ಉಡುಪಿ: ಕರಾವಳಿಯ ತುಳುನಾಡು ಭಾಗದ ಜನರ ಆಚರಣೆ ವಿಶಿಷ್ಟ ವಿಭಿನ್ನವಾಗಿರುತ್ತದೆ. ಕೂಡು ಕುಟುಂಬಗಳಲ್ಲಿ ನಡೆಯುತ್ತಿದ್ದ ಬೋಗ ತಂಬಿಲ ಈ ಬಾರಿಯ ಲಾಕ್ಡೌನ್ನಿಂದಾಗಿ ನಡೆಯುತ್ತಿಲ್ಲ. ಆದರೆ ಇದರಿಂದ ಏನಾದರೂ ತೊಂದರೆ ಉಂಟಾಗಬಹುದು ಎಂಬುದು ಕರಾವಳಿ ಜನತೆಗೆ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ.
ಹಳ್ಳಿಗಳಲ್ಲಿ ಜನಸಾಮಾನ್ಯರು ಅವರ ನಂಬಿಕೆ, ಆಚರಣೆ ಬಗ್ಗೆ ಒಂದು ರೀತಿ ಮಾತನಾಡಿದರೆ, ಜಾನಪದ ವಿದ್ವಾಂಸರು ಇನ್ನೊಂದು ಬಗೆಯಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಪರಿಹಾರ ಸಿಗದೇ ಸಾಕಷ್ಟು ತುಳುನಾಡ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಾಡಿನಾದ್ಯಂತ ವಕ್ಕರಿಸಿದ ಮಹಾಮಾರಿ ಕೊರೊನಾದಿಂದಾಗಿ ಕರಾವಳಿಯಲ್ಲಿ ನಡೆಯಬೇಕಿದ್ದ ನೇಮೋತ್ಸವ, ಇನ್ನಿತರ ದೇವತಾ ಕಾರ್ಯಕ್ರಮಗಳು ನಡೆದಿಲ್ಲ. ಇದರಿಂದ ಏನಾದರು ಜನರಿಗೆ ತೊಂದರೆ ಆಗಬಹುದೇ ಎಂಬುದು ಉಡುಪಿ ಜಿಲ್ಲೆಯ ಜನರ ಪ್ರಶ್ನೆ.
ದೇವರಿಗೆ ಸೇವೆ ಸಲ್ಲಿಸದಿದ್ದರೆ ಏನಾಗುತ್ತೆ?
ಮುಖ್ಯವಾಗಿ ಕೂಡು ಕುಟುಂಬಗಳಲ್ಲಿ ನಡೆಯುತ್ತಿದ್ದಂತಹ ಬೋಗ ತಂಬಿಲ, ಗುಡ್ಡದ ಭೂತ, ಸೇವೆಗಳು ನಡೆಸಲು ಅಸಾಧ್ಯವಾಗಿದೆ. ಕೆಲವೊಂದು ಕುಟುಂಬ ತಮಗೆ ಅನುಕೂಲಕರವಾಗಿ ಬೆಳಗ್ಗೆ ಹೊತ್ತು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಆದರೆ ಇದರಿಂದ ದೈವ-ದೇವರುಗಳ ಸಂತೃಪ್ತಿ ಆಗುವರೇ ಎಂಬ ಒಂದು ಪ್ರಶ್ನೆ ಜನರಲ್ಲಿ ಮೂಡಿದೆ. ಹೌದು ವರ್ಷಕ್ಕೊಮ್ಮೆ ಕೂಡು ಕುಟುಂಬದಲ್ಲಿ ನಡೆಯುತ್ತಿದ್ದ ಈ ಸೇವೆಯಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ಹೊರರಾಜ್ಯಕ್ಕೆ ತೆರಳಿದ ಎಲ್ಲಾ ಕುಟುಂಬಸ್ಥರು ಸೇರುತ್ತಿದ್ದರು.
ತಮ್ಮ ಮನೆದೇವರ ಆರಾಧನೆ ಮಾಡುವ ಒಂದು ಕುಟುಂಬದ ಮನೆಯಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೈವ-ದೇವರುಗಳ ಪೂಜೆ ಪುನಸ್ಕಾರ ಮುಗಿಸಿ ರಾತ್ರಿ ದೇವರ ಪ್ರಸಾದ ಸ್ವೀಕರಿಸಿ ಮನೆಗೆ ತೆರಳುವಾಗ ಬಹಳಹೊತ್ತು ಆಗುತ್ತಿತ್ತು. ಆದರೆ ಈ ಬಾರಿ ಲಾಕ್ಡೌನ್ ಹಿನ್ನೆಲೆಯಲ್ಲಿ 7 ಗಂಟೆಯ ನಂತರ ತಿರುಗಾಟಕ್ಕೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬೆಳಗ್ಗೆ ಮಾಡಿ ಮುಗಿಸುತ್ತಿದ್ದಾರೆ.
ಪ್ರತಿ ವರ್ಷ ನಡೆಯುವ ಈ ಸೇವೆಯಲ್ಲಿ ದೂರದೂರದಿಂದ ವಾಸವಾಗಿರುವ ಕುಟುಂಬದ ಸದಸ್ಯರನ್ನು ಒಂದುಗೂಡಿಸಲು ಈ ಸೇವೆಗಳು ನಡೆಯುತ್ತಿದ್ದವು. ದೇವರ ಬಳಿ ಕುಟುಂಬಸ್ಥರು ಒಂದಾಗಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮುಂಬೈ ರಾಜ್ಯದಲ್ಲಿ ನೆಲೆಸಿರುವ ತುಳುವರು ಹೆಚ್ಚಾಗಿ ಭಾಗವಹಿಸಿದ್ದರು. ಈ ಬಾರಿ ಜನರು ಈ ಸೇವೆಯನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನಾವು ಈ ಸೇವೆಯನ್ನು ನೀಡದಿದ್ದರೆ ನಮಗೆ ಏನಾದರೂ ತೊಂದರೆ ಆಗಬಹುದೇ ಎಂಬುದು ಒಂದು ಕಡೆ ಆದರೆ ಇಂತಹ ದೇವತಾ ಕಾರ್ಯಕ್ರಮಗಳು ರಾತ್ರಿಹೊತ್ತು ನಡೆಯುವುದರಿಂದ ಈ ಕಾರ್ಯಕ್ರಮಕ್ಕೆ ಹೋಗಲು ಪೊಲೀಸರ ಲಾಠಿ ಏಟಿಗೆ ಹಿಂಜರಿಯುತ್ತಿದ್ದಾರೆ.
ತುಳುನಾಡಲ್ಲಿ ನಡೆಯುತ್ತಿದ್ದ ಆಚರಣೆಯಲ್ಲಿ ಹಿಂದೆ ನಂಬಿಕೆ ಭಕ್ತಿ ಎಲ್ಲವೂ ಕೂಡಿದೆ. ಆದರೆ ಈ ಬಾರಿ ನಾಡಿನಾದ್ಯಂತ ಬಂದಿರುವ ಮಹಾಮಾರಿ ಕೊರೊನಾದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಏನೇ ಆಗಲಿ ತಾವು ನಂಬಿಕೊಂಡು ಬಂದಂತಹ ದೈವ-ದೇವರುಗಳ ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಬದುಕ್ತಿರೂ ಈ ಜನರ ನಂಬಿಕೆ ಸುಳ್ಳಾಗದಿರಲಿ.