APPLE Store: ದೇಶದ ಮೊದಲ ಮುಂಬೈ ಸ್ಟೋರ್​​ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಚಾಲನೆ

ಕಿರಣ್​ ಐಜಿ

Updated on: Apr 21, 2023 | 9:09 AM

ಏಪ್ರಿಲ್ 20, ಗುರುವಾರದಂದು ದೆಹಲಿಯ ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್​ನಲ್ಲಿ ಇನ್ನೊಂದು ಆ್ಯಪಲ್ ಸ್ಟೋರ್ ಉದ್ಘಾಟನೆಯಾಗುತ್ತಿದೆ.

ಮುಂಬೈನಲ್ಲಿ ಭಾರತದ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆಯಾಗಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಮೂರು ದಿನಗಳ ಕಾಲ ಭಾರತದಲ್ಲಿದ್ದುಕೊಂಡು, ಎರಡು ಆ್ಯಪಲ್ ಸ್ಟೋರ್​ಗಳ ಉದ್ಘಾಟನೆ ಮಾಡುತ್ತಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಸ್ಥಾಪಿಸಲಾಗಿರುವ ಆ್ಯಪಲ್ ಬಿಕೆಸಿ ಸ್ಟೋರ್ ಈಗಾಗಲೇ ಜನರನ್ನು ಸೆಳೆಯುತ್ತಿದೆ. ಏಪ್ರಿಲ್ 20, ಗುರುವಾರದಂದು ದೆಹಲಿಯ ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್​ನಲ್ಲಿ ಇನ್ನೊಂದು ಆ್ಯಪಲ್ ಸ್ಟೋರ್ ಉದ್ಘಾಟನೆಯಾಗುತ್ತಿದೆ. ಭಾರತದಲ್ಲಿ ಸ್ಯಾಮ್ಸಂಗ್, ಒಪ್ಪೋ ಇತ್ಯಾದಿ ಅನೇಕ ಸ್ಮಾರ್ಟ್​ಫೋನ್ ಕಂಪನಿಗಳ ಲೆಕ್ಕವಿಲ್ಲದಷ್ಟು ಮೊಬೈಲ್ ಶೋರೂಮ್​ಗಳಿವೆ. ಅಂಥದ್ದರಲ್ಲಿ ಆ್ಯಪಲ್​ನ ಮೊಬೈಲ್ ಶೋರೂಮ್​ಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಕಂಡುಬಂದಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.