ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಮತ್ತು ಉಗ್ರರು ಬಳಸಿದ ಮೊಬೈಲ್ ಫೋನ್ಗಳ ಮೂಲಕ ರಾಷ್ಟ್ರೀಯ ಭದ್ರತಾ ದಳ ಕಲೆ ಹಾಕಿರುವ ಮಾಹಿತಿ ಪ್ರಕಾರ ಉಗ್ರರು ಗುಪ್ತಚರ–ಆಧಾರಿತ 26/11 ನಂಥ ಒಂದು ದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ಭಾರತದೊಳಗೆ ನುಗ್ಗಿದ್ದರೆನ್ನುವುದು ಗೊತ್ತಾಗಿದೆ. ಉಗ್ರರು ಸಾಂಬಾ ಸೆಕ್ಟರ್ನಿಂದ ಭಾರತದ ಗಡಿಯೊಳಗೆ ಪ್ರವೇಶಿಸುವದಕ್ಕಿಂತ ಮೊದಲೇ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಜೈಷ್–ಎ–ಮೊಹಮ್ಮದ್ ಸಂಘಟನೆಯ ಕಾರ್ಯಾಚರಣೆ ಕಮಾಂಡೊಗಳಾದ ಮುಫ್ರಿ ರೌಫ್ ಅಸ್ಗರ್ ಮತ್ತು ಕಾರಿ ಜರಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಎನ್ಎಸ್ಎಗೆ ದೊರೆತಿದೆ. ಈ ಅಸ್ಗರ್ ಜೆಇಎಮ್ ಚೀಫ್ ಮತ್ತು ವಿಶ್ವಸಂಸ್ಥೆಯಿಂದ ಜಾಗತಿಕ
ಕಣಿವೆ ಪ್ರದೇಶದಲ್ಲಿ ಬೃಹತ್ ಪ್ರಮಾಣದ ವಿಧ್ವಂಸಕ ಕ್ರತ್ಯ ನಡೆಸುವುದೇ ಅವರ ಉದ್ದೇಶವಾಗಿತ್ತು ಎಂದು ಶುಕ್ರವಾರದಂದು ಘಟನೆ ಬಗ್ಗೆ ಎನ್ಎಸ್ಎ ಮುಖ್ಯಸ್ಥ ಅಜಿತ್ ದೋವಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿವರಣೆ ನೀಡುವಾಗ ತಿಳಿಸಿದ್ದಾರೆ. ಸದರಿ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾಹ, ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ ಕೂಡ ಹಾಜರಿದ್ದರು.
ಈ ಸಭೆ ನಂತರ ಪ್ರಧಾನ ಮಂತ್ರಿ ಮೋದಿಯವರು, ಟ್ಟ್ವೀಟ್ ಮೂಲಕ ಪಾಕಿಸ್ತಾನದ ಉದ್ದೇಶವನ್ನು ಬಹಿರಂಗಗೊಳಿಸಿದರು.
‘‘ಪಾಕಿಸ್ತಾನದ ಆಶ್ರಯದಲ್ಲಿರುವ ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಜವಾನರು ಹೊಡೆದುರುಳಿಸಿ ಅವರಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಈ ಕಾರ್ಯಾಚರಣೆಯ ಹಿಂದಿನ ಉದ್ದೇಶವೇನಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸಾಮಾನ್ಯ ಜನಜೀವನ ಮತ್ತು ಕಾಶ್ಮೀರದಲ್ಲಿ ನಡೆಯಬೇಕಿರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಹಾಳು ಮಾಡಬೇಕೆನ್ನುವ ಉದ್ದೇಶವನ್ನು ಪಾಕಿಸ್ತಾನ ಹೊಂದಿತ್ತು. ಆದರೆ ನಮ್ಮ ಪರಾಕ್ರಮಶಾಲಿ ಯೋಧರು ಉಗ್ರರ ಯೋಜನೆಯನ್ನು ಮತ್ತೊಮ್ಮೆ ವಿಫಲಗೊಳಿಸದ್ದಾರೆ, ಅವರಿಗೆ ನಾನು ಅಭಿನಂದನೆಗಳನ್ನು ತಿಳಿಸಿತ್ತೇನೆ,’’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಎನ್ಎಸ್ಎ ಮತ್ತೊಂದು ಸಂಗತಿಯನ್ನು ಪತ್ತೆ ಮಾಡಿದೆ. ಭಾರತೀಯ ವಾಯುಸೇನೆಯ ವಿಮಾನಗಳು ಫೆಬ್ರುವರಿ 26, 2019 ರಂದು, ಬಾಲಾಕೋಟ್ನಲ್ಲಿದ್ದ ಉಗ್ರರ ನೆಲೆಗಳನ್ನು ನಾಶ ಮಾಡಿದ ನಂತರ, ಆ ಪ್ರದೇಶವನ್ನು ಪಾಕಿಸ್ತಾನಿ ಏಜೆನ್ಸಿಗಳು ಜೈಷ್ ಸಂಘಟನೆಗೆ ಹಸ್ತಾಂತರಿಸಲು ನಿರ್ಧರಿಸಿವೆಯಂತೆ.