IND vs AUS 5th T20I: ಟೀಮ್ ಇಂಡಿಯಾದಲ್ಲಿ ಬಿಗ್ ಚೇಂಜ್: ಇಂದು ಆಡಲಿರುವ 4 ಹೊಸ ಆಟಗಾರರು ಯಾರು ನೋಡಿ

|

Updated on: Dec 03, 2023 | 7:18 AM

India Predicted Playing XI vs Australia 5th T20I: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಟೀಮ್ ಇಂಡಿಯಾಕ್ಕೆ ಒಂದು ಔಪಚಾರಿಕ ಪಂದ್ಯ. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆ ಖಚಿತ. ಬೆಂಚ್ ಕಾದಿದ್ದ ಆಟಗಾರರಿಗೆ ಇಂದು ಅವಕಾಶ ಸಿಗಲಿದೆ. ಇಲ್ಲಿದೆ ನೋಡಿ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್.

1 / 7
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆಸಿ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ (India vs Australia) ತಂಡ ಇದೀಗ ಅಂತಿಮ ಕದನಕ್ಕೆ ಸಜ್ಜಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ನಡುವೆ ಐದನೇ ಟಿ20 ಪಂದ್ಯ ಆಯೋಜಿಸಲಾಗಿದೆ.

2 / 7
ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯ. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆ ಖಚಿತ. ಬೆಂಚ್ ಕಾದಿದ್ದ ಆಟಗಾರರಿಗೆ ಇಂದು ಅವಕಾಶ ಸಿಗಲಿದೆ. ಹೀಗಾಗಿ ತಂಡದಲ್ಲಿ ನಾಲ್ಕು ಬದಲಾವಣೆ ನಿರೀಕ್ಷಿಸಲಾಗಿದೆ. ಇಲ್ಲಿದೆ ನೋಡಿ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್.

3 / 7
ಭಾರತದ ಯುವ ಬ್ಯಾಟಿಂಗ್ ಲೈನ್-ಅಪ್ ಸಾಕಷ್ಟು ಬಲಿಷ್ಠವಾಗಿದೆ. ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಆದರೆ, ಇಂದಿನ ಪಂದ್ಯಕ್ಕೆ ಇವರಿಬ್ಬರ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡಿ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

4 / 7
ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ವಿಶ್ರಾಂತಿ ತೆಗೆದುಕೊಳ್ಳುವ ಸಂಭವವಿದ್ದು, ಅಯ್ಯರ್ ಕ್ಯಾಪ್ಟನ್ ಜವಾಬ್ದಾರಿ ಹೊರಬಹುದು. ತಿಲಕ್ ವರ್ಮಾ ಆಡುವ ಬಳಗಕ್ಕೆ ಕಮ್​ಬ್ಯಾಕ್ ಮಾಡಬಹುದು. ಸರಣಿಯ ಮೊದಲ ಪಂದ್ಯವನ್ನು ಆಡಿದ ಜಿತೇಶ್ ಶರ್ಮಾ ಇಂದಿನ ಪಂದ್ಯದಲ್ಲಿ ಕೂಡ ಅವಕಾಶ ಪಡೆಯಲಿದ್ದಾರೆ.

5 / 7
ರಿಂಕು ಸಿಂಗ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಂದ್ಯದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಲ್ರೌಂಡರ್ ಜವಾಬ್ದಾರಿ ನಿಭಾಯಿಸಲು ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಬಹುದು. ಅಂತೆಯೆ ಮುಖೇಶ್ ಕುಮಾರ್ ಜಾಗಕ್ಕೆ ಶಿವಂ ದುಬೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಇದ್ದರೆ ಅಚ್ಚರಿ ಪಡಬೇಕಿಲ್ಲ.

6 / 7
ಉಳಿದಂತೆ ಸರಣಿಯುದ್ದಕ್ಕೂ ಮಿಂಚಿರುವ ರವಿ ಬಿಷ್ಣೋಯ್ ತಂಡದಲ್ಲಿ ಇರಲಿದ್ದಾರೆ. ಅವೇಶ್ ಖಾನ್ ಹಾಗೂ ದೀಪಕ್ ಚಹರ್ ವೇಗದ ಬೌಲಿಂಗ್  ಅನ್ನು ಮುನ್ನಡೆಲಿದ್ದಾರೆ. ಬ್ಯಾಟಿಂಗ್ ಸ್ವರ್ಗವಾಗಿರುವ ಬೆಂಗಳೂರು ಪಿಚ್​ನಲ್ಲಿ ಭಾರತೀಯ ವೇಗಿಗಳು ಯಾವರೀತಿ ಬೌಲಿಂಗ್ ಮಾಡುತ್ತಾರೆ ನೋಡಬೇಕು.

7 / 7
ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ ( ವಿಕೆಟ್ ಕೀಪರ್ ), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್.