ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ

|

Updated on: Aug 16, 2020 | 2:44 AM

ಭಾರತದ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಈ ಕುರಿತು ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 2004ರಂಲ್ಲಿ ಬಾಂಗ್ಲಾದೇಶದ ವಿರುದ್ದ ಚತ್ತೋರ್‌ ಗ್ರಾಮ್‌ನಲ್ಲಿ ಅಂಾತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ, 90 ಟೆಸ್ಟ್‌, 350 ಏಕದಿನ ಪಂದ್ಯಗಳು ಮತ್ತು 98 ಟಿ20 ಪಂದ್ಯಗಳನ್ನಾಡಿದ್ದಾರೆ. ಧೋನಿ ಆಡಿರುವ ಈ 90 ಟೆಸ್ಟ್‌ಗಳಲ್ಲಿ ಆರು ಶತಕ ಸೇರಿ 4876ರನ್‌, 350 ಏಕದಿನ ಪಂದ್ಯಗಳಲ್ಲಿ 10 ಶತಕ ಸೇರಿ 10773ರನ್‌ […]

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ
ಎಂ ಎಸ್ ಧೋನಿ
Follow us on

ಭಾರತದ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಈ ಕುರಿತು ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

2004ರಂಲ್ಲಿ ಬಾಂಗ್ಲಾದೇಶದ ವಿರುದ್ದ ಚತ್ತೋರ್‌ ಗ್ರಾಮ್‌ನಲ್ಲಿ ಅಂಾತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ, 90 ಟೆಸ್ಟ್‌, 350 ಏಕದಿನ ಪಂದ್ಯಗಳು ಮತ್ತು 98 ಟಿ20 ಪಂದ್ಯಗಳನ್ನಾಡಿದ್ದಾರೆ. ಧೋನಿ ಆಡಿರುವ ಈ 90 ಟೆಸ್ಟ್‌ಗಳಲ್ಲಿ ಆರು ಶತಕ ಸೇರಿ 4876ರನ್‌, 350 ಏಕದಿನ ಪಂದ್ಯಗಳಲ್ಲಿ 10 ಶತಕ ಸೇರಿ 10773ರನ್‌ ಮತ್ತು 98 ಟಿ20 ಪಂದ್ಯಗಳಲ್ಲಿ 1,617ರನ್‌ ಗಳಿಸಿದ್ದಾರೆ.


2007ರಲ್ಲಿ ಟಿ20ಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಧೋನಿ, 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದಾರೆ. ಟೆಸ್ಟ್‌ನಲ್ಲೂ ಭಾರತ ನಂಬರ್‌ ಒನ್‌ ಱಂಕ್‌ ಆದಾಗ ಧೋನಿಯೇ ನಾಯಕರಾಗಿದ್ದರು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುವ ಧೋನಿ ನಾಯಕನಾಗಿ ಮೂರು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿದ್ದಾರೆ. ಜಾರ್ಖಂಡ್‌ ಮೂಲದ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೀವೃತ್ತಿಯಾದರೂ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡಲಿದ್ದಾರೆ.

Published On - 8:34 pm, Sat, 15 August 20