2016 ರಲ್ಲಿ ನರೇಂದ್ರ ಮೋದಿ ಸರ್ಕಾರವು ನಡೆಸಿದ ನೋಟು ಅಮಾನ್ಯೀಕರಣದ ನಿರ್ಧಾರ ತೆಗೆದುಕೊಂಡ ಪ್ರಕ್ರಿಯೆಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಅದೇ ವೇಳೆ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ಗೆ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮುಂದಿನ ನವೆಂಬರ್ 9 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಸಾಂವಿಧಾನಿಕ ಪೀಠದ ಮುಂದೆ ಸಮಸ್ಯೆ ಉದ್ಭವಿಸಿದಾಗ ಉತ್ತರಿಸುವುದು ಅದರ ಕರ್ತವ್ಯ ಎಂದು ಪೀಠ ಹೇಳಿದೆ. ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಯಲ್ಲಿ “ಲಕ್ಷ್ಮಣ ರೇಖೆ” ಬಗ್ಗೆ ತಿಳಿದಿದೆ. ಆದರೆ ಈ ವಿಷಯವು ಕೇವಲ ತಾತ್ವಿಕ ಪ್ರಕ್ರಿಯೆಯೇ ಎಂದು ನಿರ್ಧರಿಸಲು 2016 ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಪೀಠ ಹೇಳಿದೆ. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮಾತನಾಡಿ, 1978ರಲ್ಲಿ ಜಾರಿಗೆ ಬಂದಿರುವ ಅಧಿಕ ಮುಖಬೆಲೆಯ ಬ್ಯಾಂಕ್ ನೋಟುಗಳ (ಡಿಮಾನಿಟೈಸೇಶನ್) ಕಾಯಿದೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಪ್ರಶ್ನಿಸದ ಹೊರತು, ಸಮಸ್ಯೆ ಹಾಗೇ ಉಳಿಯುತ್ತದೆ ಎಂದಿದ್ದಾರೆ.
SC’s Constitution Bench issues notice on all intervening applications & fresh petitions challenging Centre’s decision to demonetize Rs 500 & 1,000 notes in 2016 & consider whether issue of demonetisation is academic. Centre & RBI seek time to file affidavits. Next hearing, Nov 9 pic.twitter.com/77sNZNeNLj
— ANI (@ANI) October 12, 2022
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಎಸ್‌ಸಿ ಪೀಠವು, ಪ್ರಕ್ರಿಯೆ ತಾತ್ವಿಕ ಆಗಿದೆಯೇ ಅಥವಾ ನಿರುಪಯುಕ್ತವಾಗಿದೆಯೇ ಎಂದು ಘೋಷಿಸಲು, ಎರಡೂ ಕಡೆಯವರು ಒಪ್ಪದ ಕಾರಣ ವಿಷಯವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು.
ಲಕ್ಷ್ಮಣ ರೇಖೆ ಎಲ್ಲಿದೆ ಎಂದು ನಮಗೆ ಯಾವಾಗಲೂ ತಿಳಿದಿದೆ. ಆದರೆ ಅದನ್ನು ಮಾಡಿದ ವಿಧಾನವನ್ನು ಪರಿಶೀಲಿಸಬೇಕು. ಅದನ್ನು ನಿರ್ಧರಿಸಲು ನಾವು ವಕೀಲರನ್ನು ಕೇಳಬೇಕು ಎಂದು ಪೀಠ ಹೇಳಿದೆ.
ಸರ್ಕಾರ ₹ 500 ಮತ್ತು ₹ 1,000 ನೋಟುಗಳನ್ನು ರದ್ದುಗೊಳಿಸಿದಾಗ ನೋಟು ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು (ಅಕ್ಟೋಬರ್ 12 ರಂದು) ವಿಚಾರಣೆ ನಡೆಸಿದೆ. ಒಂದು ಕಕ್ಷಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ಚಿದಂಬರಂ, ಈ ವಿಚಾರವು ತಾತ್ವಿಕ ಅಲ್ಲ ಮತ್ತು ಇದನ್ನು ಉನ್ನತ ನ್ಯಾಯಾಲಯವು ನಿರ್ಧರಿಸಬೇಕು. ಈ ರೀತಿಯ ನೋಟು ಅಮಾನ್ಯೀಕರಣಕ್ಕೆ ಸಂಸತ್ತಿನ ಪ್ರತ್ಯೇಕ ಕಾಯಿದೆಯ ಅಗತ್ಯವಿದೆ ಎಂದರು.
Published On - 5:49 pm, Wed, 12 October 22