ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಗೋಏರ್ ಪೈಲಟ್ ವಜಾ

ಪ್ರಧಾನಿ ಮೂರ್ಖ. ನೀವು ನನ್ನನ್ನೂ ಅದೇ ರೀತಿ ಕರೆಯಬಹುದು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ನಾನು ಪ್ರಧಾನಿ ಅಲ್ಲ. ಆದರೆ ಪ್ರಧಾನಿ ಮೂರ್ಖ ಎಂದು ಗುರುವಾರ ಟ್ವೀಟ್ ಮಾಡಿದ್ದ ಪೈಲಟ್, ಆನಂತರ ಟ್ವೀಟ್ ಡಿಲೀಟ್ ಮಾಡಿ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಗೋಏರ್ ಪೈಲಟ್ ವಜಾ
ಗೋಏರ್ (ಸಂಗ್ರಹ ಚಿತ್ರ)
ರಶ್ಮಿ ಕಲ್ಲಕಟ್ಟ

Updated on: Jan 10, 2021 | 3:01 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಗೋಏರ್ ವಿಮಾನಯಾನ ಸಂಸ್ಥೆಯ ಹಿರಿಯ ಪೈಲಟ್​ನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಪ್ರಧಾನಿ ಮೂರ್ಖ. ನೀವು ನನ್ನನ್ನೂ ಅದೇ ರೀತಿ ಕರೆಯಬಹುದು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ನಾನು ಪ್ರಧಾನಿ ಅಲ್ಲ. ಆದರೆ ಪ್ರಧಾನಿ ಮೂರ್ಖ ಎಂದು ಗುರುವಾರ ಟ್ವೀಟ್ ಮಾಡಿದ್ದ ಪೈಲಟ್, ಆನಂತರ ಟ್ವೀಟ್ ಡಿಲೀಟ್ ಮಾಡಿ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದ್ದರು.

ಇದಾದನಂತರ ‘ಪ್ರಧಾನಿ ಬಗ್ಗೆ ನಾನು ಮಾಡಿದ ಟ್ವೀಟ್ ಗೆ ಮತ್ತು ಇನ್ನೊಬ್ಬರ ಭಾವನೆಗೆ ನೋವುಂಟು ಮಾಡಿರುವ ಆಕ್ಷೇಪಾರ್ಹ ಟ್ವೀಟ್ ಗಳಿಗೂ ನಾನು ಕ್ಷಮೆ ಕೋರುತ್ತೇನೆ. ನನ್ನ ಟ್ವೀಟ್  ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗೋಏರ್  ಸಂಬಂಧ ಹೊಂದಿಲ್ಲ. ಆ ಟ್ವೀಟ್ ಗಳೆಲ್ಲವೂ ನನ್ನ ವೈಯಕ್ತಿಕ ನಿಲುವುಗಳಾಗಿವೆ ಎಂದು ಹೇಳಿದ್ದರು.

ಪೈಲಟ್​ನ್ನು ಕೆಲಸದಿಂದ ವಜಾ ಮಾಡಿರುವ ವಿಷಯವನ್ನು ದೃಢಪಡಿಸಿದ ಗೋಏರ್ ವಕ್ತಾರ, ಗೋಏರ್ ಸಂಸ್ಥೆ ಶೂನ್ಯ ಸಹನೆ ನೀತಿ ಪಾಲಿಸಿದ್ದು, ಗೋಏರ್ ಸಂಸ್ಥೆಯ ಎಲ್ಲ ಉದ್ಯೋಗಿಗಳು ಸಂಸ್ಥೆಯ ನಿಯಮ, ನಿಬಂಧನೆ ಮತ್ತು ನೀತಿಯನ್ನು ಪಾಲಿಸಬೇಕು. ಇದು ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ನಿಲುವುಗಳಿಗೂ ಬಾಧಕವಾಗುತ್ತದೆ. ನಮ್ಮ ಸಂಸ್ಥೆಯ ಉದ್ಯೋಗಿಯವರ ವೈಯಕ್ತಿಕ ನಿಲುವುಗಳಿಗೆ ಸಂಸ್ಥೆ ಜವಾಬ್ದಾರರಾಗಿರುವುದಿಲ್ಲ. ಗೋಏರ್ ಸಂಸ್ಥೆ ಕ್ಯಾಪ್ಟನ್​ನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಿದೆ ಎಂದು ಹೇಳಿದ್ದಾರೆ.

ಅಮೆರಿಕಾದ ಪ್ರತಿಭಟನೆಯಲ್ಲಿ ಭಾರತದ ಧ್ವಜ ಏಕೆ? ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್

 

Published On - 2:56 pm, Sun, 10 January 21

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us