ಮೂರು ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಟಿಕೆಟ್ ಉಚಿತ!

ಬೆಂಗಳೂರು: ಫಿಟ್ ಇಂಡಿಯಾ ಯೋಜನೆ ಅಡಿ ರೈಲ್ವೇ ಇಲಾಖೆ ಹೊಸ ಪ್ಲಾನ್​ಗೆ ಮುಂದಾಗಿದ್ದು, ಜನರನ್ನು ಫಿಟ್ ಆಗಿ ಇರುವಂತೆ ಪ್ರೇರೇಪಿಸಲು ಬಸ್ಕಿ ಹೊಡೆಯಿರಿ ಫ್ರೀ ಟಿಕೆಟ್ ಪಡೆಯಿರಿ ಎಂಬ ಯೋಜನೆ ಜಾರಿಗೆ ತರಲು ಮುಂದಾಗಿದೆ. ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡಲು ಪ್ಲಾಟ್‌ಫಾರಂ ಟಿಕೆಟ್‌ ಖರೀದಿ ಮಾಡ್ಲೇಬೇಕು. ಐದು ನಿಮಿಷ ರೈಲು ಹತ್ತಿಸಿ ಬರ್ತೀನಿ ಅಂದ್ರೂ‌ ಪ್ಲಾಟ್‌ಫಾರಂ ಟಿಕೆಟ್‌ ತೆಗೆದುಕೊಂಡೇ ಹೋಗಬೇಕು. ಆದ್ರೆ ರೈಲು ಪ್ರಯಾಣಿಕರಿಗೆ ಈಗ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಮೂರು ನಿಮಿಷದಲ್ಲಿ 30 […]

ಮೂರು ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಟಿಕೆಟ್ ಉಚಿತ!
ಸಾಧು ಶ್ರೀನಾಥ್​

Updated on: Feb 22, 2020 | 4:04 PM

ಬೆಂಗಳೂರು: ಫಿಟ್ ಇಂಡಿಯಾ ಯೋಜನೆ ಅಡಿ ರೈಲ್ವೇ ಇಲಾಖೆ ಹೊಸ ಪ್ಲಾನ್​ಗೆ ಮುಂದಾಗಿದ್ದು, ಜನರನ್ನು ಫಿಟ್ ಆಗಿ ಇರುವಂತೆ ಪ್ರೇರೇಪಿಸಲು ಬಸ್ಕಿ ಹೊಡೆಯಿರಿ ಫ್ರೀ ಟಿಕೆಟ್ ಪಡೆಯಿರಿ ಎಂಬ ಯೋಜನೆ ಜಾರಿಗೆ ತರಲು ಮುಂದಾಗಿದೆ.

ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡಲು ಪ್ಲಾಟ್‌ಫಾರಂ ಟಿಕೆಟ್‌ ಖರೀದಿ ಮಾಡ್ಲೇಬೇಕು. ಐದು ನಿಮಿಷ ರೈಲು ಹತ್ತಿಸಿ ಬರ್ತೀನಿ ಅಂದ್ರೂ‌ ಪ್ಲಾಟ್‌ಫಾರಂ ಟಿಕೆಟ್‌ ತೆಗೆದುಕೊಂಡೇ ಹೋಗಬೇಕು. ಆದ್ರೆ ರೈಲು ಪ್ರಯಾಣಿಕರಿಗೆ ಈಗ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ.

ಮೂರು ನಿಮಿಷದಲ್ಲಿ 30 ಬಸ್ಕಿ‌ ಹೊಡೆದರೆ ಪ್ಲಾಟ್‌ಫಾರಂ ಟಿಕೆಟ್‌ ಉಚಿತವಾಗಿ ನೀಡಲಾಗುತ್ತೆ. ಅಂದ್ರೆ ಕೇವಲ 180 ಸೆಕೆಂಡ್ಸ್‌ನಲ್ಲಿ ಬರೋಬ್ಬರಿ 30 ಬಸ್ಕಿ ಹೊಡೆಯಬೇಕಾಗುತ್ತೆ. ಈ ಯೋಜನೆ ಈಗಾಗಲೇ ದೆಹಲಿಯಲ್ಲಿ ಜಾರಿಯಲ್ಲಿದ್ದು, ಬೆಂಗಳೂರಿನ ರೈಲ್ವೇ ನಿಲ್ದಾಣಕ್ಕೂ ಶೀಘ್ರದಲ್ಲೇ ಬಸ್ಕಿ ಮಷೀನ್ ಬರಲಿದೆ.

ಈ ಮಷೀನ್ ಅನ್ನು 2013ರಿಂದಲೇ ರಷ್ಯಾದ ಮಾಸ್ಕೋದಲ್ಲಿ ಬಳಸಲಾಗ್ತಿದೆ. ಇನ್ನು ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಪಿಯುಷ್‌ ಗೋಯಲ್‌, ಫಿಟ್‌ ಆಗಿಯೂ ಇರಿ, ಉಳಿತಾಯವನ್ನೂ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

Published On - 2:02 pm, Sat, 22 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us