
ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಹತ್ತಿಕ್ಕಲು ಲಾಕ್‌ಡೌನ್ ಘೋಷಿಸಲಾಗಿದೆ. ಆದ್ರೂ ಕೆಲ ಕಿಡಿಗೇಡಿಗಳು ಲಾಕ್‌ಡೌನ್ ಉಲ್ಲಂಘಿಸಿ ಬೈಕ್‌ಗಳೊಡನೆ ರಸ್ತೆಗಿಳಿದಿದ್ದಾರೆ. ಹೀಗೆ ಸರ್ಕಾರದ ಆದೇಶ ಮೀರಿ ರಸ್ತೆಗಿಳಿದ ತಿಳಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಲಾಕ್‌ಡೌನ್ ಆದೇಶ ಮೀರಿ ಅನಗತ್ಯವಾಗಿ ರಸ್ತೆಗಿಳಿದ ಕಿಡಿಗೇಡಿಗಳ ವಾಹನಗಳನ್ನ ಬಸವೇಶ್ವರನಗರ ಸೇರಿದಂತೆ ಹಲವೆಡೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಮೂಲಕ ಲಾಕ್‌ಡೌನ್ ಉಲ್ಲಂಘಿಸಿದವರ ವಾಹನಗಳನ್ನ ಈಗ ಪೊಲೀಸುರು ಲಾಕ್ ಮಾಡಿದ್ದಾರೆ.