ICC ODI World Cup 2027: ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಗೊತ್ತೇ?: ಎಷ್ಟು ತಂಡಗಳಿರುತ್ತವೆ?

|

Updated on: Nov 21, 2023 | 9:30 AM

2027 ICC ODI World Cup: ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಾಲ್ಕು ವರ್ಷಗಳ ನಂತರ ಅಂದರೆ 2027ರಲ್ಲಿ ನಡೆಯಲಿದೆ. ಇದು 14ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ. ಐಸಿಸಿ ಆಯೋಜಿಸಲಿರುವ ಈ ಟೂರ್ನಿ 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ.

1 / 7
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ತೆರೆಬಿದ್ದಾಗಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಮುಂದಿನ ಏಕದಿನ ವಿಶ್ವಕಪ್ ಬಗ್ಗೆ ಚರ್ಚೆ ಶುರುವಾಗಿದೆ.

2 / 7
ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಾಲ್ಕು ವರ್ಷಗಳ ನಂತರ ಅಂದರೆ 2027ರಲ್ಲಿ ನಡೆಯಲಿದೆ. ಇದು 14ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ. ಐಸಿಸಿ ಆಯೋಜಿಸಲಿರುವ ಈ ಟೂರ್ನಿ 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ.

3 / 7
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027 ರ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಜಂಟಿ ಆತಿಥೇಯರು. ಹೀಗಾಗಿ ಈ ತಂಡಗಳು ಆತಿಥೇಯ ರಾಷ್ಟ್ರವಾಗಿರುವ ಕಾರಣ ನೇರವಾಗಿ ಅರ್ಹತೆ ಪಡೆದಿವೆ.

4 / 7
ಈ ಎರಡು ತಂಡಗಳ ಜೊತೆಗೆ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ ಎಂಟು ಸ್ಥಾನ ಪಡೆಯುವ ತಂಡಗಳು ನೇರವಾಗಿ ಏಕದಿನ ವಿಶ್ವಕಪ್ 2027ಕ್ಕೆ ಅರ್ಹತೆ ಪಡೆಯಲಿವೆ. ಉಳಿದ ನಾಲ್ಕು ಸ್ಥಾನಗಳನ್ನು ಗ್ಲೋಬಲ್ ಕ್ವಾಲಿಫೈಯರ್ ಟೂರ್ನಮೆಂಟ್ ನಿರ್ಧರಿಸುತ್ತದೆ.

5 / 7
ವಿಶೇಷ ಎಂದರೆ ನಮೀಬಿಯಾ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಲಿದೆ. ಆದಾಗ್ಯೂ, ಅವರ ಭಾಗವಹಿಸುವಿಕೆ ಇನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ಏಕೆಂದರೆ ನಮೀಬಿಯಾ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿಲ್ಲ. ಅಂದರೆ ಪಂದ್ಯಾವಳಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಮೀಬಿಯಾ ಅರ್ಹತಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 2003 ರಿಂದ ನಮೀಬಿಯಾ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಗಮನಿಸಬೇಕಾಗದ ಸಂಗತಿ.

6 / 7
2027 ಕ್ರಿಕೆಟ್ ವಿಶ್ವಕಪ್ ಸ್ವರೂಪವು ಎರಡು ಗುಂಪುಗಳನ್ನು ಒಳಗೊಂಡಿದೆ. ಒಂದು ಗುಂಪಿಯಲ್ಲಿ ಏಳು ತಂಡಗಳು ಇರುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶಿಸುತ್ತವೆ. ನಂತರ ಅಂತಿಮ ವಿಜೇತರನ್ನು ನಿರ್ಧರಿಸಲು ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆಯಲಿವೆ.

7 / 7
ಗುಂಪು ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಎಲ್ಲ ತಂಡಗಳ ವಿರುದ್ಧ ಆಡುತ್ತದೆ. ಈ ಸ್ವರೂಪವು 2003ರ ವಿಶ್ವಕಪ್ ರೀತಿಯಲ್ಲಿ ಇರುತ್ತದೆ. 2027 ರ ಆವೃತ್ತಿಯು ಮತ್ತೊಮ್ಮೆ ಪಾಯಿಂಟ್ ಕ್ಯಾರಿ ಫಾರ್ವರ್ಡ್ (PCF) ನ ಪರಿಷ್ಕೃತ ಸ್ವರೂಪವನ್ನು ಪರಿಚಯಿಸುತ್ತದೆ. ಈ ವಿಧಾನವನ್ನು 1999 ರ ವಿಶ್ವಕಪ್‌ನಲ್ಲಿ ಬಳಸಲಾಗಿತ್ತು.