Formula Srinagar: ಮಾ.17 ರಂದು ಶ್ರೀನಗರದಲ್ಲಿ ಫಾರ್ಮುಲಾ-4 ಕಾರ್ ರೇಸ್ ಶೋ; ಉಚಿತ ಪ್ರವೇಶ

|

Updated on: Mar 15, 2024 | 6:49 PM

Formula Srinagar: ಇದೇ ಮೊದಲ ಬಾರಿಗೆ ಲಲಿತ್ ಘಾಟ್‌ನಿಂದ ನೆಹರು ಪಾರ್ಕ್‌ವರೆಗೆ ಫಾರ್ಮುಲಾ-4 ಕಾರ್ ರೇಸ್ ಶೋ ಕಣಿವೆ ನಾಡು ಶ್ರೀನಗರದಲ್ಲಿ ನಡೆಯಲಿದೆ. ಇದರಲ್ಲಿ ಹೆಸರಾಂತ ಫಾರ್ಮುಲಾ 4 ಕಾರ್ ರೇಸ್ ಚಾಲಕರು ಭಾಗವಹಿಸುತ್ತಿದ್ದು, ಸುಮಾರು 4 ಗಂಟೆಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

Formula Srinagar: ಮಾ.17 ರಂದು ಶ್ರೀನಗರದಲ್ಲಿ ಫಾರ್ಮುಲಾ-4 ಕಾರ್ ರೇಸ್ ಶೋ; ಉಚಿತ ಪ್ರವೇಶ
ಫಾರ್ಮುಲಾ-4 ಕಾರ್ ರೇಸ್ ಶೋ
Follow us on

ಇದೇ ಮೊದಲ ಬಾರಿಗೆ ಲಲಿತ್ ಘಾಟ್‌ನಿಂದ ನೆಹರು ಪಾರ್ಕ್‌ವರೆಗೆ ಫಾರ್ಮುಲಾ-4 (Formula-4) ಕಾರ್ ರೇಸ್ ಶೋ ಕಣಿವೆ ನಾಡು ಶ್ರೀನಗರದಲ್ಲಿ ನಡೆಯಲಿದೆ. ಇದರಲ್ಲಿ ಹೆಸರಾಂತ ಫಾರ್ಮುಲಾ 4 ಕಾರ್ ರೇಸ್ ಚಾಲಕರು ಭಾಗವಹಿಸುತ್ತಿದ್ದು, ಸುಮಾರು 4 ಗಂಟೆಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ‘ಫಾರ್ಮುಲಾ ಶ್ರೀನಗರ’ (Formula Srinagar) ಎಂಬ ಹೆಸರಿನ ಈವೆಂಟ್‌ನಲ್ಲಿ ಲೀಗ್‌ನ ಪ್ರೀಮಿಯಂ ಎಫ್4 ಕಾರುಗಳು ಕಾಣಿಸಿಕೊಳ್ಳಲಿದ್ದು, ಮಾರ್ಚ್ 17 ರಂದು ದಾಲ್ ಲೇಕ್ ರೋಡ್‌ನಲ್ಲಿ (Dal Lake Road) ಈ ಸ್ಪರ್ಧೆ ನಡೆಯಲಿದೆ. ಈ ಈವೆಂಟ್​ ಅನ್ನು ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಯಾವುದೇ ಟಿಕೆಟ್ ಖರೀದಿಸುವ ಅವಶ್ಯಕತೆ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ಸಾಧ್ಯತೆಗಳಿವೆ.

1.7 ಕಿಮೀ ಮಾರ್ಗದಲ್ಲಿ ಸ್ಪರ್ಧೆ

ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ರವರೆಗೆ 1.7 ಕಿಮೀ ಮಾರ್ಗದಲ್ಲಿ ಸ್ಪರ್ಧೆ ನಡೆಯಲ್ಲಿದೆ. ಇನ್ನು ಇಂಡಿಯನ್ ರೇಸಿಂಗ್ ಲೀಗ್ ಈ ಈವೆಂಟ್ ಆಯೋಜಿಸುತ್ತಿದ್ದು, ಭಾರತದಲ್ಲಿ ಮೋಟಾರು ಕ್ರೀಡೆಗಳಲ್ಲಿ ಕ್ರಾಂತಿಯನ್ನುಂಟುಮಾಡುವ ಗುರಿ, ಹಾಗೂ ಮಹತ್ವಾಕಾಂಕ್ಷಿ ರೇಸರ್‌ಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚು ಅಗತ್ಯವಿರುವ ವೇದಿಕೆಯನ್ನು ಒದಗಿಸುವುದು ಇದರ ಗುರಿಯಾಗಿದೆ.

