ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

|

Updated on: Oct 20, 2019 | 3:25 PM

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೀತಿದೆ. ಪ್ರಕರಣ ಸಂಬಂಧ ಯುಪಿಯಲ್ಲಿ ಇಬ್ಬರು ಮೌಲ್ವಿಗಳು ಹಾಗೂ ಗುಜರಾತ್​ನಲ್ಲಿ ಮೂವರನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಇಷ್ಟಕ್ಕೆ ಎಲ್ಲಾ ಬಗೆಹರೀತು ಅಂತ ಪೊಲೀಸರು ಹೇಳ್ತಿದ್ರೆ. ಕಮಲೇಶ್ ಕುಟುಂಬ ಸದಸ್ಯರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಬದಲಾಗಿ ಕಮಲೇಶ್ ಹತ್ಯೆ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರದ ಕೈವಾಡವಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕ ಶಿವಕುಮಾರ್​ ಗುಪ್ತನೇ ನನ್ನ ಮಗನನ್ನ […]

ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
Follow us on

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೀತಿದೆ. ಪ್ರಕರಣ ಸಂಬಂಧ ಯುಪಿಯಲ್ಲಿ ಇಬ್ಬರು ಮೌಲ್ವಿಗಳು ಹಾಗೂ ಗುಜರಾತ್​ನಲ್ಲಿ ಮೂವರನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಇಷ್ಟಕ್ಕೆ ಎಲ್ಲಾ ಬಗೆಹರೀತು ಅಂತ ಪೊಲೀಸರು ಹೇಳ್ತಿದ್ರೆ. ಕಮಲೇಶ್ ಕುಟುಂಬ ಸದಸ್ಯರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಬದಲಾಗಿ ಕಮಲೇಶ್ ಹತ್ಯೆ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರದ ಕೈವಾಡವಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕ ಶಿವಕುಮಾರ್​ ಗುಪ್ತನೇ ನನ್ನ ಮಗನನ್ನ ಹತ್ಯೆ ಮಾಡಿಸಿದ್ದಾನೆ ಅಂತ ಕಮಲೇಶ್ ತಾಯಿ ಹೇಳಿರೋದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಶಿವಕುಮಾರ್ ಗುಪ್ತ ಬಲವಂತದಿಂದ ದೇವಸ್ಥಾನದ ಅಧ್ಯಕ್ಷರಾಗಿದ್ದಾರೆ. ನನ್ನ ಮಗನ ಎದುರು ಅವರದ್ದು ಏನೂ ನಡೀಲಿಲ್ಲ. ಹೀಗಾಗಿ ಹತ್ಯೆ ಮಾಡಿಸಿದ್ದಾರೆ. ಬಿಜೆಪಿಯ ಯೋಗಿ ಆದಿತ್ಯನಾಥ್ ಅವರದ್ದು ಕೂಡ ಏನೂ ನಡೀಲಿಲ್ಲ. ಹೀಗಾಗಿ ಹತ್ಯೆ ಮಾಡಿಸಿದ್ದಾರೆ. ಆದ್ರೆ ನಾವಿನ್ನೂ ಬದುಕಿದ್ದೇವೆ. ನಾವು ಶಿವಕುಮಾರ್ ಗುಪ್ತನನ್ನು ಸಾಯಿಸುತ್ತೇವೆ. ಅಖಿಲೇಶ್ ಯಾದವ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಮಲೇಶ್ ತಿವಾರಿ ಭದ್ರತೆಗಾಗಿ 17 ಪೊಲೀಸರು ನಿಯೋಜನೆಗೊಂಡಿದ್ರು. ಆದ್ರೆ ಯೋಗಿ ಸರ್ಕಾರ ಬಂದಮೇಲೆ ಅದನ್ನ ನಾಲ್ಕಕ್ಕೆ ಇಳಿಸಲಾಗಿತ್ತು. ಹತ್ಯೆ ನಡೆದ ದಿನವಂತೂ ಯಾವ ಭದ್ರತಾ ಸಿಬ್ಬಂದಿ ಕೂಡ ಕಮಲೇಶ್ ಜೊತೆಗೆ ಇರಲಿಲ್ಲ ಅಂತ ಅವರ ತಾಯಿ ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಯೋಗಿ ಬರದಿದ್ದರೆ ಪ್ರಾಣತ್ಯಾಗಕ್ಕೂ ಸಿದ್ಧ
ಉತ್ತರಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಸಾಂತ್ವನ ಹೇಳುವವರೆಗೂ ಕಮಲೇಶ್ ತಿವಾರಿಯ ಅಂತ್ಯಕ್ರಿಯೆ ಮಾಡೋದಿಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ರೆ ಪ್ರಾಣತ್ಯಾಗ ಮಾಡೋದಾಗಿ ಕಮಲೇಶ್ ತಿವಾರಿ ಪತ್ನಿ ಎಚ್ಚರಿಕೆ ನೀಡಿದ್ದಾರೆ. ಇವೆಲ್ಲದರ ನಡುವೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಲಖನೌದ ಖುರ್ಷಿದಾ ಬಾಗ್​ಗೆ ತೆರಳಿ ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

ಕೊಲೆಗಾರರ ಶಿರಚ್ಛೇದ ಮಾಡಿದ್ರೆ 1 ಕೋಟಿ ಬಹುಮಾನ
ಕಮಲೇಶ್ ತಿವಾರಿಯನ್ನ ಕ್ರೂರವಾಗಿ ಕೊಂದವರ ಶಿರಚ್ಛೇದ ಮಾಡಬೇಕು ಅಂತ ಶಿವಸೇನಾ ಮುಖಂಡ ಅರುಣ್ ಪಾಠಕ್ ಹೇಳಿದ್ದಾರೆ. ಅಲ್ಲದೆ ಕೊಲೆಗಾರರ ಶಿರಚ್ಛೇದ ಮಾಡಿದ್ರೆ ಒಂದು ಕೋಟಿ ರೂಪಾಯಿ ಕೊಡೋದಾಗಿ ಹೇಳಿದ್ದಾರೆ.

ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿರೋ ಪೊಲೀಸರು ಕೊಲೆ ಹಿಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ರೆ ಆರೋಪಿಗಳನ್ನ ಬಂಧಿಸಿರೋ ಯೋಗಿ ಸರ್ಕಾರ ಹಾಗೂ ಬಿಜೆಪಿ ನಾಯಕ ಶಿವಕುಮಾರ್ ಗುಪ್ತನೇ ಕಮಲೇಶ್ ತಿವಾರಿ ಸಾವಿಗೆ ಜವಾಬ್ದಾರರು ಅಂತ ಕುಟುಂಬ ಸದಸ್ಯರು ಹೇಳ್ತಿದ್ದಾರೆ.

 

Published On - 1:36 pm, Sun, 20 October 19