ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಮತ್ತಷ್ಟು ವೆಬ್ಸೈಟ್ಗಳ ಹ್ಯಾಕ್ಗೆ ಪ್ಲ್ಯಾನ್ ಮಾಡಿದ್ದೇ ಎಂದು ಕೃತ್ಯದ ವಿವರಣೆ ನೀಡಿದ್ದಾನೆ.
ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್ಕೇಸ್ನಲ್ಲಿ ಬಂಧಿಸಿದ್ದರು. ತನಿಖೆ ವೇಳೆ ಆತ ಹಲವು ವೆಬ್ ಸೈಟ್ ಹ್ಯಾಕಿಂಗ್ ಮಾಡುತ್ತಿದ್ದ ವಿಚಾರ ಬಯಲಾಗಿತ್ತು. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಸಹ ಶ್ರೀಕಿ ಹ್ಯಾಕ್ ಮಾಡ್ತಿದ್ದ. ಕೇಸ್ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಈಗ ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಯಲಾಗಿದೆ. ಈತ ಅಂತಾರಾಷ್ಟ್ರೀಯ ವೆಬ್ಸೈಟ್, ಪೋಕರ್ ಗೇಮ್ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲದೆ ಶ್ರೀಕಿ ಬಳಿ ಇದ್ದ ಸುಮಾರು ₹9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಇನ್ನು ಸುನೀಷ್ ಶೆಟ್ಟಿ, ಪ್ರಸಿದ್ ಶೆಟ್ಟಿ, ಸುಜಯ ಶ್ರೀಕಿ ಮುಖಾಂತರ ಹ್ಯಾಕ್ ಮಾಡಿಸುತಿದ್ರು. ಬಳಿಕ ಬಿಟ್ ಕಾಯಿನ್ ಟ್ರೇಡರ್ಸ್ಗೆ ಮಾರಾಟ ಮಾಡುತ್ತಿದ್ರು. ಮಾರಟದಿಂದ ಬಂದ ಹಣ ಹಾಗೂ ಹವಾಲ ಹಣ ಪಡೆದು ವಿದೇಶದಿಂದ ಗಾಂಜಾ ತರಿಸಿಕೊಂಡು ಮೋಜು ಮಸ್ತಿ, ಐಶಾರಾಮಿ ಜೀವನ ನಡೆಸುತ್ತಿದ್ರು.
ಸಿಸಿಬಿ ವಿಚಾರಣೆ ವೇಳೆ ಬಯಲಾಯ್ತು ಹ್ಯಾ”ಕಿಂಗ್” ಶ್ರೀಕಿಯ ಮತ್ತೊಂದು ಕೋಡ್..