Prithvi Shaw: ಪಂಜಾಬ್-ಡೆಲ್ಲಿ ಪಂದ್ಯದ ಮಧ್ಯೆ ಕಾಣಿಸಿಕೊಂಡ ಪೃಥ್ವಿ ಶಾ ಗರ್ಲ್ ಫ್ರೆಂಡ್: ಯಾರು ಈಕೆ ಗೊತ್ತೇ?

|

Updated on: May 18, 2023 | 11:56 AM

Nidhhi Tapadia: ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಪೃಥ್ವಿ ಅರ್ಧಶತಕ ಬಾರಿಸುತ್ತಿದ್ದಂತೆ ಅತ್ತ ಇವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುವ ನಿಧಿ ತಪಾಡಿಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರೂ ಒಂದೇ ರೀತಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

1 / 7
ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದರು. 38 ಎಸೆತಗಳಲ್ಲಿ 54 ರನ್ ಸಿಡಿಸಿ ಐಪಿಎಲ್ 2023 ರಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು.

2 / 7
ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಪೃಥ್ವಿ ಅರ್ಧಶತಕ ಬಾರಿಸುತ್ತಿದ್ದಂತೆ ಅತ್ತ ಇವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುವ ನಿಧಿ ತಪಾಡಿಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರೂ ಒಂದೇ ರೀತಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

3 / 7
ಮಾಡೆಲ್ ಕಮ್ ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಹಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಈ ಜೋಡಿಯು ಜೊತೆಯಾಗಿ ಕಾಣಿಸಿಕೊಂಡಿದ್ದರು.

4 / 7
ಇಂಟರ್ನೆಟ್​ನಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಿಧಿ ತಪಾಡಿಯಾಗೆ ಇನ್​ಸ್ಟಾಗ್ರಾಮ್​ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಬುಧವಾರ ಧರ್ಮಶಾಲಾದ ನಡೆದ ಪಂದ್ಯ ವೀಕ್ಷಿಸಲು ಇವರು ಕೂಡ ಬಂದಿದ್ದರು.

5 / 7
ನಿಧಿ ತಪಾಡಿಯಾ ಅವರು ಅನೇಕ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದ ಟಿವಿ ಶೋ CID ಯಲ್ಲಿ ಕೂಡ ನಟಿಸಿದ್ದರು.

6 / 7
ಮೂಲತಃ ಮಹಾರಾಷ್ಟ್ರದ ನಾಸಿಕ್‌ ನವರಾಗಿರುವ ನಿಧಿ ಇಂಟರ್ನೆಟ್ ಮತ್ತು ಇನ್‌ಸ್ಟಾಗ್ರಾಮ್​ನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.

7 / 7
ಈ ವರ್ಷದ ಆರಂಭದಲ್ಲಿ ಪೃಥ್ವಿ ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ನಿಧಿ ತಪಾಡಿಯಾ ಅವರೊಂದಿಗೆ ಪೋಸ್ ಕೂಡ ನೀಡಿದ್ದರು.