ದೇಶದ 10 ನಗರಗಳಲ್ಲಿ ಉಸಿರಾಡಲು ಇಲ್ಲ ಶುದ್ಧವಾಯು; ವಾಯುಮಾಲಿನ್ಯ ಹೆಚ್ಚು ಇರುವುದು ಎಲ್ಲಿ?

| Updated By: ರಶ್ಮಿ ಕಲ್ಲಕಟ್ಟ

Updated on: Nov 03, 2022 | 2:09 PM

ಆನಂದ್ ವಿಹಾರ್ ಮತ್ತು ಜಹಾಂಗಿರ್‌ಪುರಿ ರಾಜಧಾನಿಯಲ್ಲಿ 460 ಕ್ಕೆ ಎಕ್ಯೂಐ ಹೊಂದಿರುವ ಅತ್ಯಂತ ಕಲುಷಿತ ಸ್ಥಳಗಳಾಗಿವೆ. "ತೀವ್ರ" ಎಕ್ಯೂಐ ಅನ್ನು ದಾಖಲಿಸಿದ ಪ್ರದೇಶಗಳು ಎಂದರೆ ಅಲಿಪುರ

ದೇಶದ 10 ನಗರಗಳಲ್ಲಿ ಉಸಿರಾಡಲು ಇಲ್ಲ ಶುದ್ಧವಾಯು; ವಾಯುಮಾಲಿನ್ಯ  ಹೆಚ್ಚು ಇರುವುದು ಎಲ್ಲಿ?
ದೆಹಲಿಯಲ್ಲಿ ದಟ್ಟವಾದ ಮಂಜು
Follow us on

ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಭೂಪೇಂದರ್ ಯಾದವ್ (Bhupender Yadav) ಅವರು ಬುಧವಾರ ಪಂಜಾಬ್ (Punjab) ನಲ್ಲಿ ರೈತರು ಬೆಳೆ ತ್ಯಾಜ್ಯ ಸುಡುವ ಬಗ್ಗೆ ಆಮ್ ಆದ್ಮಿ ಪಕ್ಷದ (AAP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಟ್ವಿಟರ್ ನಲ್ಲಿ ಈ ಬಗ್ಗೆ ಅಂಕಿಅಂಶದ ಗ್ರಾಫಿಕ್ ಶೇರ್ ಮಾಡಿದ ಸಚಿವರು ಎಎಪಿ ಆಡಳಿತದಲ್ಲಿರುವ ರಾಜ್ಯವು 2021 ರಲ್ಲಿ ಕೃಷಿ ಬೆಂಕಿಯಲ್ಲಿ ಶೇಕಡಾ 19 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ ಎಂದು ಹೇಳಿದರು. ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದವರು ಯಾರು ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ” ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕುಸಿದಿದೆ.ಹೆಚ್ಚಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತೀವ್ರ’ ವರ್ಗಕ್ಕೆ ಇಳಿದಿದೆ. ಕಳಪೆ ಗಾಳಿಯ ಗುಣಮಟ್ಟದಿಂದ ಆಸ್ತಮಾ ಹೊಂದಿರುವ ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ.
ಪ್ರಸ್ತುತ ಭಾರತದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಹರ್ಯಾಣ ಹೆಚ್ಚು ಕಲುಷಿತ ನಗರಗಳನ್ನು ಹೊಂದಿವೆ. ಈ ನಗರಗಳ ಗಾಳಿಯು ಏಕೆ ಹೆಚ್ಚು ಕಲುಷಿತಗೊಂಡಿದೆ ಎಂಬುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಪಂಜಾಬ್‌ನ ರೈತರು ಬೆಳೆ ತ್ಯಾಜ್ಯ ಸುಡುವುದು ಮತ್ತು ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಈ ಪ್ರದೇಶಗಳಿಂದ ಮಾಲಿನ್ಯಕಾರಕಗಳನ್ನು ತ್ವರಿತವಾಗಿ ಹರಡಲು ಸಹಾಯ ಮಾಡದಿರುವುದು ಆಗಿದೆ.

ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳು: ಪೂರ್ಣ ಪಟ್ಟಿ
ನಗರ AQI

ನೋಯ್ಡಾ 436

ಭಿವಾನಿ 407

ಪಾಣಿಪತ್ 405
ಗಾಜಿಯಾಬಾದ್ 404

ಹಾಪುರ 388

ಫರೀದಾಬಾದ್ 371

ನವದೆಹಲಿ 369

ಗುರಗಾಂವ್ 368

ಸೋನಿಪತ್ 361

ಮೀರತ್ 336

ಹವಾಮಾನ ಮುನ್ಸೂಚಕರು ಬುಧವಾರ ಬಲವಾದ ಗಾಳಿಯ ಹಿನ್ನಲೆಗುಣಮಟ್ಟ ಸುಧಾರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದು, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 9.10 ಕ್ಕೆ 426 ಕ್ಕೆ ನಿಂತಿದೆ.

