
ದೆಹಲಿ: ಗಡಿಯಲ್ಲಿ ಭಾರತೀಯ ಯೋಧರ ಮೇಲೆ ಕಿರಿಕ್ ಮಾಡ್ತಿದ್ದ ಚೀನಾಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಹುದೊಡ್ಡ ಹೊಡೆತ ನೀಡಿದೆ. ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿ ಭಾರತದಿಂದ ಗೇಟ್ ಪಾಸ್ ನೀಡಿದೆ.
ಈ ಸಂಬಂಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. 59 ಚೀನಾ ಆ್ಯಪ್ಗಳನ್ನು ನಿಷೇಧಿಸಿರುವ ಕ್ರಮಕ್ಕೆ ಇಡೀ ದೇಶವೇ ಮೆಚ್ಚಿದೆ. ಇದು ಭಾರತೀಯ ಸ್ಟಾರ್ಟ್ಅಪ್ಗಳಿಗೆ ಉತ್ತಮ ಅವಕಾಶ. ಶೀಘ್ರದಲ್ಲೇ ಬದಲಿ ಹೊಸ ಆ್ಯಪ್ಗಳು ಬರಲಿವೆ. ಆತ್ಮನಿರ್ಭರ ಭಾರತ ಕಡೆಗೆ ಇದು ಸರಿಯಾದ ಹೆಜ್ಜೆ ಎಂದಿದ್ದಾರೆ.
Published On - 2:25 pm, Tue, 30 June 20