Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು

Updated on: Mar 04, 2022 | 9:58 AM

Russia-Ukraine Crisis: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಆಕ್ರಮಣದಿಂದ ಉಕ್ರೇನಿಯನ್ನರು ಕಂಗೆಟ್ಟಿದ್ದು, ಜನಜೀವನ ದುಸ್ತರವಾಗಿದೆ. ಉಕ್ರೇನ್​ನ ಪ್ರಸ್ತುತ ಸ್ಥಿತಿ ಕಟ್ಟಿಕೊಡುವ ಫೋಟೋಗಳು ಇಲ್ಲಿವೆ.

1 / 8
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ವಾರ ಕಳೆದಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನಿಯನ್ನರು ಬಂಕರ್​ಗಳಲ್ಲಿ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ವಾರ ಕಳೆದಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನಿಯನ್ನರು ಬಂಕರ್​ಗಳಲ್ಲಿ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

2 / 8

ಉಕ್ರೇನಿಯನ್ನರು ದೇಶವನ್ನು ತೊರೆಯುತ್ತಿದ್ದು, ಅಕ್ಕಪಕ್ಕದ ದೇಶಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನೆರೆಯ ದೇಶಗಳು ತಾತ್ಕಾಲಿಕವಾಗಿ ಉಕ್ರೇನಿಯನ್ನರಿಗೆ ಶ್ರಯ ನೀಡುವುದಾಗಿ ತಿಳಿಸಿವೆ.

3 / 8

ಹಲವರು ಉಕ್ರೇನ್​ಗೆ ಮರಳಿ ಯುದ್ಧದಲ್ಲಿಯೂ ಭಾಗವಹಿಸುತ್ತಿದ್ದಾರೆ. ಹಾಗೆ ತೆರಳತ್ತಿರುವವರ ಫೋಟೋ ಇದು.

4 / 8

ಮಗುವಿನ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಉಕ್ರೇನಿಯನ್ ಮಹಿಳೆ.

5 / 8

ಹಿಂದೆ ಜನವಸತಿ ಇದ್ದ ಪ್ರವೇಶ ನಾಶವಾಗಿದ್ದು, ಅವಶೇಷದಲ್ಲಿ ಹುಡುಕಾಡುತ್ತಿರುವ ಜನರು.

6 / 8

ವಿವಿಧ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಜನರು, ವಸ್ತುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.

7 / 8

ನಾಶವಾದ ವಸ್ತುಗಳ ಮಧ್ಯೆ ಸುತ್ತಾಡುತ್ತಿರುವ ಉಕ್ರೇನಿಯನ್ ಸೈನಿಕ.

8 / 8

ಉಕ್ರೇನ್ ಕದನದ ಪರಿಸ್ಥಿತಿ

Loading...
Unable to load recommendations.
Follow Us