RR vs RCB: ನಾಳೆ ಆರ್ಸಿಬಿ ಪಂದ್ಯ: ಬೆಂಗಳೂರಿಗೆ ಗೆದ್ದರಷ್ಟೇ ಉಳಿಗಾಲ: ಸೋತರೆ?
RCB, IPL 2023: ರಾಜಸ್ಥಾನ್ ರಾಯಲ್ಸ್-ಆರ್ಸಿಬಿ ನಡುವಣ ನಾಳಿನ ಪಂದ್ಯ ಹೈವೋಲ್ಟೇಜ್ ಆಗುವುದು ಖಚಿತ. ಏಕೆಂದರೆ ಪ್ಲೇಆಫ್ ರೇಸ್ನಲ್ಲಿರುವ ಎರಡೂ ತಂಡಗಳಿಗೂ ಈ ಪಂದ್ಯದಲ್ಲಿ ಜಯಗಳಿಸಬೇಕಾದ ಅನಿವಾರ್ಯತೆ ಇದೆ.
1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಹತ್ವದ ಘಟ್ಟದತ್ತ ತಲುಪುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್ರೇಟ್ ಹೊಂದಿದೆ.
2 / 7
ಪ್ಲೇ ಆಫ್ಗೇರಲು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಬೆಂಗಳೂರಿಗೆ ಉಳಿದಿರುವುದು ಕೇವಲ ಮೂರು ಪಂದ್ಯ ಮಾತ್ರ. ಇದರಲ್ಲಿ ಮೇ 14 ಭಾನುವಾರದಂದು ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.
3 / 7
ಆರ್ಆರ್ ವಿರುದ್ಧದ ಪಂದ್ಯದಕ್ಕೆ ಈಗಾಗಲೇ ಆರ್ಸಿಬಿ ಪ್ಲೇಯರ್ಗಳು ಜೈಪುರಕ್ಕೆ ತಲುಪಿದ್ದಾರೆ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಆರ್ಸಿಬಿ ಎಲ್ಲ ಆಟಗಾರರು ಕಠಿಣ ಅಭ್ಯಾಸ ಶುರು ನಡೆಸುತ್ತಿದ್ದಾರೆ.
4 / 7
ನಾಳಿನ ಪಂದ್ಯ ಹೈವೋಲ್ಟೇಜ್ ಆಗುವುದು ಖಚಿತ. ಏಕೆಂದರೆ ಪ್ಲೇಆಫ್ ರೇಸ್ನಲ್ಲಿರುವ ಎರಡೂ ತಂಡಗಳಿಗೂ ಈ ಪಂದ್ಯದಲ್ಲಿ ಜಯಗಳಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ 12 ಅಂಕಗಳನ್ನು ಸಂಪಾದಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುಂದಿನ ಪಂದ್ಯದಲ್ಲಿ ಸೋಲಿಸಿದರೆ ಆರ್ಸಿಬಿ ತಂಡದ ಒಟ್ಟು ಪಾಯಿಂಟ್ಸ್ 12 ಆಗಲಿದೆ.
5 / 7
ಈ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಅವಕಾಶ ಆರ್ಸಿಬಿ ತಂಡಕ್ಕೆ ಸಿಗಲಿದೆ. ಅಲ್ಲದೆ ಆರ್ಸಿಬಿ ಮುಂದಿನ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ರೇಸ್ನಲ್ಲಿ ಉಳಿದುಕೊಳ್ಳಬಹುದು. ಇದರ ಜೊತೆಗೆ ಲಖನೌ ಮುಂದಿನ 3 ಪಂದ್ಯಗಳಲ್ಲಿ ಒಂದರಲ್ಲಿ ಸೋತರೆ, ಆರ್ಸಿಬಿ ತಂಡಕ್ಕೆ ಪ್ಲೇಆಫ್ ಹಂತಕ್ಕೇರಲು ಸುವರ್ಣಾವಕಾಶ ದೊರೆಯಲಿದೆ.
6 / 7
ಹೀಗೆ ಕೆಲವು ಲೆಕ್ಕಚಾರಗಳ ಮೂಲಕ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಜೀವಂತವಾಗಿದೆ. ಆದರೆ, ಮುಂದಿನ ಮೂರು ಪಂದ್ಯಗಳಲ್ಲಿ ಬೆಂಗಳೂರು ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದರ ಮೇಲೆ ಈ ಎಲ್ಲ ಲೆಕ್ಕಚಾರ ನಿಂತಿದೆ. ಇದಕ್ಕಾಗಿ ಫಾಫ್ ಮಾಸ್ಟರ್ ಪ್ಲಾನ್ ರೂಪಿಸುವುದು ಖಚಿತ.
7 / 7
ಮೇ. 14 ರಂದು ಆರ್ಸಿಬಿ ತಂಡ ಆರ್ಆರ್ ವಿರುದ್ಧ ಆಡಿದರೆ ಬಳಿಕ ಮೇ. 18 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ನಂತರ ಮೇ. 21 ರಂದು ಲೀಗ್ನ ಕೊನೆಯ ಪಂದ್ಯ ಆರ್ಸಿಬಿ ಆಡಲಿದ್ದು ಗುಜರಾತ್ ಟೈಟಾನ್ಸ್ ಎದುರಾಳಿ ಆಗಿದೆ.
Published On - 11:41 am, Sat, 13 May 23