Virat Kohli: ಕೊಹ್ಲಿ ಬ್ಯಾಟ್​ನಿಂದ ಬರುತ್ತಾ 76ನೇ ಶತಕ?: ದ್ವಿಶತಕದತ್ತ ಯಶಸ್ವಿ ಕಣ್ಣು

|

Updated on: Jul 14, 2023 | 7:37 AM

Yashasvi Jaiswal, IND vs WI 1st Test: ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 113 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಕ್ರೀಸ್​ನಲ್ಲಿದ್ದಾರೆ.

1 / 8
ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದ್ದು, ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

2 / 8
ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 113 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಕ್ರೀಸ್​ನಲ್ಲಿದ್ದಾರೆ.

3 / 8
ಮೊದಲ ದಿನ ವೆಸ್ಟ್ ಇಂಡೀಸ್ ತಂಡವನ್ನು 150 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಬಾರಿಸಿತ್ತು. ನಾಯಕ ರೋಹಿತ್ ಶರ್ಮಾ (30) ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ಕ್ರೀಸ್​ನಲ್ಲಿದ್ದರು.

4 / 8
ದ್ವಿತೀಯ ದಿನದಾಟದ ಆರಂಭಿಸಿದ ರೋಹಿತ್-ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ವೆಸ್ಟ್ ಇಂಡೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಆಕರ್ಷಕ ಶತಕ ಸಿಡಿಸಿ ಮಿಂಚಿದರು.

5 / 8
ರೋಹಿತ್ ಶತಕ ಬಾರಿಸಿ ಔಟಾದರು. 221 ಎಸೆತಗಳಲ್ಲಿ 10 ಫೋರ್, 2 ಸಿಕ್ಸರ್​ನೊಂದಿಗೆ 103 ರನ್​ಗಳಿಗೆ ಬ್ಯಾಟ್ ಕೆಳಗಿಟ್ಟರು. ಈ ಮೂಲಕ ಮೊದಲ ವಿಕೆಟ್​ಗೆ 229 ರನ್​ಗಳ ಜೊತೆಯಾಟ ಮೂಡಿಬಂತು.

6 / 8
ಪೂಜಾರ ಸ್ಥಾನದಲ್ಲಿ ಕಣಕ್ಕಿಳಿದ ಶುಭ್​ಮನ್ ಗಿಲ್ ವೈಫಲ್ಯ ಅನುಭವಿಸಿದರು. 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಜೈಸ್ವಾಲ್ ಜೊತೆಯಾದ ವಿರಾಟ್ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದರು.

7 / 8
ತನ್ನ ಚೊಚ್ಚಲ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದ ಜೈಸ್ವಾಲ್ 350 ಎಸೆತಗಳಲ್ಲಿ 14 ಫೋರ್​ನೊಂದಿಗೆ 143 ರನ್ ಗಳಿಸಿದ್ದರೆ, ಕೊಹ್ಲಿ 96 ಎಸೆತಗಳಲ್ಲಿ 36 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

8 / 8
ಟೀಮ್ ಇಂಡಿಯಾ ದೊಡ್ಡ ಮುನ್ನಡೆಯತ್ತ ಸಾಗುತ್ತಿದೆ. ಅತ್ತ ವಿರಾಟ್ ಕೊಹ್ಲಿ ಬ್ಯಾಟ್​ನಿಂದ 76ನೇ ಶತಕ ಮೂಡಿಬರಲಿ ಎಂದು ಅಭಿಮಾನಿಗಳು ಎದುರು ನೋಡುತ್ತದ್ದಾರೆ. ಚೊಚ್ಚಲ ಪಂದ್ಯದಲ್ಲಿ ದ್ವಿಶತಕ ಸಿಡಿಸಲು ಜೈಸ್ವಾಲ್ ಯೋಜನೆ ಹಾಕಿಕೊಂಡಿದ್ದಾರೆ.