ಬೆಳಗಾವಿ: ಮುಂಗಾರು ಮಳೆಯ ಹೊಡೆತಕ್ಕೆ ಕರ್ನಾಟಕ-ಗೋವಾ ಗಡಿಯಲ್ಲಿ ಜನಜೀವನ ಭಾರೀ ಅಸ್ತವ್ಯಸ್ತಗೊಂಡಿದೆ. ಸತತ ಒಂದು ವಾರದಿಂದ ಸುರಿಯತ್ತಿರುವ ಮಳೆಗೆ ಬೆಳಗಾವಿ ಗೋವಾ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತಗೊಂಡಿದೆ. ಪರಿಣಾಮ ಕರ್ನಾಟಕ ಮತ್ತು ಗೋವಾ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಗೋವಾ ಬಳಿಯ ಛೋರ್ಲಾ ಘಾಟ್ ಬಳಿ ಭಾರೀ ಮಳೆಗೆ ಗುಡ್ಡ ಕುಸಿತಗೊಂಡಿದೆ. ಕುಸಿದ ಮಣ್ಣು ಇಡೀ ರಸ್ತೆಯನ್ನೇ ಆವರಿಸಿಕೊಂಡಿದೆ. ಜೊತೆಗೆ ಗಿಡ ಮರಗಳು ಬಿದ್ಧಿರೋದ್ರಿಂದ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ಹೀಗಾಗಿ ಬೆಳಗಾವಿ ಮಾರ್ಗವಾಗಿ ಗೋವಾಗೆ ಸಂಚರಿಸುವ ಮತ್ತು ಗೋವಾದಿಂದ ಬರುವ ವಾಹನಗಳು ಹೆದ್ದಾರಿ ಮೇಲೆಯೇ ಸಾಲುಗಟ್ಟಿ ನಿಂತಿವೆ.
ಸುದ್ದಿ ತಿಳಿಯುತ್ತಿದ್ದಂತೆ ಗೋವಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಭೂಕುಸಿತದಿಂದಾಗಿರುವ ಮಣ್ಣನ್ನು ಮತ್ತು ಗಿಡಗಳನ್ನು ರಸ್ತೆಯಿಂದ ತೆರವುಗೊಳಿಸಲು ಅಣಿಯಾಗುತ್ತಿದ್ದಾರೆ.
Published On - 7:21 pm, Tue, 16 June 20