ಎಷ್ಟೇ ನೋವು, ತಲೆ ಚಿದ್ರವಾಗುವಷ್ಟು ಟೆನ್ಶನ್, ಮನಸ್ಸು ಭಾರ ಎನಿಸಿ ಕಣ್ಣೀರಾಕುವ ಸಂದರ್ಭಗಳೇ ಎದುರಾದರೂ ಒಮ್ಮೆ ಬೇಚ್ಗೆ ಭೇಟಿ ನೀಡಿ ಉಪ್ಪು ನೀರಿನಲ್ಲಿ ಮುಳುಗೆದ್ದರೆ ಸಾಕು. ಎಲ್ಲವೂ ಶಾಂತ, ನೆಮ್ಮದಿಯ ಮಡಿಲಲ್ಲಿ ಭದ್ರವಾಗಿ ನಿಂತಂತೆನಿಸುತ್ತದೆ. ಮತ್ತೆ ಬದುಕಿ ಬಂದಿದ್ದೇವೆ, ಜೀವನದಲ್ಲಿ ಮತ್ತೊಂದು ಚ್ಯಾನ್ಸ್ ಸಿಕ್ಕಿದೆ. ಮುನ್ನುಗ್ಗಬೇಕು ಎನಿಸುತ್ತದೆ. ಇದೇ ಸಮುದ್ರಗಳಿಗಿರುವ ಪವರ್. ಈ ಬಗ್ಗೆ ನಾನ್ಯಾಕೆ ಇಷ್ಟು ಹೇಳುತ್ತಿದ್ದೇನೆ ಅಂದ್ರೆ ಇದು ನನ್ನ ಅನುಭವ ಜೊತೆಗೆ ಇಂದು ವಿಶ್ವ ಸಮುದ್ರ ದಿನ(World Oceans Day). ಭೂಮಿಯ ಮೇಲ್ಮೈ ಮೇಲಿನ ಸುಮಾರು 71% ರಷ್ಟು ಭಾಗವನ್ನು ಈ ಸಾಗರಗಳೇ ಆವರಿಸಿದ್ದು ಭೂಮಿಯನ್ನು ಬ್ಲ್ಯೂ ಪ್ಲಾನೆಟ್ ಎಂದೂ ಸಹ ಕರೆಯಲಾಗುತ್ತೆ. ಸಾಗರ ಸಂಪತ್ತಿನ ಸಂರಕ್ಷಣೆಯ ಧ್ಯೇಯವನ್ನಿಟ್ಟುಕೊಂಡು ಪ್ರತಿವರ್ಷ ಜೂನ್ 8ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತದೆ.
ಸಾಗರಗಳನ್ನು ಭೂಮಿಯ ಶ್ವಾಸಕೋಶಗಳು ಎಂದು ಕರೆಯಲಾಗುತ್ತೆ. ಹಾಗೂ ವಿಶ್ವ ಮಾನವರಿಗೆ ಇದು ಆಹಾರ ಮತ್ತು ಪ್ರೋಟೀನ್‌ನ ದೊಡ್ಡ ಮೂಲ ಬಿಂದು. ಸಮುದ್ರಗಳು ವಿಶ್ವದ ಆರ್ಥಿಕತೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತವೆ. ಸಮುದ್ರಗಳನ್ನು ಆಧರಿಸಿ ಎಷ್ಟೂ ಜನ ತಮ್ಮ ಉದ್ಯೋಗವನ್ನು ಸೃಷ್ಟಿಸಿಕೊಂಡಿದ್ದಾರೆ. ಆದಾಗ್ಯೂ, ನೀರಿನ ಮಾಲಿನ್ಯ ಮತ್ತು ಜನರ ಅಜ್ಞಾನದಿಂದ, ಸಾಗರಗಳು ಹಾಳಾಗುತ್ತಿವೆ. ಮೀನುಗಳ ಸಂತತಿಯು ಕ್ಷೀಣಿಸುತ್ತಿದೆ. ಆದ್ದರಿಂದ, ಸಾಗರಗಳನ್ನು ಉಳಿಸಲು ಕೈಜೋಡಿಸುವ ಸಮಯ ಇದು.
