Aditya L1: ಸೂರ್ಯನತ್ತ ಹಾರಿದ ಆದಿತ್ಯ ಎಲ್​ 1 ನೌಕೆ, ಪೋಟೋಗಳಲ್ಲಿ ನೋಡಿ

ಆಯೇಷಾ ಬಾನು

Updated on: Sep 02, 2023 | 3:08 PM

ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್ 1 ಉಡಾವಣೆ ಮಾಡಿದೆ. ಭಾಸ್ಕರನ ಅಧ್ಯಯನ ಮಾಡುವ ಉದ್ದೇಶದಿಂದ ಆದಿತ್ಯ ಎಲ್‌-1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿದೆ.

1 / 7
ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಇಸ್ರೋ ಇಂದು ಮತ್ತೊಂದು  ಮೈಲಿಗಲ್ಲು ಸ್ಥಾಪಿಸಿದೆ. ಚಂದ್ರಯಾನ 3ರ ಯಶಸ್ಸಿನ ಬಳಿಕ ಇಸ್ರೋ ಇದೀಗ ಯಶಸ್ವಿಯಾಗಿ ಸೂರ್ಯನತ್ತ ಆದಿತ್ಯ ಎಲ್​1 ಹಾರಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ಯಶಸ್ವಿಯಾಗಿ ಹಾರಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಇಸ್ರೋ ಇಂದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಚಂದ್ರಯಾನ 3ರ ಯಶಸ್ಸಿನ ಬಳಿಕ ಇಸ್ರೋ ಇದೀಗ ಯಶಸ್ವಿಯಾಗಿ ಸೂರ್ಯನತ್ತ ಆದಿತ್ಯ ಎಲ್​1 ಹಾರಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ಯಶಸ್ವಿಯಾಗಿ ಹಾರಿದೆ.

2 / 7

ಭಾರತದ ಮೊಟ್ಟ ಮೊದಲ ಸೂರ್ಯಯಾನ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಕೋಟ್ಯಂತರ ಭಾರತೀಯರಲ್ಲಿ ಮತ್ತೊಮ್ಮೆ ಹೆಮ್ಮೆಯ ಸಂಭ್ರಮ ಮನೆ ಮಾಡಿದೆ. ಆದಿತ್ಯ ಎಲ್​1 ಉಪಗ್ರಹ ಹೊತ್ತ PSLV-C57 ರಾಕೆಟ್​ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಆಕಾಶಕ್ಕೆ ಹಾರಿದೆ.

3 / 7

ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್​ 1 ನೌಕೆ ಇನ್ನು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಸೂರ್ಯ ನಿಂದ 148.5 ಮಿಲಿಯನ್ ಕಿಲೋ ಮೀಟರ್​ ಮತ್ತು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್​ ದೂರದಲ್ಲಿರುವ L1ಪಾಯಿಂಟ್ ತಲುಪಲು ಈ ನೌಕೆಗೆ ಇನ್ನು ನಾಲ್ಕು ತಿಂಗಳುಗಳ ಕಾಲ ಬೇಕು

4 / 7

ಇಂದು ಸೆಪ್ಟಂಬರ್ 2 2023ರಂದು ಹಾರಿಬಿಟ್ಟಿರುವ ಆದಿತ್ಯ ನೌಕೆ 2024ರ ಜನವರಿ 12ರಂದು ಎಲ್​ 1 ಕಕ್ಷೆಗೆ ತಲುಪಲಿದೆ. ಭೂಕಕ್ಷೆಗೆ ಸೇರಿಸಿದ ಬಳಿಕ ಕ್ರೂಸ್​ ಫೇಸ್​ನ ವೇಗವನ್ನು ಹೆಚ್ಚಿಸಲಾಗುತ್ತೆ. ಬಳಿಕ ಅದನ್ನು ಹಾಲೋ ಆರ್ಬಿಟ್​ಗೆ ಸೇರಿಸಲಾಗುತ್ತದೆ. ಬಳಿಕ ಅಲ್ಲಿಂದ ಬೂಸ್ಟ್​ ಮಾಡುವ ಮೂಲಕ L1 ಕಡೆಗೆ ಪಾಯಿಂಟ್​ಗೆ ಸೇರಿಸಲಾಗುತ್ತದೆ.

5 / 7

: L1 ಪಾಯಿಂಟ್​ಗೆ ಸೇರಿದ ಬಳಿಕ ಆರ್ಬಿಟರ್​ ಮುಖ್ಯವಾಗಿ ಸೂರ್ಯನ ಅತ್ಯಂತ ಹೊರಪದರಾದ ಕೊರೊನಾ ಬಗ್ಗೆ ಅಧ್ಯಯನ ನಡೆಸಲಿದೆ. ಸೂರ್ಯನ ಕರೊನಾ ಪದರದಲ್ಲಿನ ಅತಿಯಾದ ಶಾಖ ಉತ್ಪತ್ತಿಗೆ ಕಾರಣವೇನು. ಸೂರ್ಯನ ಒಳಪದರಕ್ಕಿಂತ ಕೊರೊನಾ ಪದರು ಅತಿ ಹೆಚ್ಚು ಶಾಖ ಹೊಂದಿದ್ದೇಕೆ? ಎಂಬ ಅಂಶಗಳ ಮೇಲೆ ಅಧ್ಯಯನ ನಡೆಯಲಿದೆ.

6 / 7

ಇಂದು ಹಾರಿ ಬಿಟ್ಟಿರುವ ಆದಿತ್ಯ ಎಲ್​1 ನೌಕೆ ತನ್ನ ನಿಗದಿತ ಗುರಿ ಮುಟ್ಟಿದ್ದೇ ಆದ್ರೆ ಭಾರತ L1 ಪಾಯಿಂಟ್ ತಲುಪಿದ ಜಗತ್ತಿನ ಮೂರನೇ ದೇಶ ಎನಿಸಿಕೊಳ್ಳಲಿದೆ. ಇನ್ನು ಕಕ್ಷೆಗೆ ತಲುಪಿದ ಬಳಿಕ ಈ ಆದಿತ್ಯ ಎಲ್​1 ಒಟ್ಟು 365 ದಿನಗಳ ಕಾಲ ನಿರಂತರ ಸೂರ್ಯನ ಅಧ್ಯಯನ ನಡೆಸಲಿದೆ. ಅಧ್ಯಯನ ನಡೆಸಿದ ಬಳಿಕ L1 ನೌಕೆ ಇಸ್ರೋಗೆ ನೇರವಾಗಿ ಮಾಹಿತಿ ನೀಡಲಿದೆ.

7 / 7

. 11 ವರ್ಷಕ್ಕೊಮ್ಮೆ ನಡೆಯಲಿರುವ ಸೋಲಾರ್ ಮ್ಯಾಕ್ಸಿಮಮ್ ವೇಳೆ ಸೂರ್ಯನ ಮೇಲ್ಮೈಯಲ್ಲಿ ಸೌರ ಚಟುವಟಿಕೆ ಅತಿಯಾಗಿರುತ್ತದೆ. ಅತಿಯಾದ ಸೌರ ಚಟುವಟಿಕಿಯೇ ಸೋಲಾರ ಮ್ಯಾಕ್ಸಿಮಮ್ ಎಂದು ಕರೆಯಲಾಗುತ್ತದೆ. ಸೋಲಾರ್ ಮ್ಯಾಕ್ಸಿಮಮ್​ನಿಂದ ಉಂಟಾಗುವ ಪರಿಣಾಮ, ಇದರಿಂದ ಭೂಮಿ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಯಲಿದೆ.

Published On - 3:06 pm, Sat, 2 September 23

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us