Asia Cup 2023: ಪಾಕ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಸೃಷ್ಟಿಸಲು ತಯಾರಾಗಿದ್ದಾರೆ ಭಾರತದ 6 ಬ್ಯಾಟರ್​ಗಳು

Updated on: Aug 31, 2023 | 10:13 AM

Top Milestones Indian Players in Asia Cup 2023: ಏಷ್ಯಾಕಪ್​ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಹಿಟ್​ಮ್ಯಾನ್ 10,000 ODI ರನ್‌ಗಳ ಕ್ಲಬ್‌ ಕೇವಲ 163 ರನ್‌ಗಳಷ್ಟೆ ಬೇಕಾಗಿದೆ.

1 / 8
ಏಷ್ಯಾಕಪ್ 2023 ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಾಗಿದೆ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ಭಾರತೀಯ ಕೆಲ ಆಟಗಾರರು ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಏಷ್ಯಾಕಪ್ 2023 ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಾಗಿದೆ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ಭಾರತೀಯ ಕೆಲ ಆಟಗಾರರು ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

2 / 8

ಏಷ್ಯಾಕಪ್​ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಹಿಟ್​ಮ್ಯಾನ್ 10,000 ODI ರನ್‌ಗಳ ಕ್ಲಬ್‌ ಕೇವಲ 163 ರನ್‌ಗಳಷ್ಟೆ ಬೇಕಾಗಿದೆ. ಸದ್ಯ ರೋಹಿತ್ 48.69 ಸರಾಸರಿಯಲ್ಲಿ, 30 ಶತಕಗಳು ಮತ್ತು 48 ಅರ್ಧಶತಕಗಳ ಸಿಡಿದ್ದಾರೆ.

3 / 8

ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡ ದಾಖಲೆ ಮುರಿಯಲು ತುದಿಗಾಲಲ್ಲಿ ನಿಂತಿದ್ದಾರೆ. 13,000 ODI ರನ್‌ಗಳನ್ನು ತಲುಪಲು ಕೊಹ್ಲಿಗೆ ಕೇವಲ 102 ರನ್‌ಗಳ ಅಗತ್ಯವಿದೆ, ಈ ಸಾಧನೆ ಮಾಡಿದ ಎರಡನೇ ಭಾರತೀಯರಾಗಲಿದ್ದಾರೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಅವರ 34,357 ಅಂತರರಾಷ್ಟ್ರೀಯ ರನ್‌ಗಳ ಬೃಹತ್ ದಾಖಲೆಯ ಮೇಲೆ ಕಣ್ಣಿಟ್ಟಿದ್ದು, ಇದನ್ನು ಮುರಿಯಲು 418 ರನ್‌ಗಳು ಬಾಕಿಯಿದೆ.

4 / 8

ಶುಭ್‌ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದರಲ್ಲೂ ಏಕದಿನ ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇವರು 62.47 ರ ಸರಾಸರಿಯೊಂದಿಗೆ 2,000 ODI ರನ್‌ಗಳನ್ನು ತಲುಪಲು ಕೇವಲ 563 ರನ್‌ಗಳ ದೂರದಲ್ಲಿದ್ದಾರೆ. ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,000 ರನ್‌ಗಳ ಗಡಿಯತ್ತ ದಾಪುಗಾಲಿಡುತ್ತಿದ್ದಾರೆ.

5 / 8

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿರುವ ಶ್ರೇಯಸ್ ಅಯ್ಯರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸ್ಪಿನ್ನರ್​ಗಳ ವಿರುದ್ಧ ಅಮೋಘ ಆಟವಾಡುವ ಅಯ್ಯರ್ 2,000 ODI ರನ್‌ಗಳ ಗಡಿ ತಲುಪಲು ಕೇವಲ 369 ರನ್‌ಗಳಷ್ಟೆ ಬೇಕಾಗಿದೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಅಯ್ಯರ್ ಈ ಸಾಧನೆ ಮಾಡಲಿದ್ದಾರೆ.

6 / 8

ಇಂಜುರಿಯಿಂದ ಗುಣಮುಖರಾಗುತ್ತಿರುವ ಕೆಎಲ್ ರಾಹುಲ್ ಎರಡು ಮೈಲಿಗಲ್ಲುಗಳ ಅಂಚಿನಲ್ಲಿದ್ದಾರೆ. 2,000 ODI ರನ್‌ ಬಾರಿಸಲು 14 ರನ್‌ಗಳು ಬೇಕಾಗಿವೆಯಷ್ಟೆ. ಜೊತೆಗೆ 7,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಲು 107 ರನ್‌ಗಳ ಅವಶ್ಯಕತೆಯಿದೆ. ಸದ್ಯದಲ್ಲೇ ರಾಹುಲ್ ಈ ದಾಖಲೆ ನಿರ್ಮಿಸಿದ್ದಾರೆ.

7 / 8

ಭಾರತದ ಅಗ್ರಮಾನ್ಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,000 ರನ್ ಗಡಿ ತಲುಪಲು ಕೇವಲ 179 ರನ್‌ಗಳ ಅಗತ್ಯವಿದೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚುತ್ತಿರುವ ಜಡೇಜಾ ಏಷ್ಯಾಕಪ್ 2023 ರಲ್ಲಿ ಈ ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

8 / 8

ಟೀಮ್ ಇಂಡಿಯಾದ ಮತ್ತೋರ್ವ ಆಲ್‌ರೌಂಡರ್ ಅಕ್ಷರ್ ಪಟೇಲ್ 150 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಗಳಿಸಲು ಕೇವಲ ಮೂರು ವಿಕೆಟ್‌ಗಳ ಅಂತರದಲ್ಲಿದ್ದಾರೆ. ಟೆಸ್ಟ್, ಏಕದಿನ, ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ ಒಳಗೊಂಡಂತೆ ಅವರ ಖಾತೆಯಲ್ಲಿ 147 ವಿಕೆಟ್‌ಗಳಿವೆ.

Loading...
Unable to load recommendations.
Follow Us