RCB Vs RR Weather Report: ಇಂದು ಬೆಂಗಳೂರಿನಲ್ಲಿ ಆರ್ಸಿಬಿ-ರಾಜಸ್ಥಾನ್ ಪಂದ್ಯ ನಡೆಯುವುದು ಅನುಮಾನ
RCB Vs RR, IPL 2023: ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಯಾಗುತ್ತಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯಕ್ಕೆ ಕೂಡ ಮಳೆ ಅಡಚಣೆ ಭೀತಿ ಇದೆ.
1 / 8
ಐಪಿಎಲ್ 2023 ರಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ. ಆದರೆ, ಈ ಪಂದ್ಯ ನಡೆಯುವುದು ಅನುಮಾನ.
2 / 8
ಯಾಕೆಂದರೆ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಯಾಗುತ್ತಿದ್ದು, ಪಂದ್ಯದ ದಿನ ಭಾನುವಾರ ಕೂಡ ಮಳೆ ಅಡಚಣೆ ಭೀತಿ ಇದೆ. ತಮಿಳುನಾಡಿನಲ್ಲಿ ಟ್ರಫ್ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
3 / 8
ಕರ್ನಾಟಕದಲ್ಲಿ ಏಪ್ರಿಲ್ 25ರ ವರೆಗೆ ಮಳೆಯಾಗಲಿದೆಯಂತೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಸಂಜೆ ಅಥವಾ ರಾತ್ರಿ ವೇಳೆಗೆ ಜೋರಾಗಿ ಮಳೆ ಸುರಿಯಲಿದ್ದು ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
4 / 8
ಪಂದ್ಯಕ್ಕೆ ಮಳೆ ಅಡ್ಡಿಸಿದರೂ ರದ್ದಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ನೀರು ಇಂಗಿಸುವ ಸಬ್ ಏರ್ ವ್ಯವಸ್ಥೆಯಿದೆ. ಇದರಿಂದಾಗಿ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಪುನಃ ಆರಂಭಿಸಬಹುದು.
5 / 8
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಟ್ರ್ಯಾಕ್ ಅತ್ಯುತ್ತಮವಾಗಿದೆ. ಬೌಲರ್ಗಳು ಇಲ್ಲಿ ಶಕ್ತಿ ಮೀರಿ ಪ್ರಯತ್ನ ತೋರಬೇಕು. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಹೈ ಸ್ಕೋರ್ ಪಂದ್ಯ ಆಗುವುದು ಖಚಿತ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿಬಹುದು. ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿದೆ.
6 / 8
ಇಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿವೆ. ಪರಿಸರ ಉಳಿಸಿ ಬೆಳೆಸುವ ಸಲುವ ಸಂದೇಶ ಸಾರುವ ಉದ್ದೇಶದಿಂದ ಬೆಂಗಳೂರು ಗ್ರೀನ್ ಜೆರ್ಸಿಯಲ್ಲಿ ಆಡುತ್ತಿದೆ. 2011ರಿಂದ ರಾಯಲ್ ಚಾಲೆಂಜರ್ಸ್ ಈ ಅಭಿಯಾನ ಆರಂಭಿಸಿದೆ.
7 / 8
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಆಟಗಾರರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿಯಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು.
8 / 8
ಇನ್ನು ಇಂಜುರಿಯಿಂದ ಕಮ್ಬ್ಯಾಕ್ ಮಾಡಿ ಆರ್ಸಿಬಿ ಕ್ಯಾಂಪ್ ಸೇರಿರುವ ಜೋಶ್ ಹ್ಯಾಜ್ಲೆವುಡ್ ಇಂದು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇವರಿಗೆ ವೇಯ್ನ್ ಪಾರ್ನೆಲ್ ಸ್ಥಾನ ಬಿಟ್ಟುಕೊಡಬೇಕು.
Published On - 11:46 am, Sun, 23 April 23