400 ಕ್ಕಿಂತ ಹೆಚ್ಚಿನ ಎಕ್ಯೂಐ ಅನ್ನು “ತೀವ್ರ” ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಹೊಂದಿರುವವರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ.

ಆನಂದ್ ವಿಹಾರ್ ಮತ್ತು ಜಹಾಂಗಿರ್‌ಪುರಿ ರಾಜಧಾನಿಯಲ್ಲಿ 460 ಕ್ಕೆ ಎಕ್ಯೂಐ ಹೊಂದಿರುವ ಅತ್ಯಂತ ಕಲುಷಿತ ಸ್ಥಳಗಳಾಗಿವೆ. “ತೀವ್ರ” ಎಕ್ಯೂಐ ಅನ್ನು ದಾಖಲಿಸಿದ ಪ್ರದೇಶಗಳು ಎಂದರೆ ಅಲಿಪುರ (439), ಅಶೋಕ್ ವಿಹಾರ್ (444), ಬವಾನಾ (456), ಬುರಾರಿ (443), ಮಥುರಾ ರಸ್ತೆ (412), ಡಿಟಿಯು (436), ದ್ವಾರಕಾ (408), ಇಟೊ (435) . ಎಕ್ಯೂಐ ಗಾಜಿಯಾಬಾದ್ (391), ನೋಯ್ಡಾ (388), ಗ್ರೇಟರ್ ನೋಯ್ಡಾ (390), ಗುರುಗ್ರಾಮ್ (391) ಮತ್ತು ಫರೀದಾಬಾದ್ (347) ನಲ್ಲಿನ ‘ಅತ್ಯಂತ ಕಳಪೆ’ ವಿಭಾಗದಲ್ಲಿ ಮುಂದುವರೆದಿದೆ ಎಂದು ಸಿಪಿಸಿಬಿ ಡೇಟಾ ಹೇಳಿದೆ.

ಸೊನ್ನೆ ಮತ್ತು 50 ರ ನಡುವಿನ ಎಕ್ಯೂಐ ಅನ್ನು “ಉತ್ತಮ”, 51 ಮತ್ತು 100 “ತೃಪ್ತಿದಾಯಕ”, 101 ಮತ್ತು 200 “ಮಧ್ಯಮ”, 201 ಮತ್ತು 300 “ಕಳಪೆ”, 301 ಮತ್ತು 400 “ತುಂಬಾ ಕಳಪೆ”, ಮತ್ತು 401 ಮತ್ತು 500 “ತೀವ್ರ” ಎಂದು ಪರಿಗಣಿಸಲಾಗುತ್ತದೆ.

ಪಂಜಾಬ್ ನಲ್ಲಿ ಅತೀ ಹೆಚ್ಚು ಬೆಳೆತ್ಯಾಜ್ಯ ಸುಡುವಿಕೆ ವರದಿ ಮಾಡಿದ ಒಂದು ದಿನದ ನಂತರ ಇದು ಬರುತ್ತದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಪ್ರಕಾರ, ಪಂಜಾಬ್ ಬುಧವಾರ 3,634 ರಷ್ಟು ಕೃಷಿ ತ್ಯಾಜ್ಯ ಸುಡುವಿಕೆ ವರದಿ ಮಾಡಿದೆ, ಇದು ಈ ವರ್ಷ ಇದುವರೆಗೆ ಅತಿ ಹೆಚ್ಚು. ಭೂ ವಿಜ್ಞಾನ ಸಚಿವಾಲಯದ ಮುನ್ಸೂಚನೆ ಸಂಸ್ಥೆಯಾದ ಸಫರ್, ಈ ಹಿಂದೆ ರಾಜಧಾನಿಯಲ್ಲಿ ಪಿಎಂ 2.5 ಮಾಲಿನ್ಯದ ಶೇಕಡಾ 32 ರಷ್ಟಿದೆ ಎಂದು ಹೇಳಿದ್ದರು.

PM2.5 ಶ್ವಾಸಕೋಶ-ಹಾನಿಕಾರಕ ಸೂಕ್ಷ್ಮ ಕಣಗಳಾಗಿವೆ, ಅವು 2.5 ಮೈಕ್ರೊಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸವನ್ನು ಹೊಂದಿವೆ. ಇವು ಶ್ವಾಸಕೋಶವನ್ನು ತಲುಪಿ ರಕ್ತವನ್ನು ಸೇರಿಕೊಳ್ಳುತ್ತವೆ