Shreyas Iyer: ದ್ವಿತೀಯ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಮತ್ತೊಬ್ಬ ಸ್ಟಾರ್ ಬ್ಯಾಟರ್ ಹೊರಕ್ಕೆ

Updated on: Feb 14, 2023 | 11:42 AM

India vs Australia 2nd Test: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಜಸ್​ಪ್ರೀತ್ ಬುಮ್ರಾ ಅಲಭ್ಯತೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾಕ್ಕೆ ಇದೀಗ ಮತ್ತೊಂದು ಆಘಾತ ಉಂಟಾಗಿದೆ. ಈ ಸ್ಟಾರ್ ಬ್ಯಾಟರ್ ಎರಡನೇ ಟೆಸ್ಟ್​ನಿಂದಲೂ ಹೊರಬಿದ್ದಿದ್ದಾರೆ.

1 / 8
ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 132 ರನ್​ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಇದೀಗ ದ್ವಿತೀಯ ಟೆಸ್ಟ್​ಗೆ ಸಜ್ಜಾಗುತ್ತಿದೆ. ಶುಕ್ರವಾರದಿಂದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 132 ರನ್​ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಇದೀಗ ದ್ವಿತೀಯ ಟೆಸ್ಟ್​ಗೆ ಸಜ್ಜಾಗುತ್ತಿದೆ. ಶುಕ್ರವಾರದಿಂದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

2 / 8

ಈಗಾಗಲೇ ಜಸ್​ಪ್ರೀತ್ ಬುಮ್ರಾ ಅಲಭ್ಯತೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಇದೀಗ ಎರಡನೇ ಟೆಸ್ಟ್ ವೇಳೆ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದ್ದ ಶ್ರೇಯಸ್ ಅಯ್ಯರ್ ಕೂಡ ಹೊರಬಿದ್ದಿದ್ದಾರೆ.

3 / 8

ಬೆನ್ನು ನೋವಿನ ಕಾರಣದಿಂದ ಮೊದಲ ಟೆಸ್ಟ್​ಗೆ ಅಲಭ್ಯರಾಗಿದ್ದ ಅಯ್ಯರ್ ಎರಡನೇ ಟೆಸ್ಟ್​ ಹೊತ್ತಿಗೆ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅಯ್ಯರ್ ಇನ್ನೂ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿಟ್​ನೆಸ್ ಪರೀಕ್ಷೆಗೆ ಇನ್ನೂ ಸಿದ್ಧರಾಗಿಲ್ಲ ಎಂದು ಹೇಳಲಾಗಿದೆ.

4 / 8

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಅಯ್ಯರ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಹೊತ್ತಿಗೆ ಗುಣಮುಖರಾಗಿರಲಿಲ್ಲ. ಹೀಗಾಗಿ ಇವರನ್ನು ಎರಡನೇ ಟೆಸ್ಟ್​ನಿಂದ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿತ್ತು. ಆದರೀಗ ಎರಡನೇ ಟೆಸ್ಟ್​ನಿಂದಲೂ ಅಯ್ಯರ್ ಹೊರಬಿದ್ದಿದ್ದಾರೆ ಎನ್ನಲಾಗಿದೆ.

5 / 8

ಅಯ್ಯರ್ ತಂಡ ಸೇರಿಕೊಳ್ಳುವುದು ಅನುಮಾನ ಆಗಿರುವುದರಿಂದ ಎರಡನೇ ಟೆಸ್ಟ್​ಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಅನುಮಾನ. ಮೊದಲ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಇಬ್ಬರು ಪ್ಲೇಯರ್ಸ್ ಸೂರ್ಯಕುಮಾರ್ ಯಾದವ್ ಹಾಗೂ ಕೆಎಸ್ ಭರತ್ ದ್ವಿತೀಯ ಟೆಸ್ಟ್​ನಲ್ಲಿ ಕೂಡ ಕಣಕ್ಕಿಳಿಯುವ ಸಾಧ್ಯತೆ ಇದೆ.

6 / 8

ಭಾರತ ಪರ ಇದುವರೆಗೆ 7 ಟೆಸ್ಟ್​ ಪಂದ್ಯಗಳಲ್ಲಿ 12 ಇನಿಂಗ್ಸ್ ಆಡಿರುವ ಅಯ್ಯರ್ 65ರ ಸರಾಸರಿಯಲ್ಲಿ ಒಟ್ಟು 624 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

7 / 8

ಅತ್ತ ಮೂರನೇ ಟೆಸ್ಟ್ ಪಂದ್ಯದ ವೇಳೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದ ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ ಕೂಡ ಆಸೀಸ್ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಫಿಟ್​ನೆಸ್ ವಿಚಾರದಲ್ಲಿ ಯಾವುದೇ ಅಪಾಯ ತೆಗೆದುಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ಬಿಸಿಸಿಐ ಬುಮ್ರಾ ಅವರನ್ನು ಆಯ್ಕೆ ಮಾಡುತ್ತಿಲ್ಲ ಎಂದು ವರದಿ ಆಗಿದೆ.

8 / 8

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಪಂದ್ಯ ಫೆಬ್ರವರಿ 17 ರಿಂದ ಫೆಬ್ರವರಿ 21 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವುದರಿಂದ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Published On - 11:38 am, Tue, 14 February 23

Loading...
Unable to load recommendations.
Follow Us