ಎಲ್ಲೆಡೆ ವಾತಾವರಣ ಕಲುಷಿತಗೊಳ್ಳುತ್ತಿದೆ. ಹಾಗಾಗಿ ಅಲರ್ಜಿ ಸಮಸ್ಯೆ ಕಾಮನ್ ಆಗಿದೆ. ಧೂಳಿನ ಕಣಗಳು ಹೆಚ್ಚಾಗಿ ಉಂಟಾಗುವ ಅಲರ್ಜಿ ಈಗೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಮನೆಯಲ್ಲಿ ಕೂಡಾ ಕೀಟಗಳಿಂದ, ಫಂಗಸ್ನಿಂದ ಅಪಾಯಕಾರಿ ಧೂಳು ಹೊಸ ಹೊಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ. ಇದಕ್ಕೆ ಸದ್ಯಕ್ಕೆ ಯಾವ ಪರಿಹಾರವೂ ಇಲ್ಲವಾದರೂ ನಾವು ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳುವುದೇ ಪರಿಹಾರ ಮಾರ್ಗ ಎನ್ನುವುದನ್ನು ನಾವು ನಂಬಲೇಬೇಕು. ಸಮಸ್ಯೆ ಬರದಂತೆ ತಡೆಯುವುದು ಉತ್ತಮ ಮಾರ್ಗವಾದರೂ, ಬಂದ ನಂತರ ಏನು ಮಾಡಬೇಕು ಅನ್ನೋದನ್ನು ಒಮ್ಮೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.
ಜೇನುತುಪ್ಪ:
ಆ್ಯಪಲ್ ಸಿಡರ್ ವಿನಿಗರ್:
ಅರಿಶಿನ:
ಅಲೋವೆರಾ:
ಅಲೋವೆರಾದಲ್ಲಿ ನೈಸರ್ಗಿಕ ರೋಗ ನಿರೋಧಕ ಹಾಗೂ ಉರಿಯೂತ ಶಮನ ಮಾಡುವ ಅಂಶವನ್ನು ಹೊಂದಿರುವುದರಿಂದ ಇದು ಅಲರ್ಜಿಗೆ ಅತ್ಯುಪಕಾರಿ ಮನೆಮದ್ದು. ನಿತ್ಯ ಎರಡು ಹೊತ್ತು ಕಾಲು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅಲರ್ಜಿ ಬರುವುದನ್ನು ತಡೆಗಟ್ಟುತ್ತದೆ ಅಲ್ಲದೆ, ಅಲರ್ಜಿ ಉಂಟಾದಾಗ ತ್ವಚೆ ಊದುವುದು ಅಥವಾ ನೋವನ್ನು ಸಹ ನಿವಾರಿಸುತ್ತದೆ.
ವಿಟಮಿನ್ ಸಿ:
ವಿಟಮಿನ್ ಸಿ ಹೆಚ್ಚು ಪ್ರಖ್ಯಾತಿ ಪಡೆದಿರುವುದೇ ರೋಗನಿರೋಧಕ ಶಕ್ತಿಯಿಂದಾಗಿ. ಇನ್ನು ಕಾಲಮಾನದ ಅಲರ್ಜಿ ಅಥವಾ ಧೂಳಿನ ಸಮಸ್ಯೆ ಉಂಟಾದರಂತೂ ವಿಟಮಿನ್ ಸಿ ಪೋಷಕಾಂಶ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತದೆ. ನಿತ್ಯ ಅದಾಂಜು 500 ಮಿಲಿ ಗ್ರಾಂನಿಂದ 1000 ಮಿಲಿ ಗ್ರಾಮ್‌ನಷ್ಟು ಸೇವಿಸಿದರೆ ಯಾವುದೇ ಸಂಶಯ ಇಲ್ಲದೇ ನಿಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೇ ಅಲರ್ಜಿಗಳಿಂದ ದೇಹವನ್ನು ರಕ್ಷಿಸುತ್ತದೆ.
ಪುದೀನ ಎಲೆ:
ತುಪ್ಪ:
ಅಲರ್ಜಿಯಿಂದಾಗಿ ನಿಮಗೆ ನಿರಂತರವಾಗಿ ಸೀನುವ ಸಮಸ್ಯೆ ಎದುರಾಗಿದ್ದರೆ ತುಪ್ಪ ಬಳಸಿ. ಕಾಲು ಚಮಚ ತುಪ್ಪವನ್ನು ಹಾಗೇ ಅಥವಾ ರುಚಿಗಾಗಿ ಬೆಲ್ಲವನ್ನು ಸೇರಿಸಿ ತಿನ್ನುವ ಮೂಲಕ ಸೀನುವ ಸಮಸ್ಯೆ ತಕ್ಷಣವೇ ನಿವಾರಣೆಯಾಗುತ್ತದೆ. ತುಪ್ಪವು ನಿಮ್ಮ ಮೂಗನ್ನು ಬೆಚ್ಚಗಿರುತ್ತದೆ ಹಾಗೂ ಸತತ ಸೀನನ್ನು ತಡೆಯುತ್ತದೆ. ತುಪ್ಪವನ್ನು ಧೂಳಿನ ಅಲರ್ಜಿಗೆ ಅತ್ಯಂತ ತುರ್ತು ಶಮನಕಾರಿ ಮನೆಮದ್ದಾಗಿ ಹೆಚ್ಚು ಬಳಸುತ್ತಾರೆ.
ಡ್ರಸೀನಾ:
ಮನೆಯಲ್ಲಿ ಗಿಡಗಳನ್ನು ಬೆಳಸುವುದು ಬಹಳ ಸಹಕಾರಿಯಾದರೂ ಕೆಲವು ಸಸ್ಯಗಳು ಅಲರ್ಜಿಯನ್ನು ಹೆಚ್ಚು ಮಾಡುತ್ತದೆ ಕೆಲವು ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಡ್ರಸೀನಾ ಎಂಬ ಅಲಂಕಾರಿಕ ಸಸ್ಯ ಅಲರ್ಜಿಗಳನ್ನು ಸೆಳೆಯುವಂಥ ಕೆಲಸವನ್ನು ಮಾಡುತ್ತದೆ. ಅಲ್ಲದೇ, ಬ್ಯಾಂಬೂ, ಲೇಡಿ ಪಾಮ್ ಗಿಡಗಳು ಕೀಟಗಳನ್ನು ಕೊಲ್ಲುವಲ್ಲಿ ಹಾಗೂ ಗಾಳಿಯನ್ನು ಶುದ್ಧವಾಗಿಡಲು ಅತ್ಯುತ್ತಮ ಮನೆಯೊಳಗಿಡಬಹುದಾದ ಗಿಡವಾಗಿದೆ.
Published On - 9:00 pm, Mon, 27 January 20