IND vs SA 1st Test: WTC ಪಾಯಿಂಟ್ಸ್ ಟೇಬಲ್​ನಲ್ಲಿ ಕುಸಿದ ಭಾರತ: ಬಾಂಗ್ಲಾದೇಶಕ್ಕಿಂತ ಕಳಪೆ ಸ್ಥಿತಿಯಲ್ಲಿ ರೋಹಿತ್ ಪಡೆ

|

Updated on: Dec 29, 2023 | 8:47 AM

WTC Points Table: ಈ ಏಕೈಕ ಗೆಲುವು ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಏಳನೇ ಸ್ಥಾನದಿಂದ ನೇರವಾಗಿ ಮೊದಲ ಸ್ಥಾನಕ್ಕೆ ಏರಿದೆ. ಈ ಹೀನಾಯ ಸೋಲಿನಿಂದ ಭಾರತದ ಸ್ಥಾನ ಕುಸಿದಿದೆ. ಟೀಮ್ ಇಂಡಿಯಾ ಮೊದಲ ಸ್ಥಾನದಿಂದ ನೇರವಾಗಿ ಐದನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾ ಮೂರನೇ ಸ್ಥಾನದಲ್ಲಿದೆ.

1 / 7
ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು. ವಿರಾಟ್ ಕೊಹ್ಲಿ ಹೊರತು ಪಡಿಸಿ ಉಳಿದ ಬ್ಯಾಟರ್​ಗಳು ಯಾರೂ ಯಶಸ್ಸು ಸಾಧಿಸಲಿಲ್ಲ.

2 / 7
ಈ ಮೂಲಕ ಮೂರನೇ ದಿನವೇ ಭಾರತದ ಸೋಲುಂದು ಪಂದ್ಯ ಅಂತ್ಯಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲೂ ಬೌಲ್ಡ್ ಆದರು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಭಾರತದ ವಿರುದ್ಧ 32 ರನ್‌ಗಳ ಜಯ ಸಾಧಿಸಿತು.

3 / 7
ಈ ಏಕೈಕ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಬಹುದೊಡ್ಡ ಅನುಕೂಲವಾಗಿದೆ. ಹರಿಣಗಳ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಏಳನೇ ಸ್ಥಾನದಿಂದ ನೇರವಾಗಿ ಮೊದಲ ಸ್ಥಾನಕ್ಕೆ ಏರಿದೆ. ಮತ್ತು ಈ ಹೀನಾಯ ಸೋಲಿನಿಂದ ಭಾರತದ ಸ್ಥಾನ ಕುಸಿದಿದೆ. ಟೀಮ್ ಇಂಡಿಯಾ ಮೊದಲ ಸ್ಥಾನದಿಂದ ನೇರವಾಗಿ ಐದನೇ ಸ್ಥಾನಕ್ಕೆ ಕುಸಿದಿದೆ.

4 / 7
ಇದೀಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ರೇಸ್‌ನಲ್ಲಿರಲು ಟೀಮ್ ಇಂಡಿಯಾ ಇನ್ನಿಲ್ಲದ ಕಸರತ್ತು ನಡೆಸಬೇಕಿದೆ. ಸರಣಿ ಸಮಬಲಗೊಳಿಸುವುದೂ ಸವಾಲಾಗಿದೆ. ಅಚ್ಚರಿ ಎಂದರೆ ಭಾರತ ತಂಡ ಪಾಯಿಂಟ್ ಟೇಬಲ್​ನಲ್ಲಿ ಬಾಂಗ್ಲಾದೇಶ ತಂಡಕ್ಕಿಂತಲೂ ಕೆಳಗಿದೆ. ಬಾಂಗ್ಲಾ ಮೂರನೇ ಸ್ಥಾನದಲ್ಲಿದೆ.

5 / 7
ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶೇಕಡಾ 100 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಫಲಿತಾಂಶದ ನಡುವೆ, ಪಾಕ್ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಮೂರನೇ ಸ್ಥಾನದಲ್ಲಿವೆ.

6 / 7
ಭಾರತದ ಗೆಲುವಿನ ಶೇಕಡಾವಾರು 67 ರಿಂದ 44.44 ಕ್ಕೆ ಇಳಿದಿದೆ. ಹಾಗಾಗಿ ಐದನೇ ಸ್ಥಾನಕ್ಕೆ ಕುಸಿಯಿತು. ಆಸ್ಟ್ರೇಲಿಯಾ ಶೇಕಡಾ 41.67 ರೊಂದಿಗೆ ಆರನೇ ಸ್ಥಾನದಲ್ಲಿದೆ, ವೆಸ್ಟ್ ಇಂಡೀಸ್ 16.67 ಶೇಕಡಾದೊಂದಿಗೆ ಏಳನೇ ಮತ್ತು ಇಂಗ್ಲೆಂಡ್ 15 ಶೇಕಡಾದೊಂದಿಗೆ ಎಂಟನೇ ಸ್ಥಾನದಲ್ಲಿದೆ.

7 / 7
ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗಿತ್ತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 408 ರನ್ ಗಳಿಸಿ 163 ರನ್ ಮುನ್ನಡೆ ಗಳಿಸಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 131 ರನ್ ಗಳಿಗೆ ಆಲೌಟ್ ಆಯಿತು. ರೋಹಿತ್ ಸೇನಾ 32 ರನ್‌ಗಳಿಂದ ಇನ್ನಿಂಗ್ಸ್ ಕಳೆದುಕೊಂಡಿತು.