ಸಿಎಂ ಬಿಎಸ್​ವೈ, ಡಿಕೆಶಿಗೆ ‘ಬೆನ್ನಿಗಾನಹಳ್ಳಿ’ ಕಂಟಕ, ಸುಪ್ರೀಂಕೋರ್ಟ್​ನಲ್ಲಿಂದು ಮೇಲ್ಮನವಿ ಅರ್ಜಿ ವಿಚಾರಣೆ

ದೆಹಲಿ: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಇಬ್ಬರು ರಾಜಕೀಯ ವೈರಿಗಳನ್ನು ಒಂದಾಗುವಂತೆ ಮಾಡಿದೆ.‌ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಯಡಿಯೂರಪ್ಪ ಬೆನ್ನಿಗಾನಹಳ್ಳಿ ಬಳಿ 4.20 ಎಕರೆ ಜಮೀನು ಡಿನೋಟಿಫೈ ಮಾಡಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್​ಗೆ ಸಹಾಯವಾಗುವಂತೆ ಮಾಡಿದ್ರು. ಆದ್ರೀಗ ಇದೇ ಡಿನೋಟಿಫೈ ಕೇಸ್ ಒಳಸುಳಿಗೆ ಸಿಲುಕಿ ಇಬ್ಬರು ನಾಯಕರು ನಲುಗುತ್ತಿದ್ದಾರೆ. ಅಕ್ರಮ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಹಾಗೂ ಡಿ.ಕೆ‌.ಶಿವಕುಮಾರ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.‌ ಸಾಮಾಜಿಕ‌ ಹೋರಾಟಗಾರ ಕಬ್ಬಾಳೆಗೌಡ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ. […]

ಸಿಎಂ ಬಿಎಸ್​ವೈ, ಡಿಕೆಶಿಗೆ ‘ಬೆನ್ನಿಗಾನಹಳ್ಳಿ’ ಕಂಟಕ, ಸುಪ್ರೀಂಕೋರ್ಟ್​ನಲ್ಲಿಂದು ಮೇಲ್ಮನವಿ ಅರ್ಜಿ ವಿಚಾರಣೆ
ಸಾಧು ಶ್ರೀನಾಥ್​

Updated on: Jan 07, 2020 | 6:56 AM

ದೆಹಲಿ: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಇಬ್ಬರು ರಾಜಕೀಯ ವೈರಿಗಳನ್ನು ಒಂದಾಗುವಂತೆ ಮಾಡಿದೆ.‌ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಯಡಿಯೂರಪ್ಪ ಬೆನ್ನಿಗಾನಹಳ್ಳಿ ಬಳಿ 4.20 ಎಕರೆ ಜಮೀನು ಡಿನೋಟಿಫೈ ಮಾಡಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್​ಗೆ ಸಹಾಯವಾಗುವಂತೆ ಮಾಡಿದ್ರು. ಆದ್ರೀಗ ಇದೇ ಡಿನೋಟಿಫೈ ಕೇಸ್ ಒಳಸುಳಿಗೆ ಸಿಲುಕಿ ಇಬ್ಬರು ನಾಯಕರು ನಲುಗುತ್ತಿದ್ದಾರೆ. ಅಕ್ರಮ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಹಾಗೂ ಡಿ.ಕೆ‌.ಶಿವಕುಮಾರ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.‌ ಸಾಮಾಜಿಕ‌ ಹೋರಾಟಗಾರ ಕಬ್ಬಾಳೆಗೌಡ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ.

ಇಂದು ‘ಸುಪ್ರೀಂ’ ವಿಚಾರಣೆ:
ಸುಪ್ರೀಂಕೋರ್ಟ್​ನಲ್ಲಿ ಮುಂದುವರಿದ ವಿಚಾರಣೆ ನಡೆಯಲಿದೆ. ಸಮಾಜಪರಿವರ್ತನ ಸಮುದಾಯದ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡ್ತಿದ್ದಾರೆ. ಇತ್ತ ಯಡಿಯೂರಪ್ಪ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರತಿವಾದ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಪರವೂ ಮುಕುಲ್ ರೋಹಟಗಿ ವಾದ ಮಾಡುವ ಸಾಧ್ಯತೆ ಇದೆ. ಇಲ್ಲದಿದ್ರೆ ಡಿಕೆಶಿ ಪರ ಹಿರಿಯ ವಕೀಲರಾದ ಕಿಪಿಲ್ ಸಿಬಲ್‌ ಅಥವಾ ಅಭಿಷೇಕ್ ಮನುಸಿಂಘ್ವಿ ಪ್ರತಿವಾದ ಮಾಡಲಿದ್ದಾರೆ.

ನಿರಾಳರಾಗಿದ್ದ ಬಿಎಸ್​ವೈ, ಡಿಕೆಶಿಗೆ ಮತ್ತೆ ಟ್ರಬಲ್?
ಬೆನ್ನಿಗಾನಹಳ್ಳಿ ಡಿನೋಟಿಪೀಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಾಳೆಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಾಪಸ್ ಪಡೆದು ಕಬ್ಬಾಳೆಗೌಡ ಅಚ್ಚರಿ ಮೂಡಿಸಿದ್ರು. ಆದ್ರೆ, ಕಬ್ಬಾಳೆಗೌಡ ಅರ್ಜಿ ವಾಪಸ್ ಪಡೆದ ಬಳಿಕ, ಅರ್ಜಿ ವಾಪಸ್ ಪಡೆದುದ್ದನ್ನು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.‌ ಡಿ.ಕೆ.ಶಿವಕುಮಾರ್ ಯಡಿಯೂರಪ್ಪ ವಿರುದ್ಧದ ಅರ್ಜಿಯನ್ನು ನಾವು ಮುಂದುವರೆಸುತ್ತೇವೆ ಅಂತಾ ಸುಪ್ರೀಂಕೋರ್ಟ್​ನಲ್ಲಿ ಕೇಳಿಕೊಂಡಿದ್ರು. ಹೀಗಾಗಿ, ಸುಪ್ರೀಂಕೋರ್ಟ್ ವಿಚಾರಣೆ ಮುಂದುವರೆಸಲು ಅವಕಾಶ ನೀಡಿತ್ತು. ಈಗ ಮತ್ತೆ ಇಬ್ಬರು ನಾಯಕರಿಗೆ ಟ್ರಬಲ್ ಶುರುವಾಗಿದೆ.

ಒಟ್ನಲ್ಲಿ, ಒಂದು ಡಿನೋಟಿಫಿಕೇಷನ್ ಕೇಸ್ ಇಬ್ಬರು ರಾಜಕೀಯ ವೈರಿಗಳನ್ನು ಒಂದಾಗುವಂತೆ ಮಾಡಿತ್ತು. ಆದ್ರೀಗ ಇದೇ ಕೇಸ್​ನಿಂದ ಬಿಎಸ್​ವೈ ಮತ್ತು ಡಿಕೆಶಿಗೆ ಕಂಟಕ ಶುರುವಾಗಿದೆ. ಹೀಗಾಗಿ, ಸುಪ್ರೀಂಕೋರ್ಟ್​ನಲ್ಲಿ ಒಟ್ಟಾಗಿ ಹೋರಾಟ ಮಾಡ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us