ರಿಪೋರ್ಟ್‌ ಕೊಡದೇ ಸತಾಯಿಸುತ್ತಿರುವ ಖಾಸಗಿ ಲ್ಯಾಬ್‌, ಆತಂಕದಲ್ಲಿ ಶಂಕಿತನ ತಾಯಿ

| Updated By: ಆಯೇಷಾ ಬಾನು

Updated on: Jun 30, 2020 | 12:49 PM

ಬೆಂಗಳೂರು: ಸರ್ಕಾರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿಯವರೂ ಕೈ ಜೋಡಿಸಲಿ, ಜನರ ಪ್ರಾಣ ಉಳಿಸಲಿ ಅಂತಾ ಖಾಸಗಿಯವರಿಗೂ ಟೆಸ್ಟ್‌ ಮತ್ತು ಚಿಕಿತ್ಸೆ ನೀಡಲು ಅನುಮತಿ ನೀಡಿತು. ಆದ್ರೆ ಇದೇ ಖಾಸಗಿಯವರು ಜನರಿಗೆ ಸಹಾಯ ಮಾಡೋದು ಬಿಟ್ಟು ಪರಿಸ್ಥಿತಿಯನ್ನ ಮತ್ತಷ್ಟು ಕಗ್ಗಂಟು ಮಾಡ್ತಿರೋ ಘಟನೆ ಬೆಂಗಳೂರಿನ ನಾಗರಬಾವಿಯಿಂದ ವರದಿಯಾಗಿದೆ. ಕೊರೊನಾ ಪರೀಕ್ಷೆಗಾಗಿ ನಾಗರಬಾವಿಯ ಖಾಸಗಿ ಲ್ಯಾಬ್‌ ಮೆಡಿಕ್ಲೂ ಡೈಯಾಗ್ನ ಸ್ಟಿಕ್ ಸೆಂಟರ್‌ನಲ್ಲಿ ಯುವಕನೋರ್ವ ಟೆಸ್ಟ್‌ ಮಾಡಿಸಿಕೊಂಡಿದ್ದಾನೆ. ಆದ್ರೆ ಟೆಸ್ಟ್‌ ಆದ ನಂತರ ಆತನ ರಿಪೋರ್ಟ್‌ ಕೊಡದೇ […]

ರಿಪೋರ್ಟ್‌ ಕೊಡದೇ ಸತಾಯಿಸುತ್ತಿರುವ ಖಾಸಗಿ ಲ್ಯಾಬ್‌, ಆತಂಕದಲ್ಲಿ ಶಂಕಿತನ ತಾಯಿ
Follow us on

ಬೆಂಗಳೂರು: ಸರ್ಕಾರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿಯವರೂ ಕೈ ಜೋಡಿಸಲಿ, ಜನರ ಪ್ರಾಣ ಉಳಿಸಲಿ ಅಂತಾ ಖಾಸಗಿಯವರಿಗೂ ಟೆಸ್ಟ್‌ ಮತ್ತು ಚಿಕಿತ್ಸೆ ನೀಡಲು ಅನುಮತಿ ನೀಡಿತು. ಆದ್ರೆ ಇದೇ ಖಾಸಗಿಯವರು ಜನರಿಗೆ ಸಹಾಯ ಮಾಡೋದು ಬಿಟ್ಟು ಪರಿಸ್ಥಿತಿಯನ್ನ ಮತ್ತಷ್ಟು ಕಗ್ಗಂಟು ಮಾಡ್ತಿರೋ ಘಟನೆ ಬೆಂಗಳೂರಿನ ನಾಗರಬಾವಿಯಿಂದ ವರದಿಯಾಗಿದೆ.

ಕೊರೊನಾ ಪರೀಕ್ಷೆಗಾಗಿ ನಾಗರಬಾವಿಯ ಖಾಸಗಿ ಲ್ಯಾಬ್‌ ಮೆಡಿಕ್ಲೂ ಡೈಯಾಗ್ನ ಸ್ಟಿಕ್ ಸೆಂಟರ್‌ನಲ್ಲಿ ಯುವಕನೋರ್ವ ಟೆಸ್ಟ್‌ ಮಾಡಿಸಿಕೊಂಡಿದ್ದಾನೆ. ಆದ್ರೆ ಟೆಸ್ಟ್‌ ಆದ ನಂತರ ಆತನ ರಿಪೋರ್ಟ್‌ ಕೊಡದೇ ವಿಳಂಬ ಮಾಡ್ತಿದ್ದಾರೆ. ಈ ಸಂಬಂಧ ರಿಪೋರ್ಟ್‌ಗಾಗಿ ಯುವಕ ಮತ್ತು ಆತನ ತಾಯಿ ಲ್ಯಾಬ್‌ ಹೊರಗೆ ಗಂಟೆಗಟ್ಟಲೇ ಕಾಯುತ್ತಿದ್ದಾರೆ.

ಈ ಸಂಬಂಧ ಯುವಕನ ತಾಯಿ ಲ್ಯಾಬ್‌ನವರಿಗೆ ಮಗನ ಟೆಸ್ಟ್‌ ರಿಪೋರ್ಟ್‌ ಕೊಡಿ ಅಂತಾ ಸಿಬ್ಬಂದಿಯ ಹತ್ತಿರ ಅಂಗಲಾಚುತ್ತಿದ್ದರೂ, ರಿಪೋರ್ಟ್‌ ಕೊಡದೆ ಸತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಆಕೆಯನ್ನ ಆಸ್ಪತ್ರೆಯ ಲ್ಯಾಬ್‌ನೊಳಕ್ಕೂ ಬಿಡದೇ ಹೊರಗೆ ನಿಲ್ಲಿಸಿದ್ದಾರೆ. ಮಗನ ವರದಿ ಕೊಡಿ ಆತನಿಗೆ ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ಏನು ಗತಿ ಅಂತಾ ತಾಯಿ ಕಣ್ಣೀರು ಹಾಕುತ್ತಾ ಅಂಗಲಾಚುತ್ತಿರುವ ದೃಶ್ಯ ಎಂಥವರನ್ನೂ ಮನಕಲುಕಿಸುವಂತಿದೆ. ಆದ್ರೂ ಸಿಬ್ಬಂದಿ ಮಾತ್ರ ರಿಪೋರ್ಟ್‌ ಕೊಡದೇ ಸತಾಯಿಸುತ್ತಿದ್ದಾರೆ.

ಆದರೆ ಬೆಂಗಳೂರು ಕೋವಿಡ್ ಉಸ್ತುವಾರಿ ಸಚಿವ ಆರ್​ ಅಶೋಕ್ ಅವರು ನಿನ್ನೆಯಷ್ಟೇ ಒಂದು ಸಂಗತಿಯನ್ನು ಸ್ಪಷ್ಟಪಡಿಸಿದ್ದು, ಕೊರೊನಾ ರಿಪೋರ್ಟ್ ಅನ್ನು ನೇರವಾಗಿ ಟೆಸ್ಟ್ ಮಾಡಿಸಿಕೊಂಡವರ ಕೈಗಾಗಲಿ ಅಥವಾ ಅವರ ಕುಟುಂಬದವರಿಗಾಗಲಿ ನೀಡುವಂತಿಲ್ಲ. ಪರಿಸ್ಥಿತಿಯನ್ನು ಅರ್ಥೈಸಿ, ನಿಧಾನವಾಗಿ ತಿಳಿಯ ಹೇಳಿ ಟೆಸ್ಟ್ ವರದಿ ನೀಡಬೇಕು ಎಂದು ಹೇಳಿದ್ದಾರೆ.