Travel India: ಪ್ರಕೃತಿ ಸೌಂದರ್ಯದಿಂದ ಬೆರಗುಗೊಳಿಸುವ ದೇಶದ ನಯನ ಮನೋಹರ ಸರೋವರಗಳಿವು

Updated on: Apr 21, 2022 | 9:42 AM

Indian lakes: ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ, ದೇಶದ ಅದ್ಭುತ ಸರೋವರಗಳಿಗೆ ಭೇಟಿ ನೀಡುವ ಕನಸು ಹೊಂದಿದ್ದರೆ ಈ ಸರೋವರಗಳನ್ನು ಮಿಸ್ ಮಾಡಲೇಬೇಡಿ. ಅಸ್ಸಾಂನ ಸೋನ್​ಬಿಲ್, ಮಣಿಪುರದ ಲೋಕ್ಟಾಕ್, ಕಾಶ್ಮೀರದ ದಾಲ್, ಒರಿಸ್ಸಾದ ಚಿಲ್ಕಾ ಸರೋವರಗಳು ತಮ್ಮ ನಯನ ಮನೋಹರ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

1 / 5
ಭಾರತ ಪ್ರವಾಸಿಗರ ಸ್ವರ್ಗ ಎಂದರೆ ತಪ್ಪಿಲ್ಲ. ವಿವಿಧ ರೀತಿಯ ಭೂಪ್ರದೇಶಗಳಿಂದ ಸಮೃದ್ಧವಾಗಿರುವ ಇಲ್ಲಿ ಹಲವು ಅದ್ಭುತ ಸರೋವರಗಳಿವೆ. ನೀವು ದೇಶದ ಸುಂದರ ಸರೋವರಗಳಿಗೆ ಭೇಟಿ ನೀಡುವ ಪ್ಲಾನ್ ಹೊಂದಿದ್ದರೆ ಇವುಗಳನ್ನು ಮಿಸ್ ಮಾಡಲೇಬೇಡಿ.

ಭಾರತ ಪ್ರವಾಸಿಗರ ಸ್ವರ್ಗ ಎಂದರೆ ತಪ್ಪಿಲ್ಲ. ವಿವಿಧ ರೀತಿಯ ಭೂಪ್ರದೇಶಗಳಿಂದ ಸಮೃದ್ಧವಾಗಿರುವ ಇಲ್ಲಿ ಹಲವು ಅದ್ಭುತ ಸರೋವರಗಳಿವೆ. ನೀವು ದೇಶದ ಸುಂದರ ಸರೋವರಗಳಿಗೆ ಭೇಟಿ ನೀಡುವ ಪ್ಲಾನ್ ಹೊಂದಿದ್ದರೆ ಇವುಗಳನ್ನು ಮಿಸ್ ಮಾಡಲೇಬೇಡಿ.

2 / 5

ಸೋನ್ ಬಿಲ್ ಸರೋವರ: ಅಸ್ಸಾಂನ ಕರಿಂಗಂಜ್ ಪ್ರದೇಶದಲ್ಲಿರುವ ಈ ಸರೋವರ ಅದ್ಭುತವಾಗಿದೆ. ಬೇಸಿಗೆಯಲ್ಲಿ ನೀವು ಈ ಸರೋವರಕ್ಕೆ ಭೇಟಿ ನೀಡುಬಹುದು. ಚಳಿಗಾಲದಲ್ಲಿ ಸರೋವರದ ಕೆಲವು ಭಾಗಗಳಲ್ಲಿ ಕೃಷಿ ಮಾಡಲಾಗುತ್ತದೆ.

3 / 5

ಲೋಕ್ಟಾಕ್ ಸರೋವರ: ಈ ಸರೋವರವು ದೇಶದ ಈಶಾನ್ಯ ಭಾಗದಲ್ಲಿರುವ ಮಣಿಪುರದಲ್ಲಿದೆ. ಇದನ್ನು ಸಿಹಿನೀರಿನ ಸರೋವರ ಎಂದೂ ಕರೆಯುತ್ತಾರೆ. ಇದರ ಸೌಂದರ್ಯ ಮನಮೋಹಕವಾಗಿದೆ.

4 / 5

ದಾಲ್ ಸರೋವರ: ಕಾಶ್ಮೀರವು ಭಾರತದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿರುವ ದಾಲ್ ಸರೋವರವು ವಿಶಿಷ್ಟವಾದ, ಬೆರಗುಗೊಳಿಸುವ ಸೌಂದರ್ಯವನ್ನು ಹೊಂದಿದೆ. ವಿವಾಹವಾದ ನವಜೋಡಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರೆ ದಾಲ್ ಸರೋವರವನ್ನು ಮಿಸ್ ಮಾಡಲೇಬೇಡಿ.

5 / 5

ಚಿಲ್ಕಾ ಸರೋವರ: ಒಡಿಶಾದ ಚಿಲ್ಕಾ ಸರೋವರವು ಭಾರತದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ. ನವೆಂಬರ್ ನಿಂದ ಫೆಬ್ರವರಿ ನಡುವೆ ಸರೋವರಕ್ಕೆ ಭೇಟಿ ನೀಡಲು ಉತ್ತಮ ಸಮಯ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ.

Loading...
Unable to load recommendations.
Follow Us