ವಿದ್ಯಾರ್ಥಿನಿ ಕುಟುಂಬದ ನಾಲ್ವರಿಗೆ ಕೊರೊನಾ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಭೀತಿ ಶುರು!

| Updated By:

Updated on: Jun 20, 2020 | 1:10 PM

ಬೆಂಗಳೂರು: ಜಯನಗರದ ಬಿಇಎಸ್‌ ಕಾಲೇಜಿನಲ್ಲಿ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಈ ವಿದ್ಯಾರ್ಥಿನಿಯೊಂದಿಗೆ ಒಂದೇ ಹಾಲ್‌ನಲ್ಲಿ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳು, ಆಕೆಯ ಸ್ನೇಹಿತರಿಗೆ ಮತ್ತು ಪರೀಕ್ಷಾ ಸಿಬ್ಬಂದಿಗೆ ಡವ ಡವ ಶುರುವಾಗಿದೆ. ವಿದ್ಯಾರ್ಥಿನಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ವಿದ್ಯಾರ್ಥಿನಿಯ ಗಂಟಲು ದ್ರವ ಪರೀಕ್ಷೆಯ ವರದಿ ಇನ್ನೂ ಬರಬೇಕಿತ್ತು. ಆದ್ರೂ ಈ ವಿದ್ಯಾರ್ಥಿನಿ ಅಧಿಕಾರಿಗಳ ಕಣ್ತಪ್ಪಿಸಿ ಪರೀಕ್ಷೆಗೆ ಹಾಜರಾಗಿದ್ದರು. ಈದೀಗ ಆ ವಿದ್ಯಾರ್ಥಿನಿಯ […]

ವಿದ್ಯಾರ್ಥಿನಿ ಕುಟುಂಬದ ನಾಲ್ವರಿಗೆ ಕೊರೊನಾ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಭೀತಿ ಶುರು!
Follow us on

ಬೆಂಗಳೂರು: ಜಯನಗರದ ಬಿಇಎಸ್‌ ಕಾಲೇಜಿನಲ್ಲಿ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಈ ವಿದ್ಯಾರ್ಥಿನಿಯೊಂದಿಗೆ ಒಂದೇ ಹಾಲ್‌ನಲ್ಲಿ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳು, ಆಕೆಯ ಸ್ನೇಹಿತರಿಗೆ ಮತ್ತು ಪರೀಕ್ಷಾ ಸಿಬ್ಬಂದಿಗೆ ಡವ ಡವ ಶುರುವಾಗಿದೆ.

ವಿದ್ಯಾರ್ಥಿನಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ವಿದ್ಯಾರ್ಥಿನಿಯ ಗಂಟಲು ದ್ರವ ಪರೀಕ್ಷೆಯ ವರದಿ ಇನ್ನೂ ಬರಬೇಕಿತ್ತು. ಆದ್ರೂ ಈ ವಿದ್ಯಾರ್ಥಿನಿ ಅಧಿಕಾರಿಗಳ ಕಣ್ತಪ್ಪಿಸಿ ಪರೀಕ್ಷೆಗೆ ಹಾಜರಾಗಿದ್ದರು. ಈದೀಗ ಆ ವಿದ್ಯಾರ್ಥಿನಿಯ ಕುಟುಂಬದ ನಾಲ್ವರಿಗೆ ಕೋವಿಡ್‌-19 ಸೋಂಕಿರೋದು ಕನ್ಫರ್ಮ್​‌ ಆಗಿದ್ದು, ಸಂಪರ್ಕದಲ್ಲಿದ್ದವರಿಗೆ ಸೋಂಕಿನ ಭೀತಿ ಎದುರಾಗಿದೆ.

Published On - 1:09 pm, Sat, 20 June 20