Lewis Hamilton: ‘ಒಳ್ಳೆಯದಾಗಲಿ’: 7 ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ

|

Updated on: Mar 02, 2024 | 4:04 PM

Lewis Hamilton: ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ ಹಾಗೂ ಮರ್ಸಿಡೀಸ್‌ ತಂಡದ ಲೂಯಿಸ್ ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Lewis Hamilton: ‘ಒಳ್ಳೆಯದಾಗಲಿ’: 7 ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ
ಲೂಯಿಸ್ ಹ್ಯಾಮಿಲ್ಟನ್‌
Follow us on

ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ (Formula 1 Champion ) ಲೂಯಿಸ್ ಹ್ಯಾಮಿಲ್ಟನ್‌ (Lewis Hamilton) ಅವರ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 35ರ ಹರೆಯದ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿಯಾಗಿರುವ ಯುವತಿಯೊಬ್ಬರು ಗುಡ್​ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಫ್ಲಕಾರ್ಡ್​ವೊಂದನ್ನು ಹ್ಯಾಮಿಲ್ಟನ್​ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು, ಈ ಪದವನ್ನು ಹ್ಯಾಮಿಲ್ಟನ್ ಬಾಯಿಯಿಂದ ಹೇಳಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.

ವಿಡಿಯೋದಲ್ಲಿ ಇರುವುದೇನು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ‘def not sxchidxnxnd’ ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯಾವುದೋ ಕಟ್ಟಡದಿಂದ ಹೊರಬರುತ್ತಿರುವ ಲೂಯಿಸ್ ಹ್ಯಾಮಿಲ್ಟನ್​ರನ್ನು ಅಡ್ಡಗಟ್ಟಿರುವ ಯುವತಿ, ಗುಡ್​ ಲಕ್ ಎಂಬ ಪದವನ್ನು 44 ಭಾಷೆಗಳಲ್ಲಿ ಬರೆಯಲಾಗಿರುವ ಫ್ಲಕಾರ್ಡ್ ಅನ್ನು ಹ್ಯಾಮಿಲ್ಟನ್​ಗೆ ತೋರಿಸುತ್ತಾಳೆ. ಇದನ್ನು ನೋಡಿದ ಹ್ಯಾಮಿಲ್ಟನ್ ಆ ಫ್ಲಕಾರ್ಡ್ ಫೋಟೋವನ್ನು ತಮ್ಮ ಮೊಬೈಲ್​ನಿಂದ ಸೆರೆ ಹಿಡಿದುಕೊಳ್ಳುತ್ತಾರೆ.

ಅಲ್ಲದೆ ವಿವಿದ ಭಾಷೆಗಳಲ್ಲಿ ಬರೆದಿರುವ ಆ ಪದವನ್ನು ಓದಲು ಆರಂಭಿಸುತ್ತಾರೆ. ಈ ವೇಳೆ ಕನ್ನಡದಲ್ಲಿ ಬರೆದಿರುವ ಪದದ ಬಗ್ಗೆ ಹೇಳುವ ಯುವತಿ ಇದು ಕನ್ನಡ ಭಾಷೆ, ಇಲ್ಲಿ ‘ಒಳ್ಳೆಯದಾಗಲಿ’ ಎಂದು ಬರೆಯಲಾಗಿದೆ ಎಂದು ಹೇಳುತ್ತಾ ಅದರ ಅರ್ಥವನ್ನು ಆಂಗ್ಲ ಭಾಷೆಯಲ್ಲಿ ಹ್ಯಾಮಿಲ್ಟನ್​ಗೆ ವಿವರಿಸಿದ್ದಾಳೆ. ನಂತರ ಹ್ಯಾಮಿಲ್ಟನ್ ಬಾಯಿಯಲ್ಲಿ ಒಳ್ಳೆಯದಾಗಲಿ ಪದವನ್ನು ಹೇಳಿಸಿದ್ದಾಳೆ. ಒಂದೆರಡು ಬಾರಿ ಈ ಪದವನ್ನು ಹೇಳಲು ಕಷ್ಟ ಪಟ್ಟ ಹ್ಯಾಮಿಲ್ಟನ್, ಕೊನಗೂ ಒಳ್ಳೆಯದಾಗಲಿ ಪದವನ್ನು ಉಚ್ಚರಿಸಿ ಇದು ಕನ್ನಡದಲ್ಲಿ ನನ್ನ ಮೊದಲ ಪದ ಎಂದು ಹೇಳುತ್ತಾ ಅಲ್ಲಿಂದ ತೆರಳಿದ್ದಾರೆ.

ಯಶ್, ಹ್ಯಾಮಿಲ್ಟನ್ ಭೇಟಿ

ಕೆಜಿಎಫ್ 2 ಚಿತ್ರ ರಿಲೀಸ್ ಆಗಿ ಯಶಸ್ವಿಯಾದ ಬಳಿಕ ಅಮೇರಿಕಾ ಪ್ರವಾಸ ಮಾಡಿದ್ದ ರಾಕಿಂಗ್ ಸ್ಟಾರ್, ಎಫ್​1 ರೇಸಿಂಗ್ ಲೆಜೆಂಡ್ ಲೇವಿಸ್ ಹ್ಯಾಮಿಲ್ಟನ್​ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ಇವರಿಬ್ಬರು ಒಟ್ಟಿಗೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ವೈರಲ್ ಕೂಡ ಆಗಿತ್ತು. ಈ ಮೂಲಕ ಯಶ್ ಮುಂದಿನ ಚಿತ್ರದಲ್ಲಿ ರೇಸಿಂಗ್ ಕೂಡ ಇರಬಹುದು ಎಂದು ಎಲ್ಲರೂ ಊಹಿಸಲಾರಂಭಿಸಿದ್ದರು. ಆದರೆ ಆ ನಂತರ ಈ ಊಹಪೋಹಗಳೆಲ್ಲ ಸುಳ್ಳಾಗಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sat, 2 March 24