Fastrack Limitless FS1: ಟ್ರೆಂಡಿಂಗ್ ಮತ್ತು ಸ್ಟೈಲಿಶ್ ವಿನ್ಯಾಸದಲ್ಲಿ ಬರುತ್ತಿದೆ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Apr 12, 2023 | 8:30 AM

ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲಿಮಿಟ್​ಲೆಸ್ ಎಫ್​ಎಸ್​1 ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ. ಫಾಸ್ಟ್​​ಟ್ರ್ಯಾಕ್ ಲಿಮಿಟ್​ಲೆಸ್ ಎಫ್​ಎಸ್​1 ವಾಚ್​ 1.95 ಇಂಚಿನ ಡಿಸ್​ಪ್ಲೇ ಹೊಂದಿದೆ.

ಇದು ಸ್ಮಾರ್ಟ್​ ಯುಗ. ದಿನವೂ ಹೊಸ ಹೊಸ ಸ್ಮಾರ್ಟ್​ ಗ್ಯಾಜೆಟ್​ಗಳು ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಸ್ಮಾರ್ಟ್​ವಾಚ್​ನಿಂದ ತೊಡಗಿ, ಸ್ಮಾರ್ಟ್​ಫೋನ್​ ವರೆಗೆ ವಿವಿಧ ಬ್ರ್ಯಾಂಡ್​ಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಮಾದರಿಗಳನ್ನು ಪರಿಚಯಿಸುತ್ತವೆ. ಫಾಸ್ಟ್​​ಟ್ರ್ಯಾಕ್ ಕಂಪನಿ, ಲಿಮಿಟ್​ಲೆಸ್ ಹೆಸರಿನಲ್ಲಿ ಆಕರ್ಷಕ ವಿನ್ಯಾಸದ ಹೊಸ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. ಫಾಸ್ಟ್​​ಟ್ರ್ಯಾಕ್, ಲಿಮಿಟ್​ಲೆಸ್ ಎಫ್​ಎಸ್​1 ಬಿಡುಗಡೆಯಾಗಿದ್ದು, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೂತನ ಸ್ಮಾರ್ಟ್​ವಾಚ್ ವೈಶಿಷ್ಟ್ಯಗಳು, ತಾಂತ್ರಿಕ ವಿವರ ಇಲ್ಲಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲಿಮಿಟ್​ಲೆಸ್ ಎಫ್​ಎಸ್​1 ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ. ಫಾಸ್ಟ್​​ಟ್ರ್ಯಾಕ್ ಲಿಮಿಟ್​ಲೆಸ್ ಎಫ್​ಎಸ್​1 ವಾಚ್​ 1.95 ಇಂಚಿನ ಡಿಸ್​ಪ್ಲೇ ಹೊಂದಿದೆ. ಫಾಸ್ಟ್​​ಟ್ರ್ಯಾಕ್ ಸ್ಮಾರ್ಟ್​ವಾಚ್ ಮಾರುಕಟ್ಟೆಯಲ್ಲಿ ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣದಲ್ಲಿ ಲಭ್ಯವಿದೆ. ಅಮೆಜಾನ್ ಮೂಲಕ ಫಾಸ್ಟ್​​ಟ್ರ್ಯಾಕ್ ಲಿಮಿಟ್​ಲೆಸ್ ಎಫ್​ಎಸ್​1 ದೊರೆಯಲಿದ್ದು, 300mAh ಬ್ಯಾಟರಿ ಬೆಂಬಲ ಹೊಂದಿದೆ. ಭಾರತದಲ್ಲಿ ಲಿಮಿಟ್​ಲೆಸ್ ಎಫ್​ಎಸ್​1 ₹1,995 ದರ ಹೊಂದಿದ್ದು, ಹೃದಯ ಬಡಿತ ಮಾಪನ ಸಹಿತ ಹಲವು ಆರೋಗ್ಯ ಟ್ರ್ಯಾಕಿಂಗ್​ಗೆ ಸಹಾಯಕವಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.