ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಶುರುವಾಗಿದೆ. ಒಟ್ಟು ಐದು ದಿನಗಳ ಕಾಲ ಈ ಮೇಳ ನಡೆಯಲಿದ್ದು ಜುಲೈ 19 ರ ವರೆಗೆ ನಡೆಯಲಿದೆ.
ಫ್ಲಿಪ್ಕಾರ್ಟ್ನ ಈ ಸೇಲ್ನಲ್ಲಿ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡಿಗೆ ಅಗತ್ಯ ವಸ್ತುಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಇದೆ.
ಅನೇಕ ಉತ್ಪನ್ನಗಳ ಮೇಲಿನ ರಿಯಾಯಿತಿಗಳ ಜೊತೆಗೆ, ಫ್ಲಿಪ್‌ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 ಪ್ರತಿಶತ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್ ಇದೆ.
ಫ್ಯಾಶನ್ ವಸ್ತುಗಳು 50 ರಿಂದ 80 ಶೇಕಡಾ ರಿಯಾಯಿತಿಯೊಂದಿಗೆ ಮತ್ತು ಎಲೆಕ್ಟ್ರಾನಿಕ್ಸ್ ಶೇಕಡಾ 80 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತದೆ. ಅಂತೆಯೆ ನೀವು ಒಂದೇ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ಖರೀದಿಸಿದರೆ 10 ಪ್ರತಿಶತದವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.
ಟಿವಿಗಳು ಮತ್ತು ಉಪಕರಣಗಳು 75 ಪ್ರತಿಶತದವರೆಗೆ ಮತ್ತು ಫ್ಲಿಪ್‌ಕಾರ್ಟ್ ಒರಿಜಿನಲ್‌ಗಳು ಶೇಕಡಾ 80 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿವೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ, 12 ಗಂಟೆಗೆ, 8 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಸ್ಪ್ಲಾಶ್ ಡೀಲ್‌ಗಳು ಇರುತ್ತವೆ.
ಸ್ಮಾರ್ಟ್ಫೋನ್ ವಿಭಾಗದಲ್ಲಿ 24 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆ ನೀಡಲಾಗಿದೆ. ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್ಚೇಂಜ್ ಆಫರ್ ಲಭ್ಯವಿದೆ. ವಿವೋ T2x 5G, ರಿಯ್ ಮಿ C55 ಮತ್ತು ಪೋಕೋ M4 5G ನಂತಹ ಸ್ಮಾರ್ಟ್‌ಫೋನ್‌ಗಳ ಮೇಳೆ ಭರ್ಜರಿ ರಿಯಾಯಿತಿ ಇದೆ.