ಸುಶಾಂತ್ ಸಾವಿನ ಬಗ್ಗೆ ಕಂಗನಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವ ಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ ರಾವತ್, ಆಕೆಗೆ ಮುಂಬೈ ಪೊಲೀಸ್ ಭಯವಿದೆ, ಆಕೆ ಹಿಮಾಚಲ ಪ್ರದೇಶದಲ್ಲೇ ಇರಲಿ, ಮುಂಬೈಗೆ ಬರುವುದು ಬೇಡ ಎಂದಿದ್ದರು. ಕಂಗನಾ ಸಹ, ಅಷ್ಟೇ ಖಡಕ್ಕಾದ ಟ್ವೀಟ್ ಮೂಲಕ ರಾವತ್ ಅವರಿಗೆ ಉತ್ತರ ನೀಡಿ, ಸ್ವಾತಂತ್ರ್ಯದ ಘೋಷಣೆಗಳನ್ನು ಮುಂಬೈ ನಗರದ ಓಣಿಗಳಲ್ಲಿ ಕೂಗಿದ ನಂತರ ರಾವತ್ ಅವರು ನನಗೆ ಬಹಿರಂಗ ಬೆದರಿಕೆ ಒಡ್ಡುತ್ತಿದ್ದಾರೆ ಎಂದಿದ್ದರು.
‘‘ಶಿವ ಸೇನೆಯ ನಾಯಕ ಸಂಜಯ ರಾವತ್ ಅವರು ನನಗೆ ಬಹಿರಂಗ ಬೆದರಿಕೆ ನೀಡಿ ಮುಂಬೈಗೆ ಬರಬೇಡ ಎಂದು ಹೇಳಿದ್ದಾರೆ. ಮುಂಬೈನ ಬೀದಿಗಳಲ್ಲಿ ಇವರೆಲ್ಲ ಮೊದಲು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾರೆ ನಂತರ ಇಂಥ ಬೆದರಿಕೆಗಳನ್ನು ಒಡ್ಡುತ್ತಾರೆ. ನಂಗ್ಯಾಕೋ ಮುಂಬೈ ನಗರವೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಗೋಚರವಾಗುತ್ತಿದೆ@KanganaTeam’’ ಎಂದು ಕಂಗನಾ ಟ್ವೀಟ್ ಮಾಡಿದ್ದರು.
‘‘ಮುಂಬೈ ಪೊಲೀಸನ್ನು ಸ್ಕಾಟ್ಲೆಂಡ್ ಯಾರ್ಡ್ನೊಂದಿಗೆ ಹೋಲಿಸಲಾಗುತ್ತದೆ. ಕೆಲವು ಜನ ಮುಂಬೈ ಪೊಲೀಸನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬ ಐಪಿಎಸ್ ಅಧಿಕಾರಿ ಪೊಲೀಸರ ವಿರುದ್ಧ ನ್ಯಾಯಾಲಯದ ಕಟೆಕಟೆ ಹತ್ತಿದ್ದಾರೆ. ಆಕೆಯ (ಕಂಗನಾ ರನೌತ್) ಹೋಲಿಕೆಯ ನಂತರ……ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ವಾಸ ಮಾಡುವುದಕ್ಕೆ ಆಕೆಗೆ ಯಾವುದೇ ಅಧಿಕಾರವಿಲ್ಲ.’’ ಎಂದು ದೇಶ್ಮುಖ್ ಹೇಳಿದ್ದಾರೆ.