ್ಥೆಯನ್ನು ಕಲ್ಪಿಸುವುದು ಉತ್ತಮ ಸೂಚನೆ. ಶುಲ್ಕ ವಿಧಿಸುವುದರ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ. ನೆಲ ಮಹಡಿಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆಯನ್ನು ಕಲ್ಪಿಸುವುದು ಉತ್ತಮ ಮಾರ್ಗ. ಈ ರೀತಿಯ ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಿ. ಸ್ವಂತ ವಾಹನಗಳಿಗೆ ಅವರೇ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ರಸ್ತೆಯಲ್ಲಿ ಕಾರ್​ ನಿಲ್ಲಿಸುವ ಬದಲು ಮನೆಯನ್ನು ಕಟ್ಟಲು ಲೈಸನ್ಸ್​ ಕೊಡುವಾಗಲೇ ಪಾರ್ಕಿಂಗ್ ಜಾಗಕ್ಕೂ ನೆಲ ಮಹಡಿಯಲ್ಲಿ ಜಾಗ ಮೀಸಲು ಮಾಡಿ ಲೈಸೆನ್ಸ್​ ಕೊಡಬೇಕು. ಆಗ ಮಾತ್ರ ವಾಹನಗಳನ್ನು ಮನೆಯ ಗೇಟ್​ ಬಳಿಯೋ ಅಥವಾ ರಸ್ತೆಯ ಎದುರು ನಿಲ್ಲಿಸುವುದು ತಪ್ಪುತ್ತದೆ ಎಂದು ಅಭಿಪ್ರಾಯ ಪಟ್ಟರು.

ಜನಾಗ್ರಹದ ಪ್ರತಿನಿಧಿ ಸ್ವಪ್ನಾ ಕರೀಮ್ ಮಾತನಾಡಿ, ಎಲ್ಲರಿಗೂ ಫ್ರೀ ಪಾರ್ಕಿಂಗ್ ನೀಡಲು ಸಾಧ್ಯವಿಲ್ಲ. ಒಂದೇ ನೀತಿ ಇರಬೇಕು. ಈ ಪಾಲಿಸಿ ಬಂದಿರುವುದು ಒಂದು ಒಳ್ಳೆಯ ಮಾರ್ಗ. ಹೊಸ ನೀತಿಯನ್ನು ತರುವಾಗ ಬಡವರು, ಮಧ್ಯಮವರ್ಗದವರನ್ನೂ ಗಮನದಲ್ಲಿ ಇಟ್ಟು ದರವನ್ನು ನಿಗದಿ ಪಡಿಸಲಾಗಿದೆ. ರಸ್ತೆ ಸರಿಪಡಿಸುವಾಗ ಸೀಮಿತವಾಗಿ ಮುಗಿಸುವ ಯೋಜನೆ ಬೇಕು. ಇದರಿಂದ ಬಸ್ಸಿನಲ್ಲಿ ಓಡಾಡುವವರಿಗೆ ಸಮಯಕ್ಕೆ ಸರಿಯಾಗಿ ಸ್ಥಳ ತಲುಪಲು ಸಾಧ್ಯ. ಹೀಗಿದ್ದಾಗ ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಲು ಪ್ರಾರಂಭಿಸುತ್ತಾರೆ. ಆಗ ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವುದು ಕಡಿಮೆಯಾಗುತ್ತದೆ ಎಂದು ಹೇಳಿದರು.

ಹಸಿರು ಉಸಿರು ಸಂಘಟನೆಯ ವಿನಯ್ ಶ್ರೀನಿವಾಸ್ ಮಾತನಾಡಿ, ರಸ್ತೆಗಳಲ್ಲಿ ಕಾರುಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿರುತ್ತಾರೆ. ಬೆಂಗಳೂರಿನಲ್ಲಿ ಟ್ರಾಫಿಕ್​ ಕಡಿಮೆಯಾಗಬೇಕೆಂದರೆ, ಖಾಸಗಿ ವಾಹನಗಳನ್ನು ನಿಯಂತ್ರಿಸಬೇಕು. ಜನಸಂಖ್ಯೆಗಿಂತ ವಾಹನ ಸಂಖ್ಯೆ ಜಾಸ್ತಿಯಾಗುತ್ತಿದೆ. ಫ್ರೀ ಪಾರ್ಕಿಂಗ್ ನೀಡಿದರೆ ಅದು ಉತ್ತೇಜನ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಾರ್ಕಿಂಗ್ ನೀತಿ ತರುವುದು ಮುಖ್ಯ. ಸರ್ಕಾರ ಬಸ್​ ಸೌಲಭ್ಯವನ್ನು ಇನ್ನೂ ಹೆಚ್ಚಿಸುವುದು ಉತ್ತಮ. ದ್ವಿಚಕ್ರವಾಹನಗಳಿಗೆ ಕಡಿಮೆ ಶುಲ್ಕವಿರಬೇಕು. ಕಾರುಗಳು ಜಾಸ್ತಿ ಜಾಗವನ್ನು ತಿನ್ನುತ್ತದೆ ಆದ್ದರಿಂದ ಅವಕ್ಕೆ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಟ್ಯಾಕ್ಸಿಗಳಿಗೆ ಹೆಚ್ಚಿಗೆ ದುಡಿಮೆ ಇಲ್ಲ ಅವುಗಳಿಗೆ ವಿನಾಯತಿ ನೀಡಬೇಕು. ಆದರೆ ಖಾಸಗಿ ವಾಹನಗಳು ನಿಗದಿತ ಶುಲ್ಕ ನೀಡಲೇಬೇಕು ಎಂದು ಮಾತನಾಡಿದರು.

Published On - 7:12 pm, Fri, 12 February 21