One Day Cup: ಚಾಂಪಿಯನ್ ಪಟ್ಟ ಅಲಂಕರಿಸಿದ ಗ್ಲಾಮೋರ್ಗನ್

|

Updated on: Sep 24, 2024 | 7:40 AM

Glamorgan vs Somerset: ಒನ್ ಡೇ ಕಪ್ ಎಂಬುದು ಇಂಗ್ಲೆಂಡ್​ನಲ್ಲಿ ನಡೆಯುವ ಏಕದಿನ ಟೂರ್ನಿ. ಆದರೆ ಈ ಬಾರಿಯ ಒನ್​ ಡೇ ಕಪ್ ಫೈನಲ್ ಪಂದ್ಯವು ಟಿ20 ಮಾದರಿಯಲ್ಲಿ ನಡೆದಿದ್ದು ವಿಶೇಷ. ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯವು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಮೀಸಲು ದಿನದಾಟದಲ್ಲಿ 20 ಓವರ್​ಗಳ ಪಂದ್ಯವನ್ನು ಆಯೋಜಿಸಲಾಗಿದೆ.

One Day Cup: ಚಾಂಪಿಯನ್ ಪಟ್ಟ ಅಲಂಕರಿಸಿದ ಗ್ಲಾಮೋರ್ಗನ್
Glamorgan
Follow us on

ಇಂಗ್ಲೆಂಡ್‌ನಲ್ಲಿ ನಡೆದ ಒನ್ ಡೇ ಕಪ್ ಟೂರ್ನಿಯಲ್ಲಿ ಗ್ಲಾಮೋರ್ಗನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೋಮರ್​ಸೆಟ್ ಮತ್ತು ಗ್ಲಾಮೋರ್ಗನ್ ತಂಡಗಳು ಮುಖಾಮುಖಿಯಾಗಿದ್ದವು. ಅದರಂತೆ ಟಾಸ್ ಗೆದ್ದ ಸೋಮರ್ ಸೆಟ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಮೊದಲು ಬ್ಯಾಟ್ ಮಾಡಿದ ಗ್ಲಾಮೋರ್ಗನ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಕಿರನ್ ಕಾರ್ಲ್ಸನ್ (1) ಬೇಗನೆ ಔಟಾದರೆ, ವಿಲಿಯಂ ಸ್ಮೇಲ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಥಾಮ್ಸನ್ ಬೆವೆನ್ ಶೂನ್ಯಕ್ಕೆ ಔಟಾದರು.

ಈ ಹಂತದಲ್ಲಿ ಕಣಕ್ಕಿಳಿದ ಸಾಮ್ ನಾರ್ಥಿಸ್ಟ್ 49 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ ಗಳೊಂದಿಗೆ 63 ರನ್ ಬಾರಿಸಿದರು. ಇನ್ನು ಬಿಲ್ಲಿ ರೂಟ್ 39 ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ಗ್ಲಾಮೋರ್ಗನ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.

188 ರನ್​ಗಳ ಟಾರ್ಗೆಟ್:

188 ರನ್ ಗಳ ಗುರಿ ಪಡೆದ ಸೋಮರ್ ಸೆಟ್ ತಂಡಕ್ಕೆ ಆ್ಯಂಡ್ರೂ ಉಮೀಡ್ (45) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸೀನ್ ಡಿಕ್ಸನ್ 20 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 44 ರನ್ ಚಚ್ಚಿದರು.

ಪರಿಣಾಮ ಕೊನೆಯ ಓವರ್​ನಲ್ಲಿ ಸೋಮರ್​ಸೆಟ್ ತಂಡಕ್ಕೆ ಗೆಲ್ಲಲು 22 ರನ್​ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್​ ಎಸೆದ ಡೇನಿಯಲ್ ಕೇವಲ 7 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ ಗ್ಲಾಮೋರ್ಗನ್ ತಂಡವು 15 ರನ್​ಗಳ  ಜಯ ಸಾಧಿಸಿತು.

ಸೋಮರ್​ಸೆಟ್ ಪ್ಲೇಯಿಂಗ್ 11: ಜಾರ್ಜ್ ಥಾಮಸ್ , ಆಂಡ್ರ್ಯೂ ಉಮೀಡ್ , ಲೆವಿಸ್ ಗೋಲ್ಡ್ಸ್ವರ್ತಿ , ಜೇಮ್ಸ್ ರೆವ್ (ವಿಕೆಟ್ ಕೀಪತರ್) , ಸೀನ್ ಡಿಕ್ಸನ್ (ನಾಯಕ) , ಆರ್ಚೀ ವಾಘನ್ , ಬೆನ್ ಗ್ರೀನ್ , ಕೇಸಿ ಆಲ್ಡ್ರಿಡ್ಜ್ , ಜೋಶ್ ಡೇವಿ , ಆಲ್ಫಿ ಓಗ್ಬೋರ್ನ್ , ಜ್ಯಾಕ್ ಲೀಚ್.

ಇದನ್ನೂ ಓದಿ: IPL 2025: CSK ತಂಡ ಉಳಿಸಿಕೊಳ್ಳುವ ಐವರು ಆಟಗಾರರು ಇವರಂತೆ..!

ಗ್ಲಾಮೋರ್ಗನ್ ಪ್ಲೇಯಿಂಗ್ 11: ವಿಲಿಯಂ ಸ್ಮೇಲ್ (ವಿಕೆಟ್ ಕೀಪರ್) , ಕಿರನ್ ಕಾರ್ಲ್ಸನ್ (ನಾಯಕ) , ಬಿಲ್ಲಿ ರೂಟ್ , ಕಾಲಿನ್ ಇಂಗ್ರಾಮ್ , ಥಾಮಸ್ ಬೆವನ್ , ಸ್ಯಾಮ್ ನಾರ್ಥಿಸ್ಟ್ , ಬೆನ್ ಕೆಲ್ಲವೇ , ಡೇನಿಯಲ್ ಡೌತ್ವೈಟ್ , ಟಿಮ್ ವ್ಯಾನ್ ಡೆರ್ ಗುಗ್ಟನ್ , ಆಂಡಿ ಗೊರ್ವಿನ್ , ಜೇಮೀ ಮೆಕ್ಲ್ರಾಯ್.