Kedar Jadhav: ಮನೆಯಲ್ಲಿದ್ದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನ ತಂದೆ ದಿಢೀರ್ ನಾಪತ್ತೆ

|

Updated on: Mar 28, 2023 | 7:43 AM

Kedhar Jadhav father missing: ಕೇದರ್ ಜಾಧವ್ ತನ್ನ ತಂದೆ ಕಾಣದಿರುವುದು ಗಮನಕ್ಕೆ ಬಂದ ತಕ್ಷಣ ಕೇದರ್ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಸಿಗದ ಕಾರಣ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

1 / 7
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಕೇದಾರ್ ಜಾಧವ್ ತಂದೆ ನಾಪತ್ತೆಯಾಗಿದ್ದಾರೆ ಎಂದು ವರದಿ ಆಗಿದೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಕೆಲವು ಪ್ರದೇಶಗಳಲ್ಲಿ ಹುಡುಕಿದ ನಂತರವೂ ಸಿಗದ ಕಾರಣ ಕೇದಾರ್ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2 / 7
ಪುಣೆಯ ಕರ್ತೂಡ್ ಪ್ರದೇಶದಿಂದ ಸೋಮವಾರ ಬೆಳಗ್ಗೆ ಕೇದಾರ್ ಜಾಧವ್ ತಂದೆ ಮಹದೇವ್ ಜಾಧವ್ ನಾಪತ್ತೆಯಾಗಿದ್ದು, ಕುಟುಂಬದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಕೆಲವು ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿ ಕೇದಾರ್ ಕುಟುಂಬಕ್ಕೆ ಅವರನ್ನು ತಲುಪಿಸಿದ್ದಾರಂತೆ.

3 / 7
ಪೊಲೀಸರಿಗೆ ನೀಡಿರುವ ಮಾಹಿತಿಯ ಅನ್ವಯ, ಕೇದಾರ್ ಜಾಧವ್ ತಂದೆ ಮಹದೇವ್ ಅವರಿಗೆ ಮರೆವು ಮತ್ತು ಯೋಚಿಸುವ ಶಕ್ತಿ ಕಳೆದು ಹೋಗುವ ಕಾಯಿಲೆ ಇದೆ. ಅವರ ಮನೆಯಲ್ಲಿ ಸೆಕ್ಯುರೆಟಿ ಗಾರ್ಡ್ ಅವರ ದಿಕ್ಕು ತಪ್ಪಿಸಿ ಹೊರಗಡೆ ತೆರಳಿದ್ದಾರೆ. ಅಲ್ಲದೇ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರು.

4 / 7
ತಂದೆ ಕಾಣದಿರುವುದು ಗಮನಕ್ಕೆ ಬಂದ ತಕ್ಷಣ ಕೇದಾರ್ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಸಿಗದ ಕಾರಣ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

5 / 7
"ಮಹಾದೇವ್ ಜಾಧವ್ ಅವರು ಬೆಳಗಿನ ಜಾವ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ಅವರು ಗೇಟ್‌ನಿಂದ ಹೊರಬಂದ ನಂತರ ಕಾಣಿಸಿಕೊಂಡಿಲ್ಲ. ನಾಪತ್ತೆ ಪ್ರಕರಣವನ್ನು ದಾಖಲಿಸಿ ಹುಡುಕಾಟ ನಡೆಸಿದೆವು" ಎಂದು ಅಧಿಕಾರಿ ತಿಳಿಸಿದ್ದಾರೆ.

6 / 7
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಹದೇವ್ ಅವರನ್ನು ಕಾರ್ವೆ ಬಡಾವಣೆಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ನಂತ ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

7 / 7
ಕೇದಾರ್ ಜಾಧವ್ ಸದ್ಯ ಕ್ರಿಕೆಟ್​ನಿಂದ ದೂರವಾಗಿ ಕೆಲ ಸಮಯಗಳಾಗಿವೆ. ಭಾರತ ಪರ 73 ಏಕದಿನ ಪಂದ್ಯಗಳನ್ನು ಆಡಿರುವ ಇವರು 2020 ರಲ್ಲಿ ಕೊನೆಯ ಬಾರಿಗೆ ಆಡಿದ್ದರು. ಐಪಿಎಲ್​ನಲ್ಲಿ 93 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

Published On - 7:43 am, Tue, 28 March 23