Arshin Kulkarni: 13 ಎಸೆತಗಳಲ್ಲಿ 78 ರನ್ ಚಚ್ಚಿದ ಅರ್ಶಿನ್: ದಾಖಲೆಗಳೆಲ್ಲ ಧೂಳೀಪಟ, 1 ರನ್​ಗಳ ರೋಚಕ ಜಯ

Updated on: Jun 20, 2023 | 10:58 AM

MPL 2023: ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಕೇವಲ 53 ಎಸೆತಗಳಲ್ಲಿ 117 ರನ್ ಸಿಡಿಸಿ ಅರ್ಶಿನ್ ಕುಲ್ಕರ್ಣಿ ಮಿಂಚಿದ್ದಾರೆ. ಕೇವಲ 46 ಎಸೆತಗಳಲ್ಲಿ ಇವರು ಶತಕ ಪೂರೈಸಿದರು. ಎಂಪಿಎಲ್​ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಬ್ಯಾಟರ್ ಇವರಾಗಿದ್ದಾರೆ.

1 / 6
ಟಿ20 ಕ್ರಿಕೆಟ್​ನಲ್ಲಿ ಈಗ ಶತಕ ಸಿಡಿಸುವುದು ದೊಡ್ಡ ಸಾಹಸವೇನು ಅಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ಮೇಲೆ ಇದು ಮಾಮೂಲಾಗಿ ಬಿಟ್ಟಿದೆ. ಯುವ ಆಟಗಾರರು ಲೀಲಜಾಲವಾಗಿ ಸೆಂಚುರಿ ಬಾರಿಸುತ್ತಿದ್ದಾರೆ. ಅದೇರೀತಿ ಸದ್ಯ ಸಾಗುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಕೂಡ ಅರ್ಶಿನ್ ಕುಲ್ಕರ್ಣಿ ಎಂಬ ಬ್ಯಾಟರ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಈಗ ಶತಕ ಸಿಡಿಸುವುದು ದೊಡ್ಡ ಸಾಹಸವೇನು ಅಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ಮೇಲೆ ಇದು ಮಾಮೂಲಾಗಿ ಬಿಟ್ಟಿದೆ. ಯುವ ಆಟಗಾರರು ಲೀಲಜಾಲವಾಗಿ ಸೆಂಚುರಿ ಬಾರಿಸುತ್ತಿದ್ದಾರೆ. ಅದೇರೀತಿ ಸದ್ಯ ಸಾಗುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಕೂಡ ಅರ್ಶಿನ್ ಕುಲ್ಕರ್ಣಿ ಎಂಬ ಬ್ಯಾಟರ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

2 / 6

ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಕೇವಲ 53 ಎಸೆತಗಳಲ್ಲಿ 117 ರನ್ ಸಿಡಿಸಿ ಅರ್ಶಿನ್ ಕುಲ್ಕರ್ಣಿ ಮಿಂಚಿದ್ದಾರೆ. ಕೇವಲ 46 ಎಸೆತಗಳಲ್ಲಿ ಇವರು ಶತಕ ಪೂರೈಸಿದರು. ಎಂಪಿಎಲ್​ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಬ್ಯಾಟರ್ ಇವರಾಗಿದ್ದಾರೆ.

3 / 6

ಪುಣೇರಿ ಬಪ್ಪಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರ ಮೋಡಿ ಮಾಡದ ಅರ್ಶಿನ್ ಕುಲ್ಕರ್ಣಿ ಬೌಲಿಂಗ್​ನಲ್ಲಿ ಕೂಡ 21 ರನ್​ಗೆ 4 ವಿಕೆಟ್ ಕಿತ್ತು ಮಾರಕವಾದರು. ಇವರ ಬೌಲಿಂಗ್ ಸಹಾಯದಿಂದ ಈಗಲ್ ನಶಿಕ್ ಟೈಟಾನ್ಸ್ ತಂಡ 1 ರನ್​ಗಳ ರೋಚಕ ಜಯ ಸಾಧಿಸಿತು.

4 / 6

ಮೊದಲು ಬ್ಯಾಟಿಂಗ್ ಮಾಡಿದ ಈಗಲ್ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು. ಅರ್ಶಿನ್ 13 ಸಿಕ್ಸರ್ ಮತ್ತು 3 ಫೋರ್ ಬಾರಿಸಿ 117 ರನ್ ಚಚ್ಚಿದರು. 13 ಸಿಕ್ಸರ್ ಮೂಲಕ 13 ಎಸೆತಗಳಲ್ಲಿ 78 ರನ್ ಸಿಕ್ಸ್ ಮೂಲಕವೇ ಬಂದವು.

5 / 6

ಟಾರ್ಗೆಟ್ ಬೆನ್ನಟ್ಟಿದ ಪುಣೇರಿ ತಂಡ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ರುತುರಾಜ್ ಗಾಯಕ್ವಾಡ್ 23 ಎಸೆತಗಳಲ್ಲಿ 50 ರನ್ ಚಚ್ಚಿದರು. ಆದರೆ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

6 / 6

ಕೊನೆಯ 6 ಎಸೆತಗಳಲ್ಲಿ ಪುಣೇರಿ ತಂಡಕ್ಕೆ ಗೆಲ್ಲಲು 6 ರನ್​ಗಳು ಬೇಕಾಗಿದ್ದವು. ಆದರೆ, ಅರ್ಶಿನ್ ಬೌಲಿಂಗ್​ನಲ್ಲಿ ಪುಣೇರಿ 5 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈಗಲ್ ಟೈಟಾನ್ಸ್ 1 ರನ್​ಗಳ ರೋಚಕ ಜಯ ಸಾಧಿಸಿತು.

Published On - 10:56 am, Tue, 20 June 23

Loading...
Unable to load recommendations.
Follow Us