Lewis Hamilton: ‘ಒಳ್ಳೆಯದಾಗಲಿ’: 7 ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ

ಈಗಾಗಲೇ ಇಂಡಿಯನ್ ರೇಸಿಂಗ್ ಲೀಗ್, 2022 ಮತ್ತು 2023 ರಲ್ಲಿ 2 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಈವೆಂಟ್‌ನಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸುತ್ತಿದ್ದು, ಸುಂದರವಾದ ದಾಲ್ ಲೇಕ್ ರಸ್ತೆಯ ತಿರುವುಗಳು ಮತ್ತು ಬೆಟ್ಟಗಳಲ್ಲಿ ಸೂಪರ್‌ಫಾಸ್ಟ್ ಕಾರ್ ರೇಸಿಂಗ್ ಅನ್ನು ಪ್ರದರ್ಶಿಸುವ ಮೂಲಕ ಸ್ಥಳೀಯರನ್ನು ಆಕರ್ಷಿಸುವ ಗುರಿಯನ್ನು ಐಆರ್‌ಎಲ್ ಹೊಂದಿದೆ.

ಪ್ರಮುಖ ಸಾಧನೆಗಳಲ್ಲಿ ಒಂದು

ಇನ್ನು ಈ ಈವೆಂಟ್​ನ ಭದ್ರತೆ ಹಾಗೂ ತಯಾರಿಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಕಾಶ್ಮೀರ ವಿಭಾಗೀಯ ಆಯುಕ್ತ (ಡಿವಿ ಕಾಂ) ವಿಜಯ್ ಕುಮಾರ್ ಬಿಧುರಿ ಅವರು, ‘ಈ ರೀತಿಯ ಮೊದಲ ಕಾರ್ಯಕ್ರಮವು ಯುವಜನರಿಗೆ ಪ್ರಮುಖ ಆಕರ್ಷಣೆಯಾಗಲಿದೆ ಮತ್ತು ಫಾರ್ಮುಲಾ-4 ಕ್ರೀಡೆಯ ಬಗ್ಗೆ ಅವರಲ್ಲಿ ಉತ್ಸಾಹವನ್ನು ತುಂಬುತ್ತದೆ. ಶ್ರೀನಗರದಲ್ಲಿ ಫಾರ್ಮುಲಾ-4 ಕಾರ್ ರೇಸ್ ಆತಿಥ್ಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದ್ದು, ಕಣಿವೆ ನಾಡಿನ ಉತ್ಸಾಹಿಗಳಿಗೆ ಹೊಸ ವೃತ್ತಿಜೀವನದ ಆಯ್ಕೆಯ ಪ್ರಾರಂಭವಾಗಿದೆ.

ಈ ‘ಅಡ್ರಿನಾಲಿನ್ ರಶಿಂಗ್’ ಕಾರ್ ರೇಸ್ ಜನರಿಗೆ ಬಹಳ ರೋಮಾಂಚನಕಾರಿಯಾಗಿರಲಿದ್ದು, ಇಂತಹ ಪ್ರದರ್ಶನಗಳು ಕಾಶ್ಮೀರದ ಸಾಹಸ ಪ್ರವಾಸೋದ್ಯಮವನ್ನು ಸಹ ಹೆಚ್ಚಿಸುತ್ತವೆ ಎಂದರು. ಇನ್ನು ಈವೆಂಟ್​ನ ಭದ್ರತೆ ಹಾಗೂ ಮುನ್ನೇಚ್ಚರಿಕೆಯ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಮಾರ್ಗದ ಎರಡೂ ತುದಿಗಳಲ್ಲಿ ಕೆಂಪು ಬ್ಯಾರಿಕೇಡ್‌ಗಳನ್ನು ಒಳಗೊಂಡಂತೆ ಸಿ-ಟೈಪ್ 2-ಟೈರ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಸೂಚನೆ ನೀಡಿದ್ದೇನೆ. ಜೊತೆಗೆ ಎರಡು ಕ್ರಿಟಿಕಲ್ ಕೇರ್ ಆಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕಗಳನ್ನು ಹೊಂದಿರುವ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ. ಇದಲ್ಲದೆ, ಈವೆಂಟ್‌ಗೆ ಸರಿಯಾದ ಭದ್ರತಾ ವ್ಯವಸ್ಥೆಗಳು ಮತ್ತು ಡ್ರೋನ್ ಅನುಮತಿ ಸೇರಿದಂತೆ ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಇತರ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