IND vs AUS 3rd ODI: ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ
Rohit Sharma in Post match Presentation: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಆದರೆ, ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ನೋಡಿ.
1 / 7
ಭಾರತ ತಂಡದ ದಿಗ್ಗಜ ಆಟಗಾರರ ಕಮ್ಬ್ಯಾಕ್ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಪಡೆ ವೈಫಲ್ಯ ಅನುಭವಿಸಿ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಎಡವಿತು.
2 / 7
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ನೋಡಿ. ''ನಾನು ತುಂಬಾ ಸಂತಸವಾಗಿದ್ದೇನೆ. ಇಂದು ನಾನು ಹೊಡೆತ ಶಾಟ್ ಉತ್ತಮವಾಗಿತ್ತು, ಇದರಿಂದ ಖುಷಿ ಆಗಿದೆ,'' ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
3 / 7
ಕೊನೆಯ 7-8 ಏಕದಿನ ಪಂದ್ಯಗಳಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ವಿಭಿನ್ನ ಪರಿಸ್ಥಿತಿಗಳು ಮತ್ತು ವಿಭಿನ್ನ ತಂಡಗಳ ವಿರುದ್ಧ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಆ ಸವಾಲಿಗೆ ನಾವು ಉತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ನಾನು ಭಾವಿಸಿದ್ದೇನೆ - ರೋಹಿತ್ ಶರ್ಮಾ.
4 / 7
ದುರದೃಷ್ಟವಶಾತ್ ನಾವು ಇಂದು ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಜಸ್ಪ್ರಿತ್ ಬುಮ್ರಾ ಮೇಲೆ ನಾನು ಬಹಳ ಸಂತೋಷವಾಗಿದ್ದೇನೆ. ಅವರು ತುಂಬಾ ಕೌಶಲ್ಯವನ್ನು ಹೊಂದಿದ್ದಾರೆ. ಒಂದು ಕೆಟ್ಟ ಆಟ ಎಲ್ಲರಿಗೂ ಸಂಭವಿಸಬಹುದು. ಆದರೆ, ಅವರು ಮಾನಸಿಕವಾಗಿ ಆ ವಿಚಾರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯ ಎಂಬುದು ರೋಹಿತ್ ಶರ್ಮಾ ಮಾತು.
5 / 7
ನಮ್ಮ ತಂಡದಲ್ಲಿರುವ 15 ಆಟಗಾರರ ಬಗ್ಗೆ ಮಾತನಾಡುವಾಗ ನಮಗೆ ಏನು ಬೇಕು ಎಂದು ಸ್ಪಷ್ಟವಾಗಿದೆ. ನಾವು ಗೊಂದಲಕ್ಕೀಡಾಗಿಲ್ಲ, ತಂಡವಾಗಿ ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ. ಪ್ರತಿಯೊಬ್ಬರೂ ಬಂದು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ಬಯಸುತ್ತೇವೆ. ಈ ಮೂಲಕವೇ ನಾವು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
6 / 7
ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಮಿಚೆಲ್ ಮಾರ್ಶ್ 84 ಎಸೆತಗಳಲ್ಲಿ 96, ಸ್ಟೀವ್ ಸ್ಮಿತ್ 74, ಲಾಬುಶೇನ್ 72 ಹಾಗೂ ವಾರ್ನರ್ 56 ರನ್ ಸಿಡಿಸಿದರು. ಭಾರತ ಪರ ಬುಮ್ರಾ 3 ವಿಕೆಟ್ ಪಡೆದರು.
7 / 7
ಟಾರ್ಗೆಟ್ ಬೆನ್ನಟ್ಟಿದ ಭಾರತ 49.4 ಓವರ್ಗಳಲ್ಲಿ 286 ರನ್ಗೆ ಆಲೌಟ್ ಆಯಿತು. ತಂಡದ ಪರ ರೋಹಿತ್ 57 ಎಸೆತಗಳಲ್ಲಿ 81 ರನ್ ಸಿಡಿಸಿದರೆ, ಕೊಹ್ಲಿ 56 ಹಾಗೂ ಶ್ರೇಯಸ್ ಅಯ್ಯರ್ 48 ರನ್ ಗಳಿಸಿದರು. ಉಳಿದ ಬ್ಯಾಟರ್ಗಳೆಲ್ಲ ವೈಫಲ್ಯ ಅನುಭವಿಸಿದರು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್ವೆಲ್ 4 ವಿಕೆಟ್ ಕಿತ್ತು ಮಿಂಚಿದರು.