ಇದನ್ನೂ ಓದಿ: Bizarre News: ನೋಡಿದಾಕ್ಷಣ ಕಣ್ಮರೆಯಾಗುವ ನೀರು; ವಿಜ್ಞಾನಿಗಳಿಗೂ ಆಶ್ಚರ್ಯ, ಭಾರತದಲ್ಲೇ ಇದೆ ಈ ನಿಗೂಢ ಸಮುದ್ರ
ಶತಕೋಟಿ ಜನರಿಗೆ ಆಹಾರದ ಮೂಲವಾಗಿರುವ ಸಮುದ್ರಗಳು, ಹವಾಮಾನವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿವೆ. ಆದ್ರೆ ಮಿತಿಮೀರಿದ ಮೀನುಗಾರಿಕೆ, ತೈಲ ಸೋರಿಕೆಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ಮಾನವ ಚಟುವಟಿಕೆಗಳು ಸಮುದ್ರಗಳ ಮೇಲೆ ಭಾರಿ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. ಹಾಗಾಗಿ ನಾವೆಲ್ಲ ಸಮುದ್ರಗಳನ್ನು ಉಳಿಸುವ ಅವುಗಳ ಸ್ವಚ್ಛತೆಯನ್ನು ಕಾಪಾಡುವ ಹೊಣೆ ಹೊರಬೇಕು.
ಪ್ರತಿ ವರ್ಷ, ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಅನೇಕ ವಿಜ್ಞಾನಿಗಳು, ಸಂಘ ಸಂಸ್ಥೆಗಳು ಮತ್ತು ಸೆಲೆಬ್ರಿಟಿಗಳು ಸಮುದ್ರಗಳನ್ನು ಉಳಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಸಮುದ್ರದ ಕಿನಾರೆಗಳಲ್ಲಿ ಬಿದ್ದಿರುವ ಕಸ-ಕಡಿಯನ್ನು ಶೇಖರಿಸಿ ಸ್ವಚ್ಛಗೊಳಿಸುತ್ತಾರೆ. ಇನ್ನು ಸಮುದ್ರದ ಮಡಿಲಲ್ಲಿ ಅಡಗಿರುವ ತ್ಯಾಜ್ಯಗಳನ್ನು ಮೇಲೆತ್ತಲಾಗುತ್ತದೆ. ಸಮುದ್ರದ ಗರ್ಭದಲ್ಲಿ ಅನೇಕ ಜೀವ ರಾಶಿಗಳು ಅಡಗಿವೆ. ಅದನ್ನು ನೋಡುವುದೇ ಕೌತುಕ. ಜೀವ ರಾಶಿಗಳನ್ನು ನೋಡಿ ಜಗತ್ತಿನ ವಿಸ್ಮಯವನ್ನು ಸಂಭ್ರಮಿಸಿ ಅದನ್ನು ನಮ್ಮ ಮುಂದಿನ ಪೀಳಿಗೆಗೂ ನೀಡಬೇಕು. ಹೀಗಾಗಿ ಸಮುದ್ರ, ಸಾಗರಗಳಿಗೆ ಹೋದರೆ ಕಸ ಹಾಕಿ ಹಾಳು ಮಾಡಬೇಡಿ.
ವಿಶ್ವ ಸಮುದ್ರ ದಿನ ಆಚರಿಸುವ ಬಗ್ಗೆ ಸಾವಿರದ 1992ರಲ್ಲಿ ಕೆನಡಾದ ಸಮುದ್ರ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರ (ಐಸಿಒಡಿ) ಮತ್ತು ಕೆನಡಾದ ಸಾಗರ ಸಂಸ್ಥೆ (ಒಐಸಿ) ವಿಶ್ವಸಂಸ್ಥೆಗೆ ಪ್ರಸ್ತಾವ ಸಲ್ಲಿಸಿದ್ದವು. ಪರಿಸರ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಬ್ರೆಜಿಲ್‌ನಲ್ಲಿ ನಡೆದಿದ್ದ ಭೂ ಶೃಂಗಸಭೆಯಲ್ಲಿ ಈ ಪ್ರಸ್ತಾವ ಸಲ್ಲಿಕೆ ಆಗಿತ್ತು. ಆದರೆ ವಿಶ್ವಸಂಸ್ಥೆಯು 2008ರಲ್ಲಿ ವಿಶ್ವ ಸಾಗರ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಮತ್ತಷ್ಟು ಆಸಕ್ತಿಕರ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