ಮಾರ್ಚ್ 15,16ಕ್ಕೆ ಬ್ಯಾಂಕ್ ಬಂದ್; ಬ್ಯಾಂಕಿಂಗ್ ವಲಯದ ಮೇಲೆ ಬೀರಲಿದೆ ಪರಿಣಾಮ

| Updated By: ಸಾಧು ಶ್ರೀನಾಥ್​

Updated on: Mar 04, 2021 | 12:34 PM

Bank Strike: ಬ್ಯಾಂಕ್​ ಸಂಘಟನೆಗಳ ಸಂಯುಕ್ತ ಸಂಘಟನೆಯಾದ Indian Banks' Association (IBA) ಇದೇ ತಿಂಗಳ 15 ಮತ್ತು 16ರಂದು (ಮಾರ್ಚ್ 15-16) ಬ್ಯಾಂಕ್​ಗಳ ಬಂದ್​ಗೆ ಕರೆ ಕೊಟ್ಟಿದೆ. ಈ ಬಂದ್​ನಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಕೆಲ ಮಟ್ಟಿಗೆ ಏರುಪೇರುಗಳಾಗಬಹುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

ಮಾರ್ಚ್ 15,16ಕ್ಕೆ ಬ್ಯಾಂಕ್ ಬಂದ್; ಬ್ಯಾಂಕಿಂಗ್ ವಲಯದ ಮೇಲೆ ಬೀರಲಿದೆ ಪರಿಣಾಮ
ಸಾಂದರ್ಭಿಕ ಚಿತ್ರ
Follow us on

ಈ ತಿಂಗಳು ಬ್ಯಾಂಕ್ ಕೆಲಸಗಳನ್ನೇನಾದರೂ ಇಟ್ಟುಕೊಂಡಿದ್ದೀರೇ? ಹಾಗಾದರೆ ಈ ಬರಹವನ್ನು ನೀವೊಮ್ಮೆ ಓದಬೇಕು. ಎರಡು ಪ್ರಮುಖ ಬ್ಯಾಂಕ್​ಗಳ ಖಾಸಗೀಕರಣ ಪ್ರಸ್ತಾಪ ಎತ್ತಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಮಾರ್ಚ್ 15-16ರಂದು ಬ್ಯಾಂಕ್ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿವೆ. ಈ ಬಂದ್​ನಿಂದ ಬ್ಯಾಂಕಿಂಗ್ ವಲಯದ ಮೇಲೆ ಪ್ರಭಾವ ಬೀರಲಿವೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

ಬ್ಯಾಂಕ್​ ಸಂಘಟನೆಗಳ ಸಂಯುಕ್ತ ಸಂಘಟನೆಯಾದ Indian Banks’ Association (IBA) ಇದೇ ತಿಂಗಳ 15 ಮತ್ತು 16ರಂದು (ಮಾರ್ಚ್ 15-16) ಬ್ಯಾಂಕ್​ಗಳ ಬಂದ್​ಗೆ ಕರೆ ಕೊಟ್ಟಿದೆ. ಈ ಬಂದ್​ನಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಕೆಲ ಮಟ್ಟಿಗೆ ಏರುಪೇರುಗಳಾಗಬಹುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

ಬ್ಯಾಂಕಿಂಗ್ ವಲಯದಲ್ಲಿನ ಎರಡು ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡಹೊರಟಿರುವ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ  ಬ್ಯಾಂಕ್​ ಸಂಘಟನೆಗಳ ಸಂಯುಕ್ತ ಸಂಘಟನೆ ಈ ಬಂದ್​ಗೆ ಕರೆ ಕೊಟ್ಟಿದೆಯೇ ಹೊರತು ಯಾವುದೇ ಬ್ಯಾಂಕ್ ಒಂದರ ಸಮಸ್ಯೆಗಾಗಿ ಅಲ್ಲ. ಬಂದ್​ಗೆ ಕರೆ ಕೊಟ್ಟ ದಿನಗಳಂದು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಕೆನರಾ ಬ್ಯಾಂಕ್ ತಿಳಿಸಿದೆ. ಆದರೂ, ಬ್ಯಾಂಕ್ ಬಂದ್​ ದಿನಗಳಂದು ಬ್ಯಾಂಕ್​​ಗಳ ಕಾರ್ಯ ಕಲಾಪಗಳಲ್ಲಿ ಭಂಗ ಬರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಕೆನರಾ ಬ್ಯಾಂಕ್ ಮಾಹಿತಿ ನೀಡಿದೆ. ಬ್ಯಾಂಕಿಂಗ್ ವಲಯದ ಸಂಘಟನೆಗಳಾದ AIBEA, AIBOC, NCBE, AIBOA, BEFI, INBEF, IBOC, NOBW, NOBO and AINBOF ಗಳು ಮಾರ್ಚ್ 15-16ರಂದು ಬಂದ್​ಗೆ ಕರೆ ನೀಡಿವೆ.

ದೊಡ್ಡ ಬ್ಯಾಂಕ್​ಗಳ ಖಾಸಗೀಕರಣದತ್ತ ಸರ್ಕಾರದ ಚಿಂತನೆ

ಖಾಸಗೀಕರಣದ ಮೊದಲ ಹಂತ ಇದಾಗಿದ್ದು, ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್​​​ಗಳನ್ನು ಮೊದಲು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದೇಶದ ದೊಡ್ಡ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡುವ ಆಲೋಚನೆ ಕೇಂದ್ರ ಸರ್ಕಾರದ್ದು. ಈ ಬಗ್ಗೆ ಉತ್ತರ ನೀಡಲು ಹಣಕಾಸು ಸಚಿವಾಲಯ ನಿರಾಕರಿಸಿದೆ.

ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 50,000 ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 33,000, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಲ್ಲಿ 26,000 ಹಾಗೂ ಬ್ಯಾಂಕ್​ ಆಫ್​ ಮಹಾರಾಷ್ಟ್ರದಲ್ಲಿ 13,000 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣವು ರಾಜಕೀಯವಾಗಿ ಅಪಾಯಕಾರಿಯಾಗಿದೆ. ಇದರಿಂದ ಉದ್ಯೋಗ ನಷ್ಟ ಉಂಟಾಗಬಹದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ಹಾಗೂ ಎಲ್​ಐಸಿ ಷೇರುಗಳ್ನು ಸರ್ಕಾರ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಈಗಾಗಲೇ ಪ್ರತಿಭಟನೆ ನಡೆದಿದೆ.

ಇದನ್ನೂ ಓದಿ: ಇಂಟರ್​ನೆಟ್​ ಇಲ್ಲದೆ ಬ್ಯಾಂಕಿಂಗ್​ ವ್ಯವಹಾರ..! ಆರ್​ಬಿಐನ ಹೊಸ ಐಡಿಯಾ ಹಳ್ಳಿಗಳಿಗೆ ಇದು ವರದಾನ

ಕನ್ನಡಿಗರ ಕೈ ತಪ್ಪುತ್ತಿವೆ ಬ್ಯಾಂಕಿಂಗ್ ಉದ್ಯೋಗಗಳು: ಟಿ.ಎಸ್. ನಾಗಾಭರಣ ಕಳವಳ