IND vs SA 1st Test: ಭಾರತದ್ದು ಕಳಪೆ ಬ್ಯಾಟಿಂಗ್ ಎಂದವರ ಮೈಚಳಿ ಬಿಡಿಸಿದ ರೋಹಿತ್ ಶರ್ಮಾ: ಏನಂದ್ರು ನೋಡಿ

|

Updated on: Dec 29, 2023 | 9:30 AM

Rohit Sharma post match presentation: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ವಿಭಾಗವನ್ನು ಬೆಂಬಲಿಸಿದ್ದಾರೆ. ಕಳಪೆ ಬ್ಯಾಟಿಂಗ್ ಎಂದವರಿಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟಿದ್ದಾರೆ.

1 / 7
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಮತ್ತು 32 ರನ್‌ಗಳ ಸೋಲು ಅನುಭವಿಸಿದೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮೂರು ದಿನಗಳ ಒಳಗೆ ಮುಕ್ತಾಯಗೊಂಡ ಪಂದ್ಯದಲ್ಲಿ, ಭಾರತೀಯ ಬ್ಯಾಟರ್‌ಗಳು ಎರಡೂ ಇನ್ನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ತೋರಿದರು.

2 / 7
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ 101 ರನ್ ಮತ್ತು ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 76 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ತಮ್ಮ ಪ್ರತಿಭೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವಿಭಾಗವನ್ನು ದೂರಲಿಲ್ಲ.

3 / 7
ನಮ್ಮ ಬ್ಯಾಟರ್​ಗಳನ್ನು ಮೋಟಿವೇಟ್ ಮಾಡುವ ಅಗತ್ಯವಿಲ್ಲ. ಅವರೆಲ್ಲರೂ ಅಂತರರಾಷ್ಟ್ರೀಯ ಕ್ರಿಕೆಟಿಗರು. ಈ ಪ್ರದರ್ಶನವು ಕೇವಲ ಒಂದು ಪಂದ್ಯದ್ದು ಮಾತ್ರ. ನಾವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ. ನಾವು ಆಸ್ಟ್ರೇಲಿಯಾದಲ್ಲಿ ನಮ್ಮ ಬ್ಯಾಟಿಂಗ್‌ನಿಂದ ಗೆದ್ದಿದ್ದೇವೆ. ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಡ್ರಾ ಮಾಡಿದ್ದೇವೆ ಎಂದು ಖಡಕ್ ಆಗಿ ರೋಹಿತ್ ಶರ್ಮಾ ಹೇಳಿದ್ದಾರೆ.

4 / 7
ನಮಗೆ ಭಾರತದ ಹೊರಗೆ ಬ್ಯಾಟ್ ಮಾಡುವುದು ಗೊತ್ತಿಲ್ಲ ಅಂತಲ್ಲ. ಕೆಲವೊಮ್ಮೆ ಎದುರಾಳಿ ತಂಡ ನಿಮಗಿಂತ ಚೆನ್ನಾಗಿ ಆಡುತ್ತೆ. ಅವರು 110 ಓವರ್ ಬ್ಯಾಟ್ ಮಾಡಿದ್ರು ನಮಗೆ ಅದನ್ನೂ ಮಾಡಲಾಗಲಿಲ್ಲ. ನೀವು ಹೋಗಿ ನಮ್ಮ ಕೊನೆಯ ನಾಲ್ಕೈದು ವಿದೇಶಿ ಪಂದ್ಯದ ಸ್ಕೋರ್‌ಕಾರ್ಡ್‌ಗಳನ್ನು ಪರಿಶೀಲಿಸಿ ಎಂದು ರೋಹಿತ್ ಹೇಳಿದರು.

5 / 7
ಇದರ ನಡುವೆ, 400 ಕ್ಕೂ ಹೆಚ್ಚು ರನ್ ನೀಡಿದ ಭಾರತೀಯ ವೇಗಿಗಳ ಕಳಪೆ ಬೌಲಿಂಗ್ ಪ್ರದರ್ಶನವನ್ನು ರೋಹಿತ್ ಟೀಕಿಸಿದ್ದಾರೆ. "ಇದು 400 ರನ್‌ಗಳ ವಿಕೆಟ್ ಆಗಿರಲಿಲ್ಲ, ನಾವು ಹೆಚ್ಚು ರನ್ ಬಿಟ್ಟುಕೊಟ್ಟಿದ್ದೇವೆ. ನಾವು ಚೆಂಡನ್ನು ಉತ್ತಮವಾಗಿ ಹಾಕಿದೆವು, ಆದರೆ ಯಶಸ್ಸು ಸಿಗಲಿಲ್ಲ. ಒಬ್ಬ ಬೌಲರ್ (ಬುಮ್ರಾ) ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ; ಇತರ ಮೂವರು ವೇಗಿಗಳು ತಮ್ಮ ಪ್ರದರ್ಶನವನ್ನು ನೀಡಬೇಕಾಗಿತ್ತು ಎಂಬುದು ರೋಹಿತ್ ಮಾತು.

6 / 7
ದಕ್ಷಿಣ ಆಫ್ರಿಕಾ ಹೇಗೆ ಬೌಲಿಂಗ್ ಮಾಡಿತು ಎಂಬುದನ್ನು ನೋಡಿ ನಾವು ಕಲಿಯಬಹುದು. ಬುಮ್ರಾ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ, ಉಳಿದ ಬೌಲರ್​ಗಳಿಂದ ಬುಮ್ರಾಗೆ ಬೆಂಬಲ ಸಿಗಲಿಲ್ಲ. ಈರೀತಿ ನಡೆಯುತ್ತದೆ. ನಾವು ಬಯಸಿದ ರೀತಿಯಲ್ಲಿ ಈ ಬರಿ ನಡೆಯಲಿಲ್ಲ. ಆದರೆ ಈ ರೀತಿಯ ಆಟಗಳು ಬೌಲಿಂಗ್ ಘಟಕದ ಕುರಿತು ನಿಮಗೆ ಬಹಳಷ್ಟು ಕಲಿಸುತ್ತದೆ ಎಂದು ರೋಹಿತ್ ಹೇಳಿದ್ದಾರೆ.

7 / 7
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಹ್ವಾನವನ್ನು ಪಡೆದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಸಲು ಮಾತ್ರ ಶಕ್ತವಾಯಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 131 ರನ್‌ಗಳಿಗೆ ಎರಡು ಸೆಷನ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಆಲೌಟ್ ಆಯಿತು. ಭಾರತೀಯ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವನ್ನು ಅಭಿಮಾನಿಗಳು ಮತ್ತು ಆಟದ ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ.