ಬರೋಬ್ಬರಿ 14GB ಡೇಟಾ, ಅನಿಯಮಿತ ಕರೆ: ಜಿಯೋದ ಈ ಬಂಪರ್ ಪ್ಲಾನ್ ಗೊತ್ತೇ?

|

Updated on: Sep 26, 2023 | 6:55 AM

Jio New Prepaid Plan: 28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

1 / 6
ಟೆಲಿಕಾಂ ವಲಯದಲ್ಲಿ ಅಗ್ಗದ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುವುದಾದರೆ, ರಿಲಯನ್ಸ್ ಜಿಯೋ (Reliance Jio) ಮೊದಲು ಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಅನೇಕ ರಿಚಾರ್ಜ್ ಪ್ಯಾಕ್‌ಗಳನ್ನು ಹೊಂದಿದೆ. ಆದಾಗ್ಯೂ, ಜಿಯೋ ಕಂಪನಿಯ ಅಗ್ಗದ ಪ್ರಿಪೇಯ್ಡ್ ಯೋಜನೆಗಳು ದೇಶದಲ್ಲಿ ಬಹಳ ಜನಪ್ರಿಯವಾಗಿವೆ.

2 / 6
ಜಿಯೋ ತನ್ನ ಬಳಕೆದಾರರಿಗೆ ಕೇವಲ 123 ರೂ. ಗಳ ಅತ್ಯುತ್ತಮ ಯೋಜನೆಯನ್ನು ನೀಡಿದೆ. ಕಡಿಮೆ ವೆಚ್ಚದಲ್ಲಿ ಸ್ವಲ್ಪ ಹೆಚ್ಚು ಮಾನ್ಯತೆಗಾಗಿ ನೋಡುತ್ತಿರುವವರಿಗೆ ಈ ರಿಚಾರ್ಜ್ ಯೋಜನೆ ಉತ್ತಮವಾಗಿದೆ. ಈ ಆಫರ್ ಸದ್ಯಕ್ಕೆ ಜಿಯೋ ಭಾರತ್ ಫೋನ್​ನಲ್ಲಿ ಮಾತ್ರ ಲಭ್ಯವಿದೆ.

3 / 6
ಜಿಯೋ ಬಳಕೆದಾರರು 123 ರೂ. ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಜೊತೆಗೆ ಈ ಅಗ್ಗದ ಯೋಜನೆ ಉಚಿತ ಕರೆ, ಉತ್ತಮ ಪ್ರಮಾಣದ ಡೇಟಾವನ್ನು ಹುಡುಕುತ್ತಿರುವವರಿಗಾಗಿ ತರಲಾಗಿದೆ. ಜಿಯೋ ಬಳಕೆದಾರರು ದಿನಕ್ಕೆ 500MB ಡೇಟಾವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ 14GB ಡೇಟಾವನ್ನು ನೀಡಲಾಗಿದೆ.

4 / 6
28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

5 / 6
ಇನ್ನು ಜಿಯೋ 1234 ರೂಪಾಯಿಗಳ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ. ಈ ಪ್ಯಾಕ್ ರೀಚಾರ್ಜ್ ಮಾಡಿದರೆ ಇಡೀ ವರ್ಷ ರಿಚಾರ್ಜ್ ಮಾಡುವ ಚಿಂತೆ ಇರುವುದಿಲ್ಲ. ಒಂದು ವರ್ಷದ ಯೋಜನೆಯಲ್ಲಿ ಅಂದರೆ 365 ದಿನಗಳವರೆಗೆ ನೀವು ಅನಿಯಮಿತ ಕರೆ ಸೇರಿದಂತೆ ಹಲವು ಕೊಡುಗೆಗಳನ್ನು ಪಡೆಯುತ್ತೀರಿ.

6 / 6
ಜಿಯೋ 1234 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರು 128GB ಡೇಟಾವನ್ನು ಪಡೆಯುತ್ತಾರೆ. ನೀವು ಹೆಚ್ಚಿನ ಡೇಟಾವನ್ನು ಪಡೆಯುವುದಿಲ್ಲ ಎಂಬುದು ನಿಜ, ಆದರೆ ನೀವು ಒಂದು ವರ್ಷದವರೆಗೆ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ಜಿಯೋದ ಈ 1234 ರೂ. ಯೋಜನೆಯು ಉತ್ತಮವಾಗಿದೆ.