WhatsApp Tricks: ನಿಮ್ಮ ವಾಟ್ಸ್ಆ್ಯಪ್ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಟ್ರಿಕ್

Updated on: Jul 24, 2023 | 6:55 AM

Tech Tips: ವಾಟ್ಸ್ಆ್ಯಪ್ ಡಿಪಿಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಬೇರೆ ಅವರ ಡಿಪಿ ನೋಡಲು ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ.

1 / 8
ಇಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ನಮ್ಮ ದೈನಂದಿನ ಚಟುವಟಿಕೆಗಳಷ್ಟೇ ಮುಖ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ.

ಇಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ನಮ್ಮ ದೈನಂದಿನ ಚಟುವಟಿಕೆಗಳಷ್ಟೇ ಮುಖ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ.

2 / 8

ವಾಟ್ಸ್ಆ್ಯಪ್​ ಟ್ರಿಕ್ಸ್​​​​ಗಳಿಗೆಂದೆ ಇಂದು ಅದೆಷ್ಟೋ ಥರ್ಡ್​ ಪಾರ್ಟಿ ಆ್ಯಪ್​ಗಳು ಹುಟ್ಟುಕೊಂಡಿವೆ. ಇದರಲ್ಲಿ ನಾವು ಹಾಕಿದ ಡಿಪಿಯನ್ನು ಯಾರು ನೋಡಿದ್ದಾರೆ ಎಂದುಕೂಡ ತಿಳಿಯಬಹುದು. ಅದು ಹೇಗೆ, ಆ ಆ್ಯಪ್ ಯಾವುದು, ಅದನ್ನು ಹೇಗೆ ಡೌನ್ಲೋಡ್ ಮಾಡೋದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

3 / 8

ವಾಟ್ಸ್ಆ್ಯಪ್ ಡಿಪಿಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಬೇರೆ ಅವರ ಡಿಪಿ ನೋಡಲು ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ.

4 / 8

ಥರ್ಡ್ ಪಾರ್ಟಿ ಆ್ಯಪ್ ಮೂಲಕ ವಾಟ್ಸ್ಆ್ಯಪ್​ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಾರೆ ಎಂಬುದನ್ನು ತಿಳಿಯಬಹುದು. ಅಚ್ಚರಿ ಎಂದರೆ ಈ ವಿಧಾನದಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಿಪಿ ನೋಡುವವರ ಹೆಸರು ಮತ್ತು ನಂಬರ್ ಕೂಡ ಪಡೆದುಕೊಳ್ಳಬಹುದಾಗಿದೆ.

5 / 8

ಇದಕ್ಕಾಗಿ ನೀವು ಮೊದಲು ಗೂಗಲ್ ಪ್ಲೇ ಸ್ಟೋರ್​ನಿಂದ WhatsApp- Who Viewed Me ಅಥವಾ Whats Tracker ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಗುತ್ತದೆ. ಇದರೊಂದಿಗೆ, 1mobile market ಡೌನ್ಲೋಡ್ ಕೂಡ ಮಾಡಬೇಕಾಗುತ್ತದೆ. 1mobile market ಆ್ಯಪ್ ಇಲ್ಲದೆ WhatsApp- Who Viewed Me ಡೌನ್ಲೋಡ್ ಆಗುವುದಿಲ್ಲ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

6 / 8

ಇದು ನಿಮಗೆ ಗೊತ್ತಿಲ್ಲದಂತೆ ಯಾರೆಲ್ಲಾ ನಿಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋವನ್ನು ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಅಥವಾ ಡಿಪಿಯನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ಅನ್ನು ನಿಮಗೆ ನೀಡುತ್ತದೆ.

7 / 8

ಎಚ್ಚರ: ನೀವು ಯಾವುದೇ ಒಂದು ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡುವ ಮುನ್ನ ಎಚ್ಚರಬಹಿಸಬೇಕು. ಯಾಕಂದ್ರೆ ಈ ಥರ್ಡ್ ಪಾರ್ಟಿ ಆ್ಯಪ್​ಗಳು ನಿಮ್ಮ ಫೋನ್​ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ.

8 / 8

ಈ ಥರ್ಡ್ ಪಾರ್ಟಿ ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್ ಗಳಿಂದ ಮಾತ್ರ ಇದನ್ನ ಡೌನ್​ಲೋಡ್ ಮಾಡಿ.

Loading...
Unable to load recommendations.
Follow Us