ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಅಫ್ಘಾನಿಸ್ತಾನದ ಈ ಮಿಸ್ಟರಿ ಬ್ಯೂಟಿ ಯಾರು ಗೊತ್ತೇ?

Updated on: Oct 17, 2023 | 10:41 AM

Who Is Afghanistan Mystery Girl Wazhma Ayoubi: ಭಾರತ ಹಾಗೂ ಅಫ್ಘಾನಿಸ್ತಾನ ಪಂದ್ಯ ನಡೆಯುತ್ತಿದ್ದರೆ ಅಲ್ಲಿ ಇವರು ಹಾಜರಿರುತ್ತಾರೆ. ಇದರ ಹೆಸರು ವಾಜ್ಮಾ ಅಯೂಬಿ. ವಾಜ್ಮಾ ಉದ್ಯಮಿ, ರೂಪದರ್ಶಿ ಮತ್ತು ಕ್ರಿಕೆಟ್ ಅಭಿಮಾನಿ. ಮೂಲತಃ ಅಫ್ಘಾನ್ ದೇಶದವರಾದ ಇವರು ಅಫ್ಘಾನಿಸ್ತಾನ ತಂಡವನ್ನು ಹುರಿದುಂಬಿಸಲು ಭಾರತಕ್ಕೆ ಬಂದಿದ್ದಾರೆ.

1 / 6
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ. ಟೀಮ್ ಇಂಡಿಯಾದ ಪಂದ್ಯಕ್ಕೆ ಮಾತ್ರವಲ್ಲದೆ ಇತರೆ ತಂಡಗಳ ನಡುವಣ ಪಂದ್ಯಕ್ಕೆ ಕೂಡ ಸ್ಟೇಡಿಯಂನ ಹೌಸ್​ಫುಲ್ ಆಗಿದೆ. ಇದರ ನಡುವೆ ವಿಶ್ವಕಪ್ ಪಂದ್ಯದಲ್ಲಿ ಮಿಸ್ಟರಿ ಬ್ಯೂಟಿ ಒಬ್ಬರು ಕಾಣಿಸಿಕೊಂಡಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ. ಟೀಮ್ ಇಂಡಿಯಾದ ಪಂದ್ಯಕ್ಕೆ ಮಾತ್ರವಲ್ಲದೆ ಇತರೆ ತಂಡಗಳ ನಡುವಣ ಪಂದ್ಯಕ್ಕೆ ಕೂಡ ಸ್ಟೇಡಿಯಂನ ಹೌಸ್​ಫುಲ್ ಆಗಿದೆ. ಇದರ ನಡುವೆ ವಿಶ್ವಕಪ್ ಪಂದ್ಯದಲ್ಲಿ ಮಿಸ್ಟರಿ ಬ್ಯೂಟಿ ಒಬ್ಬರು ಕಾಣಿಸಿಕೊಂಡಿದ್ದಾರೆ.

2 / 6

ಭಾರತ ಹಾಗೂ ಅಫ್ಘಾನಿಸ್ತಾನ ಪಂದ್ಯ ನಡೆಯುತ್ತಿದ್ದರೆ ಅಲ್ಲಿ ಇವರು ಹಾಜರಿರುತ್ತಾರೆ. ಇದರ ಹೆಸರು ವಾಜ್ಮಾ ಅಯೂಬಿ. ವಾಜ್ಮಾ ಉದ್ಯಮಿ, ರೂಪದರ್ಶಿ ಮತ್ತು ಕ್ರಿಕೆಟ್ ಅಭಿಮಾನಿ. ಮೂಲತಃ ಅಫ್ಘಾನ್ ದೇಶದವರಾದ ಇವರು ಅಫ್ಘಾನಿಸ್ತಾನ ತಂಡವನ್ನು ಹುರಿದುಂಬಿಸಲು ಭಾರತಕ್ಕೆ ಬಂದಿದ್ದಾರೆ.

3 / 6

ಅಫ್ಘಾನಿಸ್ತಾನ ಬಿಟ್ಟರೆ ಇವರ ನೆಚ್ಚಿನ ತಂಡ ಅದು ಟೀಮ್ ಇಂಡಿಯಾ ಎಂದು ಸ್ವತಃ ಅವರೇ ಹೇಳಿದ್ದಾರೆ. ವಜ್ಮಾ ಭಾರತವನ್ನು ತನ್ನ ಎರಡನೇ ಮನೆ ಎಂದು ಹೇಳಿಕೊಂಡಿದ್ದಾರೆ. ಭಾರತದ ಜೆರ್ಸಿಯಲ್ಲಿ ಇವರು ತೆಗೆದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ.

4 / 6

ಈ ಹಿಂದೆ ಏಷ್ಯಾಕಪ್ 2023 ಸಂದರ್ಭದಲ್ಲಿ ಕೂಡ ವಾಜ್ಮಾ ಅಯೂಬಿ ಸೋಷಿಯನ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಭಾರತ-ಪಾಕ್ ಪಂದ್ಯ ಇರುವಾಗ ಕೂಡ ಇವರು ಕಾಣಿಸಿಕೊಂಡಿದ್ದರು. ವಾಜ್ಮಾ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು ಯುಎಇ ಮೂಲದ ಮಾಡೆಲ್ ಆಗಿದ್ದಾರೆ. ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಲೀಡರ್‌ಶಿಪ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

5 / 6

ವಾಜ್ಮಾ ಉದ್ಯಮಿಯಾಗಿದ್ದು ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 5.76 ಲಕ್ಷ ಆಗಿದೆ. ಇವರು ಭಾರತದ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಐಪಿಎಲ್‌ನಲ್ಲೂ ಕಾಣಿಸಿಕೊಂಡಿದ್ದರು. ಐಪಿಎಲ್ 2023 ರ ಸಂದರ್ಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ವಾಜ್ಮಾ ಬಂದಿದ್ದರು.

6 / 6

ವಾಜ್ಮಾ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಕೂಡ ಇದೆಯಂತೆ. ಬಾಲಿವುಡ್‌ನಲ್ಲಿ ಕೆಲಸ ಮಾಡುವ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಇವರು ನಟ ಅಕ್ಷಯ್ ಕುಮಾರ್, ಕರಣ್ ಜೋಹಾರ್ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಮನೋರಂಜನಾ ಕ್ಷೇತ್ರದಲ್ಲಿ ಮಿಂಚುವ ಕನಸು ಇವರಿಗಿದೆ.

Loading...
Unable to load recommendations.
Follow Us