ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದವನ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಬಾಬುಲಾಲ್ ಜೈನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ವಿ.ವಿ.ಪುರಂನ ಮನೆ, ಕಚೇರಿ ಸೇರಿದಂತೆ ಕೆಲ ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಬುಲಾಲ್ ಜೈನ್ ಶೇಕಡಾ 10, 20ರ ಬಡ್ಡಿ ಲೆಕ್ಕದಲ್ಲಿ ಹಣ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಸ್ತಿ ಪತ್ರ ಇರಿಸಿಕೊಂಡು ಮೀಟರ್​ ಬಡ್ಡಿಗೆ ಸಾಲ ನೀಡುತ್ತಿದ್ದರಂತೆ ಹೀಗಾಗಿ ಮಾಹಿತಿ ತಿಳಿದು ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಬಂಡಲ್ […]

ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದವನ ಮನೆ ಮೇಲೆ ಸಿಸಿಬಿ ದಾಳಿ
CCB ಕಚೇರಿ
ಆಯೇಷಾ ಬಾನು Edited By:

Updated on: Jul 24, 2020 | 3:45 PM

ಬೆಂಗಳೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಬಾಬುಲಾಲ್ ಜೈನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ವಿ.ವಿ.ಪುರಂನ ಮನೆ, ಕಚೇರಿ ಸೇರಿದಂತೆ ಕೆಲ ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಾಬುಲಾಲ್ ಜೈನ್ ಶೇಕಡಾ 10, 20ರ ಬಡ್ಡಿ ಲೆಕ್ಕದಲ್ಲಿ ಹಣ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಸ್ತಿ ಪತ್ರ ಇರಿಸಿಕೊಂಡು ಮೀಟರ್​ ಬಡ್ಡಿಗೆ ಸಾಲ ನೀಡುತ್ತಿದ್ದರಂತೆ ಹೀಗಾಗಿ ಮಾಹಿತಿ ತಿಳಿದು ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಬಂಡಲ್ ಗಟ್ಟಲೇ ಚೆಕ್, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

Published On - 7:56 am, Thu, 23 July 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us